ಕಾಸರಗೋಡು: ಜನಸಂಘದ ಪ್ರಥಮ ಅಖಿಲ ಭಾರತ ಅಧ್ಯಕ್ಷರಾದ ಡಾ|ಶ್ಯಾಂ ಪ್ರಸಾದ್ ಮುಖರ್ಜಿ ಜನ್ಮ ದಿನಾಚರಣೆ ಉದುಮದಲ್ಲಿ ನಡೆಯಿತು.
ಬಿಜೆಪಿ ಉದುಮ ಪಂಚಾಯತ್ ಸಮಿತಿಯ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ವೈ.ಕೃಷ್ಣದಾಸ್ ಉದ್ಘಾಟಿಸಿ ಮಾತನಾಡಿದರು.
ಪಂಚಾಯತ್ ಸಮಿತಿ ಅಧ್ಯಕ್ಷ ವಿನಾಯಕ ಪ್ರಸಾದ್ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಉದುಮ ಮಂಡಲ ಉಪಾಧ್ಯಕ್ಷ ತಂಬಾನ್ ಅಚ್ಚೇರಿ, ಉದುಮ ಪಂಚಾಯತ್ ಪ್ರಧಾನ ಕಾರ್ಯದರ್ಶಿ ಮಧುಸೂದನ್, ಉಪಾಧ್ಯಕ್ಷ ಶಿವರಾಮನ್ ಎರೋಲ್ ಮೊದಲಾದವರು ಮಾತನಾಡಿದರು.


