ಕಾಸರಗೋಡು: ಪರಿಶಿಷ್ಟ ಜಾತಿಗೆ ಸೇರಿರುವ ವಿದ್ಯಾರ್ಥಿಗಳ ಕಲಿಕೆಗೆ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ರಾಜ್ಯಸರಕಾರದ ನೀಡುತ್ತಿರುವ ಅತ್ಯುತ್ತಮ ಸೌಲಭ್ಯಗಳಲ್ಲಿ "ಕಲಿಕಾ ಕೊಠಡಿ"ಯೂ ಒಂದು.
ಪರಿಶಿಷ್ಟ ಜಾತಿ ಕುಟುಂಬಗಳಿಗೆ ಸೇರಿದ ಪ್ರೌಢಶಾಲೆಯಿಂದ ಪ್ಲಸ್ ಟು ವರೆಗಿನ ತರಗತಿಗಳ ವಿದ್ಯಾರ್ಥಿಗಳಿಗೆ ಅವರ ಮನೆಯಲ್ಲಿ ಕಲಿಕೆಗೆ ಸೌಲಭ್ಯ ಇಲ್ಲದೇ ಹೋದರೆ ಮನೆಗೆ ಸೇರಿ ಯಾ ಮನೆಯ ಮೇಲಂತಿಸ್ತಿನಲ್ಲಿ ಹೆಚ್ಚುವರಿ ಕೊಠಡಿಯೊಂದನ್ನು ನಿರ್ಮಿಸಿ ನೀಡುವ ಯೋಜನೆ ಇದಾಗಿದೆ. ಕಲಿಕೆಗೆ ಬೇಕಾದ ಎಲ್ಲ ಭೌತಿಕ ಸೌಲಭ್ಯದೊಂದಿಗೆ ಕೊಠಡಿ ಈ ನಿಟ್ಟಿನಲ್ಲಿ ನಿರ್ಮಾಣಗೊಳ್ಳುತ್ತದೆ. ಇದು ಕಾಸತಗೋಡು ಜಿಲ್ಲೆಯ ಈ ವಿಭಾಗದ ವಿದ್ಯಾರ್ಥಗಳಿಗೂ ಬೆಂಬಲ ನೀಡುತ್ತಿದೆ.
2016ರಿಂದ ಈ ವರೆಗೆ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಕಲಿಕಾ ಮಟ್ಟ ಸುಧಾರಿತ ಗೊಳಿಸುವ ನಿಟ್ಟಿನಲ್ಲಿ ರಚಿಸಿರುವ ಈ ಯೋಜನೆ ಪ್ರಕಾರ ಕಾಸರಗೋಡು ಜಿಲ್ಲೆಯಲ್ಲಿ 960 ಕಲಿಕಾ ಕೊಠಡಿಗಳನ್ನು ಮಂಜೂರು ಮಾಡಲಾಗಿದೆ ಎಂದು ಜಿಲ್ಲಾ ಪರಿಶಿಷ್ಟ ಜಾತಿ ಅಭೀವೃಧ್ಧಿ ಅಧಿಕಾರಿ ಮೀನಾರಾಣಿ ಎಸ್. ತಿಳಿಸಿದರು.
ಗಂಭೀರ ಸ್ವರೂಪದ ರೋಗಗಳಿಂದ ಬಳಲುತ್ತಿರುವ ಹೆತ್ತವರು ಇರುವ ಮನೆ, ಹೆಣ್ಣುಮಕ್ಕಳು ಮಾತ್ರ ಇರುವ ಕುಟುಂಬ , ವಿಧವೆ/ ವಿಧುರರು ಯಾಜಮಾನ್ಯ ವಹಿಸುವ ಸಂಸಾರ, ಆದಾಯ ಕಡಿಮೆಯಿರುವ ಕುಟುಂಬದ ವಿದ್ಯಾರ್ಥಿಗಳು, ಒಂದು ಮಲಗುವ ಕೋಣೆ ಮಾತ್ರ ಇರುವ ಮನೆಯಲ್ಲಿರುವ ವಿದ್ಯಾರ್ಥಿ ಮೊದಲಾದವರಿಗೆ ಈ ನಿಟ್ಟಿನಲ್ಲಿ ಆದ್ಯತೆ ನೀಡಲಾಗುತ್ತಿದೆ.
ಅರ್ಜಿದಾರರ ವಾರ್ಷಿಕ ಆದಾಯ ಒಂದು ಲಕ್ಷ ರೂ.ಗಿಂತ ಕಡಿಮೆ ಇರಬೇಕು. ಯೋಜನೆ ಪ್ರಕಾರ ಆಯ್ದ ಕುಟುಂಬಕ್ಕೆ ಆರ್ಥಿಕ ಸಹಾಯ ರೂಪದಲ್ಲಿ 2 ಲಕ್ಷ ರೂ. ಮಂಜೂರು ಮಾಡಲಾಗುತ್ತದೆ. ಈ ನಿಧಿ 4 ಕಂತುಗಳ ರೂಪದಲ್ಲಿ ಬ್ಯಾಂಕ್ ಖಾತೆಗೆ ಪಾವತಿಗೊಳ್ಳಲಿದೆ. ಈ ಪ್ರಕಾರ ನಿರ್ಮಿಸಲಾಗುವ ಕೊಠಡಿ ಕಾಂಕ್ರೀಟೀಕೃತ ಮೇಲ್ಪಾವಣಿ, ಟೈಲ್ಸ್ ಹೊದೆಸಿದ ನೆಲ, ಕಿಟಿಕಿ-ಬಾಗಿಲು, ಪುಸ್ತಕ ಇರಿಸಲು ಕಪಾಟು, ಲೈಟ್, ಫ್ಯಾನ್ ಇತ್ಯಾದಿ ಸೌಲಭ್ಯಗಳಿಂದ ಕೂಡಿರುವುದು.
ಯೋಜನೆ ತುರ್ತಾಗಿ ಜಾರಿಗೊಳಿಸಿ ಅರ್ಹರಾದ ಪರಿಶಿಷ್ಟ ಜಾತಿ ವಿಭಾಗದ ವಿದ್ಯಾರ್ಥಿಗಳಿಗೆ ತಲಪಿಸುವ ನಿಟ್ಟಿನ ಆರಂಭದ ಹಂತದ ಕ್ರಮಗಳು ಎಲ್ಲ ಬ್ಲೋಕ್ ಪರಿಶಿಷ್ಟ ಜಾತಿ ಕಚೇರಿಗಳಲ್ಲೂ ಆರಂಭಗೊಂಡಿವೆ. ಹೆಚ್ಚುವರಿಮಾಹಿತಿಗಾಗಿ ಆಯಾ ಗ್ರಾಮಪಂಚಾಯತ್ ನ ಪರಿಶಿಷ್ಟ ಜಾತಿ ಪ್ರಮೋಟರ್ ಗಳನ್ನು ಯಾ ಸಂಬಂಧಪಟ್ಟ ಬ್ಲೋಕ್ ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ಮೀನಾರಾಣಿ ಎಸ್. ತಿಳಿಸಿರುವರು.


