HEALTH TIPS

ರಾಷ್ಟ್ರಭದ್ರತೆಗೆ ಮುಳುವಾಗಿರುವ ಶಂಕೆ-ಚಿನ್ನ ಕಳ್ಳಸಾಗಣಿಕೆಯ ಹಿಂದಿನ ಲಕ್ಷ್ಯದ ಬಗ್ಗೆ ತನಿಖೆಗೆ ಕೇಂದ್ರ ಸರ್ಕಾರದ ಕಠಿಣ ನಿಲುವಿನ ಆದೇಶ


         ತಿರುವನಂತಪುರ: ಮುಖ್ಯಮಂತ್ರಿ ಕಚೇರಿಯೊಂದಿಗೆ  ಯುಎಇ ಕಾನ್ಸುಲೇಟ್ ಸೋಗಿನಲ್ಲಿ ನಡೆದ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಅಪರಾಧಿಗಳ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳುವಂತೆ ತನಿಖಾ ತಂಡಕ್ಕೆ ಕೇಂದ್ರ ನಿರ್ದೇಶನ ನೀಡಿದೆ.
       ಡಿ ಆರ್ ಐ, ಎನ್ ಐ ಎ, ಕಸ್ಟಮ್ಸ್ ಮತ್ತು ಐಬಿ ಸೇರಿದಂತೆ ಐದು ಏಜೆನ್ಸಿಗಳು ಪ್ರಸ್ತುತ ಚಿನ್ನದ ಕಳ್ಳಸಾಗಣೆ ಕುರಿತು ತನಿಖೆ ನಡೆಸುತ್ತಿವೆ. ತನಿಖೆಯ ಪ್ರತಿಯೊಂದು ಹಂತದಲ್ಲೂ ಹೆಚ್ಚು ಸಂಕೀರ್ಣವಾದ ಮಾಹಿತಿ ಮತ್ತು ಲಿಂಕ್‍ಗಳು ಬಹಿರಂಗಗೊಳ್ಳುತ್ತವೆ ಎಂದು ವರದಿಯಾಗಿದೆ.
      ವಿವಿಧ ಕ್ಷೇತ್ರಗಳಲ್ಲಿನ ದೊಡ್ಡ ಹೆಸರುಗಳು ಮತ್ತು ಪ್ರಸಿದ್ಧ ವ್ಯಕ್ತಿಗಳು ನೇರವಾಗಿ ಅಥವಾ ಪರೋಕ್ಷವಾಗಿ ಚಿನ್ನದ ಕಳ್ಳಸಾಗಣೆಯಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ. ಆದ್ದರಿಂದ ಮುಖವನ್ನು ನೋಡದೆ ತನಿಖೆಯೊಂದಿಗೆ ಮುಂದುವರಿಯುವಂತೆ ಕೇಂದ್ರ ಸರ್ಕಾರ ನಿರ್ದೇಶಿಸಿದೆ.
       ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿರುವ ಈ ಪ್ರಕರಣವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ನಿಷ್ಠಾವಂತ ಕೇಂದ್ರ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇರವಾಗಿ ತನಿಖೆ ನಡೆಸುತ್ತಿದ್ದಾರೆ.
      ತಪ್ಪಿತಸ್ಥರೆಂದು ಕಂಡುಬಂದಲ್ಲಿ ಯಾವುದೇ ಪ್ರಮುಖ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೋವಲ್ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
      ರಾಜತಾಂತ್ರಿಕ ಚಿನ್ನದ ಕಳ್ಳಸಾಗಣೆ ಭಯೋತ್ಪಾದನೆಗೆ ಸಂಬಂಧಿಸಿದೆ ಮತ್ತು ದೂತಾವಾಸದ ಅಕ್ರಮ ಬಳಕೆಯು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರುವ ಸಾಧ್ಯತೆಯಿದೆ ಎಂದು ಎನ್ ಐ ಎ ನ್ಯಾಯಾಲಯಕ್ಕೆ ತಿಳಿಸಿದೆ. ಸಿಪಿಐ (ಎಂ) ನೇತೃತ್ವದ ಎಡ ಸರ್ಕಾರವು ಪ್ರಬಲ ತನಿಖಾಧಿಕಾರಿಗಳನ್ನು ಹುಡುಕುವುದರಲ್ಲಿ ಮಗ್ನವಾಗಿರುವುದು ಗಮನಕ್ಕೆ ಬಂದಿದೆ. ಅವರು ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ, ಯಾವ ಪ್ರಭಾವೂ ತನಿಖೆಯ ಮೇಲೆ ಪರಿಣಾಮ ಬೀರದು ಮತ್ತದು ಕೂಡದೆಂದು ಕೇಂದ್ರ ನಿರ್ದೇಶಿಸಿದೆ. ಏಕೆಂದರೆ ಕೇರಳದಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ ಅನುಭವವಿರುವ ಅಜಿತ್ ದೋವಲ್ ಅವರಿಗೆ ಇಲ್ಲಿನ ರಾಜಕೀಯ ವಿದ್ಯಮಾನ, ಆಟೋಪಗಳ ಪರಿಚಯ ಇದೆ.
         1971 ರ ತಲಶ್ಚೇರಿ ಗಲಭೆಯನ್ನು ಹತ್ತಿಕ್ಕಲು 1968 ರ ಬ್ಯಾಚ್ ಐಪಿಎಸ್ ಅಧಿಕಾರಿ ಅಜಿತ್ ದೋವಲ್ ಅವರನ್ನು ಸರ್ಕಾರ ನೇಮಿಸಿತ್ತು. ಆ ಸಮಯದಲ್ಲಿ ಕಣ್ಣೂರು ರಾಜಕೀಯದಲ್ಲಿ ಯುವ ನಾಯಕನಾಗಿದ್ದ ಈಗಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ದೋವಲ್ ಕಠಿಣ ರಚನಾತ್ಮಕ ಕಾನೂನು ಜಾರಿಗೊಳಿಸಿ ಹತ್ತಿಕ್ಕಿದ್ದರು.
      ಅಂದಿನಿಂದ ಅಜಿತ್ ದೋವಲ್ ಅವರು ಮಲಬಾರ್ ರಾಜಕೀಯದ ಸಾಮಥ್ರ್ಯ ಮತ್ತು ದೌರ್ಬಲ್ಯ ಹಾಗೂ ಸಿಪಿಎಂ ಸಾಂಸ್ಥಿಕ ರಚನೆಯ ಬಗ್ಗೆ ಅರಿವುಳ್ಳವರಾಗಿರುವರು. ಕಳ್ಳಸಾಗಣೆ ಮಾಡಿದ ಚಿನ್ನವನ್ನು ಭಯೋತ್ಪಾದನೆ ಮತ್ತು ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಬಳಸಲಾಗಿದೆ ಎಂಬ ಅಂಶ ಆರಂಭದಿಂದಲೇ ಸಂಶಯಿಸಲಾಗಿತ್ತು. ಇದೀಗ ಅದರ ಹತ್ತಿರದವರೆಗೆ ಘಟನಾವಳಿಗಳ ತನಿಖೆ ಬಂದು ತಲಪುತ್ತಿದೆ. ಕೊಲ್ಲಿಯಿಂದ ಕೇರಳಕ್ಕೆ ಹೆಚ್ಚಿನ ಪ್ರಮಾಣದ ಚಿನ್ನ ಹರಿದುಬಂದ ಮಾರ್ಗಗಳ ಬಗ್ಗೆ ತನಿಖೆ ನಡೆಯುತ್ತಿದೆ. ಯುಎಇ ಕಾನ್ಸುಲೇಟ್ ಸೋಗಿನಲ್ಲಿ ಕಳ್ಳಸಾಗಣೆ ಮಾಡಿದ ಚಿನ್ನವನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಕೇರಳದಲ್ಲಿ ಪತ್ತೆ ಮಾಡಿರುವುದರ ಪೂರ್ಣ ಸ್ವರೂಪವನ್ನು ಬಯಲುಗೊಳಿಸುವುದು ಎನ್ ಐ ಎಯ ಮುಖ್ಯ ಕಾರ್ಯವಾಗಿದೆ.
     ಕಳ್ಳಸಾಗಣೆ ಮಾಡಿದ ಚಿನ್ನವನ್ನು ಬಳಸಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲಾಗಿದೆ ಎಂದು ಗುಪ್ತಚರ ಸಂಸ್ಥೆಗಳು ಈ ಹಿಂದೆ ಸರ್ಕಾರಕ್ಕೆ ವರದಿ ಮಾಡಿದ್ದವು. ಆದ್ದರಿಂದ, ಯಾವುದೇ ಹಂತದಲ್ಲಿ ತನಿಖೆಗೆ ಅಡ್ಡಿಯಾಗಬಾರದು ಅಥವಾ ವಿಳಂಬ ಮಾಡಬಾರದು ಎಂದು ಕೇಂದ್ರ ಸರ್ಕಾರ ನಿರ್ದೇಶಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries