ತಿರುವನಂತಪುರ: ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಹೇರಲ್ಪಡುವುದಿಲ್ಲ ಎಂದು ಸೋಮವಾರ ತಿರುವನಂತಪುರದಲ್ಲಿ ನಡೆದ ವರ್ಚುವಲ್ ಸಂಪುಟ ಸಭೆ ನಿರ್ಧರಿಸಿತು. ಕ್ಯಾಬಿನೆಟ್ ಸಭೆ ಸಂಪೂರ್ಣ ಲಾಕ್ ಡೌನ್ ಅಪ್ರಾಯೋಗಿಕವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಇದನ್ನು ಅನುಸರಿಸಿ ಸರ್ಕಾರವು ಲಾಕ್ ಡೌನ್ ಹಾಕದಿರಲು ನಿರ್ಧರಿಸಿತು. ಭಾನುವಾರ ನಡೆದಿದ್ದ ಸರ್ವಪಕ್ಷ ಸಭೆಯಲ್ಲೂ ಇದೇ ಅಭಿಪ್ರಾಯ ಮುಂದಿಡಲಾಗಿತ್ತು.
ಸೋಂಕು ಹರಡಿರುವ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಹೇರಲು ಸಂಪುಟ ಸಭೆ ನಿರ್ಧರಿಸಿದೆ. ಹಣಕಾಸು ಮಸೂದೆ ಅಂಗೀಕಾರಕ್ಕೆ ಸಂಬಂಧಿಸಿದಂತೆ ಸುಗ್ರೀವಾಜ್ಞೆ ಹೊರಡಿಸಲು ಸಹ ನಿರ್ಧರಿಸಲಾಗಿದೆ. ಕ್ಯಾಬಿನೆಟ್ ಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಯಿತು. ಕೋವಿಡ್ ನಿಬರ್ಂಧಗಳ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕ್ಯಾಬಿನೆಟ್ ಸಭೆ ಸೇರುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವೀಡಿಯೋ ಕಾನ್ಪರೆನ್ಸ್ ಮೂಲಕ ಸಚಿವ ಸಂಪುಟ ಸಭೆ ನಡೆದಿದ್ದು ಸಚಿವರು ಮನೆ ಮತ್ತು ಕಚೇರಿಯಿಂದ ಭಾಗವಹಿಸಿದ್ದರು.
ಈ ಮಧ್ಯೆ ಸೋಮವಾರವೂ ರಾಜ್ಯದಲ್ಲಿ ಮತ್ತೊಂದು ಕೋವಿಡ್ ಸಾವು ವರದಿಯಾಗಿದೆ. ಕಳಮಶ್ಚೇರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಜಯನ್ (61) ನಿಧನರಾದರು. ವಿಜಯನ್ ಇಡುಕ್ಕಿ ಮಮ್ಮಟ್ಟಿಕಾನಂ ಮೂಲದವರು. ಅವರು ಕ್ಯಾನ್ಸರ್ ರೋಗಿಯಾಗಿದ್ದರು ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.