ಕಾಸರಗೋಡು: ಜಿಲ್ಲೆಯಲ್ಲಿ ಸಂಪರ್ಕ ಮೂಲಕ ಕೋವಿಡ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಪೋಲೀಸರು ಕಟ್ಟುನಿಟ್ಟು ಬಿಗಿಗೊಳಿಸಿ ರಂಗಕ್ಕಿಳಿದಿದ್ದಾರೆ.
ಜಿಲ್ಲೆಯಲ್ಲಿ ವಾಹನಗಳ ಮೂಲಕ,ಮನೆ ಮನೆಗಳಿಗೆ ತೆರಳಿ ಮೀನು, ತರಕಾರಿ, ಹಣ್ಣುಗಳು ಇತ್ಯಾದಿ ಮರಾಟ ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾದಿಕಾರಿ ಡಿ.ಶಿಲ್ಪಾ ತಿಳಿಸಿರುವರು.
ಮೀನು, ತರಕಾರಿ ಹೇರಿಕೊಂಡು ಬರುವ ವಾಹನಗಳ ಚಾಲಕರು ಸಾರ್ವಜನಿಕರೊಂದಿಗೆ ಸಂಪರ್ಕ ನಡೆಸಕೂಡದು. ಜಿಲ್ಲೆಯಲ್ಲಿ ಕೆಲವು ಪೋಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿರುವುದು ಖಚಿತಗೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ದೂರು ಸಲ್ಲಿಕೆಗೆ ಠಾಣೆಗೆ ತೆರಳುವುದನ್ನು ಕೈಬಿಡಬೇಕು. ಬದಲಾಗಿ ಆನ್ ಲೈನ್ ಮೂಲಕ ದೂರು ಸಲ್ಲಿಸಬೇಕು. ವ್ಯಾಪಾರ ಸಂಸ್ಥೆಗಳು ಇತ್ಯಾದಿ ಕಡೆಗಳಲ್ಲಿ ಕೋವಿಡ್ ಪ್ರತಿರೋಧ ಸಂಹಿತೆ ಜಾರಿ, ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳಲು ಡಿ.ವೈ.ಎಸ್.ಪಿ.ಗಳಿಗೆ ಆದೇಶ ನೀಡಲಾಗಿದೆ ಎಂದವರು ನುಡಿದರು.
ಸಾರ್ವಜನಿಕ ಪ್ರದೇಶಗಳಲ್ಲಿ, ನೌಕರಿ ಕೇಂದ್ರಗಳಲ್ಲಿ ಎಲ್ಲರೂ ಮಾಸ್ಕ್ ಧಾರಣೆ ಕಡ್ಡಾಯವಾಗಿ ನಡೆಸಬೇಕು. ಮನೆಗಳಲ್ಲಿ, ಸಾಂಸ್ಥಿಕವಾಗಿ ಕ್ವಾರೆಂಟೈನ್ ಇರುವವರ ಬಗ್ಗೆ ನಿಗಾ ಇರಿಸಲು ಪೆÇಲೀಸರನ್ನು ನೇಮಿಸಲಾಗಿದೆ. ಇತರ ರಾಜ್ಯಗಳಿಂದ ಸರಕು ಹೇರಿಕೊಂಡು ಬರುವ ವಾಹನಗಳನ್ನು ರಸ್ತೆ ಬದಿ ಅನಾವಶ್ಯಕವಾಗಿ ನಿಲುಗಡೆ ನಡೆಸಲು ಅನುಮತಿ ನೀಡುವುದಿಲ್ಲ ಎಂದು ಎಸ್ಪಿ ತಿಳಿಸಿರುವರು.


