ಪೆರ್ಲ: ಜಿಲ್ಲೆಯಲ್ಲಿ ಮಳೆಗಾಲ ಆರಂಭದ ಬಳಿಕ ವರೆಗೆ 857. 8071 ಮಿ.ಮೀ. ಮಳೆ ಲಭಿಸಿದೆ. ಗುರುವಾರ 5.375 ಮಿ.ಮೀ. ಮಳೆಯಾಗಿದೆ. ಒಂದು ಮನೆ ಪೂರ್ಣ ರೂಪದಲ್ಲಿ ಹಾಗೂ 4 ಮನೆಗಳಿಗೆ ಬಾಗಶಃ ಹಾನಿ ಉಂಟಾಗಿದೆ.
ಜಿಲ್ಲೆಯಲ್ಲಿ ಮಳೆಗಾಲ ಆರಂಭದ ಬಳಿಕ ಒಟ್ಟು 2 ಮನೆಗಳು ಪೂರ್ಣ ರೂಪದಲ್ಲಿ, 17 ಮನೆಗಳು ಭಾಗಶಃ ಹಾನಿಗೊಂಡಿವೆ. ಗುರುವಾರ ಸುರಿದ ಧಾರಾಕಾರ ಮಳೆಗೆ ಎಣ್ಮಕಜೆ ಪಂಚಾಯಿತಿ ಪೆರ್ಲ ಸಮೀಪದ ಬೆದ್ರಂಪಳ್ಳ ಇ.ಎಂ.ಎಸ್. ಕಾಲನಿಯ ಸಾನಾಫ್ ಎಂಬವರ ಮನೆ ಕುಸಿದಿದೆ. ಕಡು ಬಡತನದ ಕುಟುಂಬಕ್ಕೆ ವರ್ಷಗಳ ಹಿಂದೆ ಪಂಚಾಯಿತಿ ಅನುದಾನದಲ್ಲಿ ಮನೆ ನಿರ್ಮಿಸಲಾಗಿತ್ತು. ಸನಾಫ್ ತಾಯಿಯೊಂದಿಗೆ ಈ ಮನೆಯಲ್ಲಿ ವಾಸವಾಗಿದ್ದರು.