ಕಣ್ಣೂರು: ತಲಶ್ಚೇರಿ ಉಪಜಿಲ್ಲಾಧಿಕಾರಿ ಆಸಿಫ್ ಕೆ ಯೂಸಫ್ ಅವರ ಐಎಎಸ್ ಹುದ್ದೆಯನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರ ಆದೇಶ ನೀಡಿದೆ. ಆಸಿಫ್ ಕೆ ಯೂಸಫ್ ಅವರ ಐಎಎಸ್ ಹುದ್ದೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕೇಂದ್ರ ಸಿಬ್ಬಂದಿ ಸಚಿವಾಲಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ. ಆಸಿಫ್‍ನ ಐಎಎಸ್ ಪ್ರಮಾಣಪತ್ರ ನಕಲಿ ಎಂದು ಪತ್ತೆಹಚ್ಚಲಾಗಿದ್ದು ಈ ಬಗ್ಗೆ ತನಿಖೆ ಬಳಿಕ ನೀಡಿದ ದೂರಿನ ಆಧಾರದÀಲ್ಲಿ ಇಂತಹದೊಂದು ಮಹತ್ತರ ಆದೇಶ ಹೊರಬಿದ್ದಿದೆ.
ಐಎಎಸ್ ಪರೀಕ್ಷೆಗೂ ಮೊದಲು ಆಸಿಫ್ ಕೆ.ಯೂಸುಫ್ ಅವರು ಹಾಜರುಪಡಿಸಿದ ಆದಾಯ ಸರ್ಟಿಫಿಕೇಟ್ ಸಹಿತ ಎಲ್ಲಾ ಮಾನದಂಡಗಳ ಪತ್ರಗಳೂ ನಕಲಿ ಎಂದು ದೂರಲಾಗಿದೆ. ಈ ಬಗ್ಗೆ ನಡೆದ ಸಮಗ್ರ ತನಿಖೆಯಿಂದ ಸತ್ಯ ಹೊರಬಿದ್ದಿದೆ ಎಂದು ಕೇಂದ್ರ ತನಿಖಾ ದಳ (ಸಿಬಿಐ) ಕೇಂದ್ರ ಸಿಬ್ಬಂದಿ ಸಚಿವಾಲಯಕ್ಕೆ ನೀಡಿದ ತನಿಖಾ ವರದಿಯಲ್ಲಿ ದೃಢಪಡಿಸಲಾಗಿದೆ. ಅವರ ಒಬಿಸಿ ಪ್ರಮಾಣಪತ್ರವನ್ನು ರದ್ದುಗೊಳಿಸುವಂತೆ ಸೂಚನೆ ನೀಡಲಾಗಿದೆ. ಅಖಿಲ ಭಾರತ ಸೇವಾ ಪರೀಕ್ಷಾ ಕಾಯ್ದೆ(ಆಲ್ ಇಂಡಿಯಾ ಸರ್ವೀಸ್ ಪ್ರೊಬೆಷನ್ಸ್)ಯ 12 ನೇ ವಿಧಿ ಅನ್ವಯ ಆಸಿಫ್ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು.
ಐಎಎಸ್ ಪರೀಕ್ಷೆಗೆ ಹಾಜರಾಗುವ ಮೊದಲಿನ ಮೂರು ಹಣಕಾಸು ವರ್ಷಗಳಲ್ಲಿ ಯಾವುದಾದರೂ ಒಂದು ವರ್ಷದ ಕುಟುಂಬದ ವಾರ್ಷಿಕ ಆದಾಯವು 6 ಲಕ್ಷ ರೂ.ಗಿಂತ ಕಡಿಮೆಯಿದ್ದರೆ ಮಾತ್ರ ಒಬಿಸಿ ಮೀಸಲಾತಿ ಲಭ್ಯವಿದೆ. ಆದರೆ ಪರೀಕ್ಷೆಗೆ ಹಾಜರಾದ ವರ್ಷದ ಮೂರೂ ವರ್ಷಗಳ ಹಿಂದಿನ ವರ್ಷಗಳಲ್ಲಿ ಆಸೀಫ್ ನ ಕುಟುಂಬದ ಆದಾಯ 6 ಲಕ್ಷಕ್ಕಿಂತಲೂ ಅಧಿಕವಿದ್ದುದನ್ನು ತನಿಖೆ ದೃಢಪಡಿಸಿದೆ. ಈ ಖೋಟಾ ಪ್ರಮಾಣಪತ್ರವನ್ನು ನೀಡಿದ ಕಣಯನ್ನೂರ್ ತಹಶೀಲ್ದಾರರ ವಿರುದ್ಧ ಕ್ರಮಕೈಗೊಳ್ಳಲು ಸಹ ಶಿಫಾರಸು ಮಾಡಲಾಗಿದೆ.
ಏತನ್ಮಧ್ಯೆ, ರಾಜ್ಯ ಸರ್ಕಾರದ ವಿಜಿಲೆನ್ಸ್ ಕ್ಲಿಯರೆನ್ಸ್ ಲಭಿಸದಿರುವುದರಿಂದ ಆಸಿಫ್ ಕೆ ಯೂಸುಫ್ ಅವರ ಐಎಎಸ್ ಪದವಿಯನ್ನು ಖಾಯಂ ಗೊಳಿಸಿರಲಿಲ್ಲ. ಇದರಿಂದ ತಾತ್ಕಾಲಿಕ ನೆಲೆಯಲ್ಲಿ ಪ್ರೊಬೇಷನರಿ ಉಪಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದರಿಂದಾಗಿ ಹೆಚ್ಚಿನ ತನಿಖೆ ನಡೆಸದೆ ಸರ್ಕಾರ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಕೇಂದ್ರ ಸಿಬ್ಬಂದಿ ಸಚಿವಾಲಯ ಹೇಳಿದೆ. ಆದರೆ ಮೇ 11 ರಂದು ಕೇಂದ್ರವು ಪತ್ರ ಕಳುಹಿಸಿದ ಬಳಿಕವೂ ರಾಜ್ಯ ಸರ್ಕಾರ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದುಬಂದಿದ್ದು, ರಾಜಕೀಯ ಲಾಬಿಗಳ ಮೂಲಕ ವಂಚನೆಯನ್ನು ಮುಚ್ಚಲು ಪ್ರಯತ್ನಿಸಲಾಗುತ್ತಿದೆ ಎನ್ನಲಾಗಿದೆ.