ಕಾಸರಗೋಡು: ಕಾಸರಗೋಡು ಜಿಲ್ಲೆಯಿಂದ ಇತರ ರಾಜ್ಯಗಳಿಗೆ ಸಂಚಾರ ನಡೆಸುವ ಹಣ್ಣು, ತರಕಾರಿ ವಾಹನಗಳಿಗೆ ಪಾಸ್ ಕಡ್ಡಾಯಗೊಳಿಸಲಾಗಿದೆ.
ಈ ವಾಹನಗಳ ಚಾಲಕ ಮತ್ತು ಕ್ಲೀನರ್ ಗೆ ಪಾಸ್ ಮಂಜೂರು ಮಾಡಲಾಗುವುದು. ಸರಕಾರಿ ಅಂಗೀಕೃತ ಆರೋಗ್ಯ ಕೇಂದ್ರದಲ್ಲಿ ಲಭಿಸುವ ನಾನ್ ಕೋವಿಡ್ ಸರ್ಟಿಫಿಕೆಟ್ ಪಡೆದವರಿಗೆ ಮಾತ್ರ ಪಾಸ್ ನೀಡಲಾಗುವುದು. ಈ ಪಾಸ್ ಗೆ 7 ದಿನದ ಕಾಲಾವಧಿ ಇರುವುದು. ನಂತರ ಮತ್ತೆ ತಪಾಸನೆಗೊಳಪಟ್ಟು ನಾನ್ ಕೋವಿಡ್ ಸರ್ಟಿಫಿಕೆಟ್ ಪಡೆದು ಪಾಸ್ ಗಾಗಿ ಅರ್ಜಿ ಸಲ್ಲಿಸಬೇಕು. ಪಾಸ್ ಗಾಗಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ವರೆಗೆ 04994 255004 ಎಂಬ ದೂರವಾಣಿ ಸಂಖ್ಯೆಗೆ ಕರೆಮಾಡಬೇಕು. ಹೆಸರು, ತಾಲೂಕು, ದೂರವಾಣಿ ಸಂಖ್ಯೆ, ವಾಹನನಂಬ್ರ, ವಿಭಾಗ(ಹಣ್ಣು/ತರಕಾರಿ) ಆಧಾರ್ ಕಾರ್ಡ್, ಪರವಾನಗಿ ನಂಬ್ರ, ಪರವಾನಗಿ ಕಾಲಾವಧಿ, ನಾನ್ ಕೋವಿಡ್ ಸರ್ಟಿಫಿಕೆಟ್ ನಂಬ್ರ ಇತ್ಯಾದಿ ಪಾಸ್ ವಿತರಣೆ ವೇಳೆ ಕರೆಸಿಕೊಂಡಾಗ ಜತೆಗಿರಬೇಕು. ಅರ್ಜಿದಾರ ನೀಡುವ ಮಾಹಿತಿಗಳನ್ನು ಪರಿಶೀಲಿಸಿ ಪಾಸ್ ಮಂಜೂರು ಮಾಡಿದ ತಕ್ಷಣ ಸಂಬಂಧಪಟ್ಟ ತಾಲೂಕು ಕಚೇರಿಯಿಂದ ಸೂಚನೆಯೂ ಲಭಿಸಲಿದೆ. ನೋ ಕೋವಿಡ್ ಸಿಮ್ ಟಂ ಸರ್ಟಿಫಿಕೆಟ್, ಫೆÇೀಟೋ ಸಹಿತ ನೇರವಾಗಿ ತಾಲೂಕು ಕಚೇರಿಗೆ ತೆರಳಿ ಪಾಸ್ ಪಡೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.


