HEALTH TIPS

ಕೇಬಲ್ ನೆಟ್ ವರ್ಕ್ ಸಮಸ್ಯೆಯಿಂದ ಆನ್ ಲೈನ್ ತರಗತಿ ಮೊಟಕು: ಜಿಲ್ಲಾಧಿಕಾರಿ ರಂಗಕ್ಕಿಳಿದ ಪರಿಣಾಮ ಸಮಸ್ಯೆ ಪರಿಹಾರ


          ಕಾಸರಗೋಡು: ಕೇಬಲ್ ನೆಟ್ ವರ್ಕ್ ಸಮಸ್ಯೆಯಿಂದ ಆನ್ ಲೈನ್ ತರಗತಿ ಮೊಟಕುಗೊಂಡ ವಿಚಾರವನ್ನು ಬಾಲಕಿಯೊಬ್ಬಳು ಗಮನಕ್ಕೆ ತಂದ ತಕ್ಷಣ ಜಿಲ್ಲಾಧಿಕಾರಿ ನೇರವಾಗಿ ರಂಗಕ್ಕಿಳಿದು ಸಮಸ್ಯೆ ಬಗೆಹರಿಸಿದ ಘಟನೆ ನಡೆದಿದೆ.
      ಎರಿಕುಳಂ ನಿವಾಸಿ ಅನುಷ್ಕಾ ಎಂಬ ಶಾಲಾ ಬಾಲಕಿ ಜು.9ರಂದು ರಾತ್ರಿ ದೂರವಾಣಿ ಮೂಲಕ ಕರೆಮಾಡಿ ಈ ಸಂಬಂಧ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಮಾಹಿತಿ ನೀಡಿದ್ದಳು. 6ನೇ ತರಗತಿಯಲ್ಲಿ ಕಳಿಯುತ್ತಿರುವ ತಾನು ಮತ್ತು 2ನೇ ತರಗತಿಯಲ್ಲಿ ಕಲಿಕೆ ನಡೆಸುತ್ತಿರುವ ಇನ್ನೊಬ್ಬ ಬಾಲಕನ ಈ ಬಗೆಗಿನ ಸಮಸ್ಯೆಗಳನ್ನು ಈ ವೇಳೆ ಅರುಹಿದ್ದಳು. ತಕ್ಷಣ ಮಗುವಿನ ಕರೆಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಪರಿಹಾರಕ್ಕೆ ಕ್ರಮ ಕೈಗೊಂಡಿದ್ದರು. ಪರಿಣಾಮ ಕೇಬಲ್ ನೆಟ್ ವರ್ಕ್ ನ ಸಂಬಂಧಪಟ್ಟವರು ರಾತರಿಯೇ ಅನುಷ್ಕಾಳ ಮನೆಗೆ ಆಗಮಿಸಿ ನೆಟ್ ವರ್ಕ್ ದುರಸ್ತಿ ಪಡಿಸಿದರು. ಕೇರಳ ವಿಷನ್ ನಿರ್ದೇಶಕ ಶುಕೂರ್ ಕೋಳಿಕ್ಕರ ಮತ್ತು ಪ್ರಮೋದ್ ಚಾಳಕ್ಕಡವು ಅವರ ನೇತೃತ್ವದಲ್ಲಿ ಈ ಕಾಯಕ ನಡೆದಿದೆ. ಕಳೆದೊಂದು ವಾರದಿಂದ ಮೊಟಕುಗೊಂಡಿದ್ದ ಕೇಬಲ್ ನೆಟ್ ವರ್ಕ್ ಈಗ ದುಸರ್ತಿಗೊಂಡು ಆನ್ ಲೈನ್ ತರಗತಿಯಲ್ಲಿ ಭಾಗವಹಿಸಲಾಗುತ್ತಿದೆ ಎಂಬ ಸಂತೋಷದಲ್ಲಿ ಅನುಷ್ಕಾ ಇದ್ದಾಳೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries