ಕಾಸರಗೋಡು: ಚಿನ್ನ ಕಳ್ಳಸಾಗಾಟದಲ್ಲಿ ಮುಖ್ಯಮಂತ್ರಿ ಪಾತ್ರ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿ ಯೂತ್ ಕಾಂಗ್ರೆಸ್ ಕಾಸರಗೋಡು ವಿಧಾನಸಭಾ ಸಮಿತಿ ನೇತೃತ್ವದಲ್ಲಿ ಕಾಸರಗೋಡು ನಗರದಲ್ಲಿ ಮೆರವಣಿಗೆ ನಡೆಯಿತು.
ಯೂತ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮನಾಫ್ ನುಳ್ಳಿಪ್ಪಾಡಿ, ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಮ್ಯಾಥ್ಯೂ ಬದಿಯಡ್ಕ, ಉದೇಶ್ ಬೇವಿಂಜೆ, ಶಾಜಿ ಕಮ್ಮಾಡಂ, ಫೆಬಿನ್ ಜೇಮ್ಸ್, ಜೋಬಿನ್ ಸಣ್ಣಿ, ಲಿಮಲ್, ಬಿನೀಶ್ ಮೊದಲಾದವರು ಮೆರವಣಿಗೆಗೆ ನೇತೃತ್ವ ನೀಡಿದರು.

