HEALTH TIPS

ಸಂಪರ್ಕದಿಂದ ಕೋವಿಡ್ ಸೋಂಕು-ಮೀರಿತು ನೂರು-ಜಿಲ್ಲೆಯಲ್ಲಿ ನಿಯಂತ್ರಣ ಕೈತಪ್ಪಿದೆಯೇ?


             ಕಾಸರಗೋಡು: ಜಿಲ್ಲೆಯಲ್ಲಿ ಸಂಪರ್ಕದ ಮೂಲಕ ಕೊರೊನಾ ವ್ಯಾಪಕಗೊಳ್ಳುತ್ತಿದ್ದು ಭಾನುವಾರ ಮೊದಲ ಬಾರಿಗೆ 100 ಕ್ಕೆ ತಲುಪಿದೆ. ನಿನ್ನೆ ದೃಢಪಡಿಸಲಾದ 107 ಪ್ರಕರಣಗಳಲ್ಲಿ 105 ಮಂದಿಗೂ ಸೋಂಕು ಹರಡಿರುವುದು ಸಂಪರ್ಕದಿಂದೆಂಬುದು ಕಳವಳಕ್ಕೆ ಕಾರಣವಾಗಿದ್ದು ನಿಯಂತ್ರಣ ಕೈತಪ್ಪಿದೆಯೇ ಎಂಬ ಸಂಶಯಗಳು ಮೂಡತೊಡಗಿದೆ.
          ನಿನ್ನೆ ಸೋಂಕು ದೃಢಪಡಿಸಲಾದ 107 ಮಂದಿಗಳಲ್ಲಿ ಓರ್ವ ಕರ್ನಾಟಕದಿಂದ ಆಗಮಿಸಿದ ಮತ್ತು ಇನ್ನೊಬ್ಬ ಯುಎಇಯಿಂದ ಆಗಮಿಸಿದ 24 ವರ್ಷ ವಯಸ್ಸಿನವರಾಗಿದ್ದಾರೆ. ಮಿಕ್ಕುಳಿದವರೆಲ್ಲರಿಗೂ ಸಂಪರ್ಕ ಕಾರಣದಿಂದ ಸೋಂಕು ಹಬ್ಬಿರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದ ಸಂಪರ್ಕ ದಿಂದಾದ ರೋಗಿಗಳ ಕಾರಣ ಕೋವಿಡ್ ನಿಯಂತ್ರಣಗಳು ಕೈತಪ್ಪಿದೆ ಎಂಬ ಸಂಶಯ ಮೂಡಿಬಂದಿದೆ.
        ಸಂಪರ್ಕ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಚೆಂಗಳ ಪಂಚಾಯತ್‍ನಲ್ಲಿ, ಜು. 31 ರವರೆಗೆ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳನ್ನೂ ಸಂಪೂರ್ಣ ನಿಷೇಧಿಸಲು ನಿರ್ಧರಿಸಲಾಲಾಗಿದೆ. ವಿಲಾಂಕಟ್ಟೆಯಲ್ಲಿ ಇತ್ತೀಚೆಗೆ ನಡೆದ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡ ವಧೂವರರ ಸಹಿತ 43 ಜನರಿಗೆ ಕೋವಿಡ್ ಹರಡಿರುವುದು ಅಸಮತೋಲನಕ್ಕೆ ಕಾರಣವಾಯಿತು. ಮಂಜೇಶ್ವರದಲ್ಲಿ ಹದಿನೈದು, ಕುಂಬಳೆ ಮತ್ತು ಪಳ್ಳಿಕ್ಕೆರೆಯಲ್ಲಿ ಎಂಟು ಮತ್ತು ಕಾಸರಗೋಡಲ್ಲಿ ಏಳು ಜನರಿಗೆ ನಿನ್ನೆ ಹೊಸತಾಗಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಸತತ ಮೂರನೇ ದಿನ ಕೋವಿಡ್ ಬಾಧಿತರ ಸಂಖ್ಯೆ 100 ದಾಟಿದೆ. ನಿನ್ನೆ 105 ಜನರು ಅನಾರೋಗ್ಯಕ್ಕೆ ಒಳಗಾಗಿದ್ದರು.
      ಚೆಂಗಳದ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರೂ ಕ್ವಾರಂಟೈನ್ ಗೆ ಹೋಗಬೇಕೆಂದು ಜಿಲ್ಲಾಧಿಕಾರಿ ವಿನಂತಿಸಿದ್ದಾರೆ. ಜೊತೆಗೆ ನಿನ್ನೆಯ ಒಂಬತ್ತು ಸಕಾರಾತ್ಮಕ ಪ್ರಕರಣಗಳ ಮೂಲ ಲಭ್ಯವಿಲ್ಲ. ಮೂಲ ಲಭ್ಯವಿಲ್ಲದ ಐವರು ಈವರೆಗೆ ಜಿಲ್ಲೆಯಲ್ಲಿ ಸಾವನ್ನಪ್ಪಿದ್ದಾರೆ. ಕೋವಿಡ್ ಇದುವರೆಗೆ ಜಿಲ್ಲೆಯ 1438 ಜನರಿಗೆ ಬಾಧಿಸಿದೆ. ಈ ಪೈಕಿ 680 ಮಂದಿ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries