ಕಾಸರಗೋಡು: ಜಿಲ್ಲಾ ಮೋಟಾರು ವಾಹನ ಇಲಾಖೆಯ ಕೋವಿಡ್ ನಿರ್ವಹಣೆಯ ವಿವರಗಳಿರುವ ವರದಿ ಸಂಗ್ರಹ 'ಓವರ್ ಟೇಕ್ - ಎ ರೈಡ್ ಓವರ್ ಕೋವಿಡ್ 19' ಕೃತಿಯನ್ನು ಗುರುವಾರ ಜಿಲ್ಲಾ ಕಾರ್ಯಾಲಯದಲ್ಲಿ ಬಿಡುಗಡೆಗೊಳಿಸಲಾಯಿತು.
ಆರ್ ಟಿ ಒ ಇ.ಮೋಹನ್ ದಾಸ್ ಅವರಿಂದ ಜಿಲ್ಲಾಧಿಕಾರಿ ಡಾ.ಡಿ.ಡಿ.ಸಜಿತ್ ಬಾಬು ಅವರು ವರದಿ ಸ್ವೀಕರಿಸಿದರು. ಮೋಟರ್ ವಾಹನ ಇಲಾಖೆಯ ಇಂತಹ ಮಾದರಿ ಚಟುವಟಿಕೆಗಳನ್ನು ದಾಖಲಿಸುವುದು ಭವಿಷ್ಯದ ಅನುಷ್ಠಾನಕ್ಕೆ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಪ್ರಶಂಸೆ ವ್ಯಕ್ತಪಡಿಸಿದರು. ಕಾಸರಗೋಡು ಎನ್ಪೋರ್ಸ್ ಮೆಂಟ್ ಅಧಿಕೃತರಾದ ಟಿ. ವೈಕುಂಠನ್, ಪಿ.ವಿ.ರತೀಶ್ ಉಪಸ್ಥಿತರಿದ್ದರು.


