HEALTH TIPS

ಮುಖ್ಯಮಂತ್ರಿ ರಾಜೀನಾಮೆ ನೀಡುಲು ಕೊನೆಯ ಅವಕಾಶ-ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ


           ತಿರುವನಂತಪುರ: ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ರಾಜೀನಾಮೆಗೆ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಮತ್ತೆ ಒತ್ತಾಯಿಸಿದ್ದಾರೆ. ಈ ಪ್ರಕರಣದ ತನಿಖೆಗಾಗಿ ಕೇರಳ ಎನ್ ಐ ಎ ಸಚಿವಾಲಯಕ್ಕೆ ಹೋಗುವುದು ನಾಚಿಕೆಗೇಡಿನ ಸಂಗತಿ ಎಂದು ಚೆನ್ನಿತ್ತಲ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
            ಎನ್ ಐ ಎ ಯಂತಹ ತನಿಖಾ ತಂಡವು ಮುಖ್ಯಮಂತ್ರಿಯವರ ಕಚೇರಿ ಅಥವಾ ರಾಜ್ಯ ಸೆಕ್ರೆಟರಿಯೇಟ್ ಗೆ ಪ್ರವೇಶಿಸಿದ ಇತಿಹಾಸ ಕೇರಳಕ್ಕೆ ಇಲ್ಲ. ಇದು ಕೇರಳದ 3.5 ಕೋಟಿ ಜನರಿಗೆ ಮಾಡಿದ ಅವಮಾನ. ಆದರೆ, ಇಂತಹ ಗಂಭೀರ ಘಟನೆಯ ಹೊರತಾಗಿಯೂ ಏನೂ ಆಗಿಲ್ಲ ಎಂಬಂತೆ ಸಿಎಂ ದಿನನಿತ್ಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದಾರೆ ಮತ್ತು ಸಿಎಂ ನಿಲುವು ಹಾಸ್ಯಾಸ್ಪದವಾಗಿದೆ ಎಂದು ಚೆನ್ನಿತ್ತಲ ಹೇಳಿದರು. ಚಿನ್ನದ ಕಳ್ಳಸಾಗಣೆ ವಿವಾದದ ಬಗ್ಗೆ ತನಗೆ ಏನೂ ತಿಳಿದಿಲ್ಲ ಎಂಬ ಮುಖ್ಯಮಂತ್ರಿ ನಿಲುವು ಕೇರಳದ ಜನರಿಗೆ ಅವರು ಎಸಗುವ ವಂಚನೆಯಾಗಿದೆ ಎಂದು ಚೆನ್ನಿತ್ತಲ ಹೇಳಿದರು.
           ರಾಜ್ಯದ ರಾಜಕೀಯ ಇತಿಹಾಸದಲ್ಲಿ ವಿಶಿಷ್ಟ  ಘಟನೆಗಳು ನಡೆದಿವೆ. ಆದರೆ ಇದನ್ನೆಲ್ಲ ವೈಭವೀಕರಿಸುವ ಮುಖ್ಯಮಂತ್ರಿಯ ನಿಲುವನ್ನು ನಾನು ಸ್ವೀಕರಿಸುವುದಿಲ್ಲ. ಮುಖ್ಯಮಂತ್ರಿಯನ್ನು ಪ್ರಶ್ನಿಸಿದರೆ ಮಾತ್ರ ಸತ್ಯ ಹೊರಬರಬಲ್ಲದು.  ಮುಖ್ಯಮಂತ್ರಿ ರಾಜೀನಾಮೆ ನೀಡಲು ಇದು ಕೊನೆಯ ಅವಕಾಶ ಎಂದು ಚೆನ್ನಿತ್ತಲ ಲೇವಡಿ ಮಾಡಿದರು.
         ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆಗಾಗಿ ತನಿಖಾ ತಂಡ ಸೆಕ್ರೆಟರಿಯೇಟ್ ತಲುಪಿದೆ ಎಂದು ಚೆನ್ನಿತ್ತಲ ವಿಶಾದ ವ್ಯಕ್ತಪಡಿಸಿದರು. ರಾಜ್ಯದ ಆಡಳಿತ ನಡೆಸುವ  ಎಲ್‍ಡಿಎಫ್ ಸರ್ಕಾರದ ಘಟಕ ಪಕ್ಷಗಳೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪಕ್ಷಗಳಿಗೆ ರಾಜ್ಯದ ಜನತೆಯೊಂದಿಗೆ ಜವಾಬ್ದಾರಿಯುತ ಹೊಣೆಗಾರಿಗೆ ಇದ್ದಲ್ಲಿ ಅದಕ್ಕೆ ಬದ್ದರಾಗಿರಬೇಕು ಎಂದು ರಮೇಶ್ ಚೆನ್ನಿತ್ತಲ ತಿಳಿಸಿದರು. ಈ ಪ್ರಕರಣದ ಆರೋಪಿಗಳನ್ನು ಆರಂಭದಿಂದಲೇ ರಕ್ಷಿಸಲು ಸಿಎಂ ಪ್ರಯತ್ನಿಸುತ್ತಿದ್ದಾರೆ ಮತ್ತು ಗಂಭೀರ ಆರೋಪಗಳ ನಡುವೆಯೂ ಗೃಹ ಇಲಾಖೆ ಆರೋಪಿಗಳನ್ನು ರಕ್ಷಿಸುತ್ತಿದೆ ಎಂದು ಚೆನ್ನಿತ್ತಲ ಹೇಳಿದರು. ಈ ಪ್ರಕರಣದಲ್ಲಿ ಆರೋಪಿಗಳಿಗೆ ಕೇರಳ ಪೆÇಲೀಸರು ಪ್ರಯಾಣ ಸೌಲಭ್ಯಗಳನ್ನು ಒದಗಿಸಿದ್ದು, ಮೊದಲಿನಿಂದಲೂ ನಿಷ್ಕ್ರಿಯ ಪೆÇಲೀಸರು ಸರ್ಕಾರದ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ  ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries