ಕಾಸರಗೋಡು: ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ಪರವನಡ್ಕದಲ್ಲಿ ಹೆಣ್ಣುಮಕ್ಕಳಿಗಾಗಿ ಚಟುವಟಿಕೆ ನಡೆಸುವ ಸರ್ಕಾರಿ ಮಾದರಿ ವಸತಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 2020-21ನೇ ಶೈಕ್ಷಣಿಕ ವರ್ಷದ ಪ್ಲಸ್ ವನ್ (ಸಯನ್ಸ್, ಕಾಮರ್ಸ್) ತರಗತಿ ಪ್ರವೇಶಾತಿಗಾಗಿ ಅರ್ಜಿ ಕೋರಲಾಗಿದೆ.
ಕೌಟುಂಬಿಕ ವಾರ್ಷಿಕ ಆದಾಯ ಒಂದುಲಕ್ಷ ರೂ.ಗಿಂತ ಕಡಿಮೆ ಇರುವ ಕುಟುಂಬದವರು ಅರ್ಜಿ ಸಲ್ಲಿಸಬಹುದು. ಒಟ್ಟು 50 ಸೀಟುಗಳು ಪ್ರತಿ ವಿಷಯದಲ್ಲಿರುವುದು. ಶೇ 70 ಪರಿಶಿಷ್ಟ ಪಂಗಡವರಿಗೆ, ಶೇ 20 ಪರಿಶಿಷ್ಟ ಜಾತಿಯವರಿಗೆ, ಶೇ 10 ಸಾರ್ವಜನಿಕ ವಿಭಾಗದವರಿಗೆ ಮೀಸಲಿರಿಸಲಾಗಿದೆ. ಜು.305 ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ಫಾರಂ ಜಿಲ್ಲಾ ಟ್ರೈಬಲ್ ಡೆವೆಲಪ್ ಮೆಂಟ್ ಆಫೀಸ್, ಜಿಲ್ಲೆಯ ವಿವಿಧ ಟ್ರೈಬಲ್ ಎಕ್ಸ್ ಟೆನ್ಶನ್ ಆಫೀಸ್ ಗಳು, ಶಾಲಾ ಕಚೇರಿಗಳು ಮೊದಲಾದೆಡೆ ಉಚಿತವಾಗಿ ಲಭ್ಯವಿದೆ. ಹೆಚ್ಚುವರಿ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 04994235210, 04994239969.


