HEALTH TIPS

ಪಿಎಂಕೆಎಸ್‍ವೈ; ಕಾರಡ್ಕ ಬ್ಲಾಕ್‍ನಲ್ಲಿ ನವೀಕರಿಸಿದ ಕೆರೆಗಳನ್ನು ಜಿಲ್ಲಾಧಿಕಾರಿಗಳಿಂದ ನಾಡಿಗೆ ಅರ್ಪಣೆ


     ಮುಳ್ಳೇರಿಯ: ಪ್ರಧಾನಮಂತ್ರಿ ಕೃಞÂ ಸಿಂಚಯ ಯೋಜನೆ ಅನ್ವಯ ಕಾರಡ್ಕ ಬ್ಲಾಕ್ ಪಂಚಾಯತಿಯಲ್ಲಿ ಜಾರಿಇಗೊಳಿಸಲಾದ ಎರಡು ಪ್ರಮುಖ ಯೋಜನೆಗಳನ್ನು ಪೂರ್ಣಗೊಳಿಸಿ ರಾಜ್ಯಕ್ಕೆ ಸಲ್ಲಿಸಿದೆ. ವಾವಡ್ಕ ಜಲಾನಯನ ಪ್ರದೇಶದಲ್ಲಿ ನವೀಕರಿಸಿದ ತೋರ್ಕುಳ ಕೆರೆ ಮತ್ತು ಕೊಲ್ಲರಂಕೋಡು ಜಲಾನಯನ ಪ್ರದೇಶದಲ್ಲಿ ಪೂರ್ಣಗೊಂಡ ಬೆದಿರೆ ಕೆರೆಯನ್ನು  ಶನಿವಾರ ಉದ್ಘಾಟಿಸಲಾಯಿತು.
           ಈ ವರ್ಷಾರಂಭದಲ್ಲಿ ನಿರ್ಮಾಣವನ್ನು ಪ್ರಾರಂಭಿಸಿದ ತೋರ್ಕುಳ ಕೆರೆ ಪುನರ್ ನಿರ್ಮಾಣ ಯೋಜನೆಯ ಮೂಲಕ ಕೆರೆಯ ಆಳವನ್ನು ಮೂರು ಮೀಟರ್‍ಗಳಷ್ಟು ವಿಸ್ತರಿಸಲಾದೆ. ಪ್ರತಿ ಹಂತದಲ್ಲೂ ಲ್ಯಾಟರೈಟ್ ನೆಲಹಾಸು ಮತ್ತು ಕಾಲುವೆಯ ಎರಡೂ ಬದಿಗಳಲ್ಲಿ 30 ಮೀಟರ್ ಎತ್ತರದ ಕಾಂಕ್ರೀಟ್ ಗೋಡೆಯು ಕೆರೆಯಿಂದ  ನೀರನ್ನು 20 ಎಕರೆ ಕ್ಷೇತ್ರ ಸಂಗ್ರಹಕ್ಕೆ ಕೊಂಡೊಯ್ಯುತ್ತದೆ. ಚಾನಲ್ ಮೂಲಕ ಒಳಚರಂಡಿ ಹಳ್ಳವನ್ನು ಹೊಂದಿರುವುದು ಮತ್ತು ಅದರಿಂದ ನೀರನ್ನು ಕೆರೆಗೆ ಹರಿಸುವುದು, ಗೋಡೆ ನಿರ್ಮಾಣ ಮೊದಲಾದವುಗಳನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸಲಾಗಿದೆ. ಯೋಜನೆಯು  26,48,985 ರೂ ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಂಡಿದೆ.
       ಕಾಮಗಾರಿಗಳನ್ನು ಜಿಲ್ಲಾಧಿಕಾರಿ ಡಾ.ಸಜಿತ್ ಬಾಬು ಉದ್ಘಾಟಿಸಿದರು. ಯೋಜನಾ ಅಭಿಯಂತರ  ಟಿ. ಅನಂತನ್, ಟಿ. ಅದಿರಾ ಮತ್ತು ಜಲಾನಯನ ಕಾರ್ಯದರ್ಶಿಗಳು ಇ. ಸುನೀತಾ, ಪುರುಷೋತ್ತಮನ್ ಅವರನ್ನು ಗೌರವಿಸಲಾಯಿತು. ಬ್ಲಾಕ್ ಪಂಚಾಯಿತಿಗಳ ದೇಣಿಗೆಯನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಲಾಯಿತು. ಯೋಜನಾ ನಿರ್ದೇಶಕ ಪ್ರದೀಪ್ ಅವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಲಾಕ್ ಪಂಚಾಯತ್ ಪ್ರತಿನಿಧಿಗಳು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries