HEALTH TIPS

ಸಂಕಷ್ಟಗಳಿಗೆ ಕೊನೆಯಿಲ್ಲ-ಬಂಧುಗಳಾರೂ ಇಲ್ಲದ ಅಶ್ರಫ್ ವೃದ್ದಾಶ್ರಮಕ್ಕೆ


         ಕಾಸರಗೋಡು: ಉಡುಪಿಯ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‍ನಿಂದ ಜಿಲ್ಲಾ ಪೆÇಲೀಸ್ ಮುಖ್ಯಸ್ಥೆ ಡಿ.ಎಸ್. ಶಿಲ್ಪಾ ಸಹಾಯದಿಂದ ಕಾಸರಗೋಡಿಗೆ ಕರೆತರಲಾದ ಅಶ್ರಫ್‍ನನ್ನು ಪತ್ತೆಹಚ್ಚಿ ಈವರೆಗೆ ಯಾವೊಬ್ಬ ಸಂಬಂಧಿಕನೂ ಬಂದಿಲ್ಲ. ದೇಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಹಾಗೂ ಕೋವಿಡ್ ಕ್ವಾರಂಟೈನ್ ನಿಂದ ಅಶ್ರಫ್ ನನ್ನು ವೃದ್ದಾಶ್ರಮಕ್ಕೆ ಸ್ಥಳಾಂತರಿಸಲಾಗಿದೆ.
          ಉಡುಪಿಯ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‍ನಲ್ಲಿ ತಂಗಿದ್ದ ಅಶ್ರಫ್ ಅವರನ್ನು ಜಿಲ್ಲಾ ಪೆÇಲೀಸ್ ಮುಖ್ಯಸ್ಥೆ ಡಿ ಶಿಲ್ಪಾ ಅವರ ಸೂಚನೆಯ ಮೇರೆಗೆ ಮೇಲ್ಪರಂಬ ಠಾಣಾ ಸಿಐ ಬೆನಿಲಾಲ್ ನೇತೃತ್ವದ ತಂಡ ಆಂಬುಲೆನ್ಸ್ ಮೂಲಕ ದೇಳಿ ಎಚ್‍ಎನ್‍ಸಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಪತ್ನಿ, ಮಕ್ಕಳು ಮತ್ತು ಸಂಬಂಧಿಕರ ಸಂಪರ್ಕ ಕಳೆದುಕೊಂಡು ವಿವಿಧೆಡೆ ಅಡ್ದಡಾಡಿ ಕೊನೆಗೆ ಉಡುಪಿಯ ಸಮಾಜ ಕಲ್ಯಾಣ ಇಲಾಖೆಯ ಸುಪರ್ಧಿಗೆ ಬಂದು ತಲಪಿದ್ದ ಅಶ್ರಫ್ ಅವರ ದುಃಸ್ಥಿತಿಯ ಬಗ್ಗೆ ಜಿಲ್ಲಾ ಪೆÇಲೀಸ್ ಮುಖ್ಯಸ್ಥೆಗೆ ಮಾಹಿತಿ ಲಭ್ಯವಾಗಿ ಅವರ ಸ್ವ ಆಸಕ್ತಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
           ಜೂನ್ 9 ರಂದು ಕಾಸರಗೋಡಿಗೆ ಅಶ್ರಫ್ 65ರ ಹರೆಯದ  ಅವರನ್ನು ಕರೆತರಲಾಗಿತ್ತು. ಆದರೆ ಅಶ್ರಫ್ ಅವರ ಕುಟುಂಬವನ್ನು ಪತ್ತೆಹಚ್ಚಲು ಇನ್ನೂ ಸಾಧ್ಯವಾಗಿಲ್ಲ. ಅವರು ಕಾಸರಗೋಡು ಮಲೆಯಾಳಂ ಭಾಷೆಯನ್ನು ಮಾತನಾಡುತ್ತಿರುವುದನ್ನು ಗುರುತಿಸಿ ಕಾಸರಗೋಡಿಗೆ ಕರೆತರಲಾಗಿದ್ದು ಅಸ್ಪಷ್ಟ ನೆನಪುಗಳೊಂದಿಗೆ ತನ್ನ ಊರು ಕಳನಾಡು, ತಳಂಗರೆ ಎಂದು ನೆನಪಿಸುತ್ತಾರೆ. ಈ ಕಾರಣಕ್ಕೆ ಅವರನ್ನು ಕಾಸರಗೋಡು ಮೂಲದವರು ಎಂದು ಗುರುತಿಸಲಾಗಿದೆ. ಮಕ್ಕಳು ಲತೀಫ್, ನಾಸರ್ ಮತ್ತು ಅವರ ಪತ್ನಿ ಜಮೀಲಾ ಎಂದೂ ಹೇಳಿದ್ದಾರೆ. ಇದರ ಹೊರತು ಬೇರೆ ಏನೂ ವಿವರ ಸ್ಪಷ್ಟವಾಗಿಲ್ಲ. ಇದೀಗ ಕರೆತಂದು ತಿಂಗಳ ಒಂದು ಕಳೆದಿದ್ದರೂ ಯಾರೊಬ್ಬ ಸಂಬಂಧಿಕರೂ ಲಭ್ಯವಿಲ್ಲದ ಕಾರಣ ವೃದ್ಧಾಶ್ರಮಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಯಿತು.
       ಸಿಐ ಬೆನ್ನಿಲಾಲ್ ನೇತೃತ್ವದ ಎಸ್‍ಐ ಪದ್ಮನಾಭನ್ ಮತ್ತು ಪೆÇಲೀಸರಾದ ಗೋವಿಂದನ್, ರಜನೀತ್, ರಾಜೇಶ್ ಮತ್ತು ಡಾ. ಕೈನಿ ಮತ್ತು ಚಟ್ಟಂಚಲ್ ಆರೋಗ್ಯ ನಿರೀಕ್ಷಕರು ರವೀಂದ್ರನ್ ಮತ್ತು ಅಭಿಲಾಶ್, ಸಾಮಾಜಿಕ ಕಾರ್ಯಕರ್ತರು ಕೆ.ಎಸ್. ಸ್ಯಾಲಿ ಕೀಜೂರ್, ಇಲ್ಯಾಸ್, ರಿಯಾಸ್, ಅಸ್ಕರ್ ಮತ್ತು ಉಸ್ಮಾನ್ ಅವರ ತಂಡ ಪರವನಡ್ಕದ  ಸರ್ಕಾರಿ ವೃದ್ಧಾಶ್ರಮಕ್ಕೆ ಕರೆದೊಯ್ದ ದಾಖಲಿಸಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries