HEALTH TIPS

ಕೋವಿಡ್ ಹಿನ್ನೆಲೆ-ಚುನಾವಣೆ ಮುಂದೂಡಲ್ಪಡುವುದೇ-ಮತದಾನ ಪ್ರಕ್ರಿಯೆಯಲ್ಲಿ ಏನೇನಾಗಲಿದೆ?

 
            ತಿರುವನಂತಪುರ: ಕೇರಳ ವಿಧಾನ ಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಗರಿಗೆದರತೊಡಗಿದ್ದು ಕೋವಿಡ್ ಮಹಾಮಾರಿಯ ಗಂಭಿರ ತೊಡಕುಗಳ ಮಧ್ಯೆ ಚುನಾವಣೆ ನಡೆಯಲಿದೆಯೇ, ಮುಂದೂಡಲ್ಪಡುವುದೇ, ಮತದಾರರ ಪ್ರಕ್ರಿಯೆಗಳು ಹೇಗಿರಲಿದೆ ಎಂಬ ಬಗ್ಗೆ ಕುತೂಹಲ ಮನೆಮಾಡಿದೆ.
         ಕೋವಿಡ್ ನಿರ್ಬಂಧಗಳು ಮತ್ತು ರಿಯಾಯಿತಿಗಳು ಬದಲಾಗುತ್ತಿವೆ. ಕೋವಿಡ್ ಬಿಕ್ಕಟ್ಟು ಮತ್ತು ಚುನಾವಣೆಯ ತಾಪದ ಮಧ್ಯೆ ಸಾಮಾನ್ಯರು ಒಂದೆಡೆ ಹೇಗೆ ಪ್ರತಿಕ್ರಿಯಿಸುವರೆಂಬ ಚಿಂತೆ ರಾಜಕೀಯ ಪಕ್ಷಗಳಿಗೂ ಇಲ್ಲದಿಲ್ಲ. ಆದರೆ ಚುನಾವಣೆ ಈ ಬಾರಿ ತುಂಬಾ ಭಿನ್ನವಾಗಿರಬಹುದೆಂದು ಅಂದಾಜಿಸಲಾಗಿದೆ. ಕೋವಿಡ್ ಭಯದ ಹೊರತಾಗಿಯೂ, ಮತದಾನ ಮಾಡುವಲ್ಲಿ ಕೆಲವು ಹೊಸ ಮಾರ್ಗಗಳನ್ನು ಹುಡುಕಬೇಕಾಗಿದೆ. ಚುನಾವಣಾ ಸಂಹಿತೆಯನ್ನು ತಿದ್ದುಪಡಿ ಮಾಡುವ ಮೂಲಕ ಮತದಾನ ನಡೆಸಬೇಕಾಗುವುದು ಎಂದು ವಿಶ್ಲೇಶಕರ ಅಭಿಮತ. ರಾಜ್ಯದಲ್ಲಿ ಅಂಚೆ ಮತ್ತು ಪ್ರಾಕ್ಸಿ ಮತಗಳ ಸಂಖ್ಯೆಯೂ ಹೆಚ್ಚುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
                ಚುನಾವಣಾ ಸಂಹಿತೆಗೆ ತಿದ್ದುಪಡಿ ತರಬಹುದು:
     ಕೇರಳದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ಕೋವಿಡ್ ರೋಗಿಗಳು, ಸಂಪರ್ಕತಡೆ ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಅಂಚೆ ಮತ್ತು ಪ್ರಾಕ್ಸಿ ಮತಗಳನ್ನು ಪರಿಗಣಿಸಬೇಕಾಗಲಿದೆ. ಚುನಾವಣಾ ಸಂಹಿತೆಯನ್ನು ತಿದ್ದುಪಡಿ ಮಾಡುವ ಅಗತ್ಯದ ಕೂಗು ಕೇಳಿಬಂದಿದೆ.
              ಚುನಾವಣಾ ಕಾಯ್ದೆಗೆ ತಿದ್ದುಪಡಿ ಹೇಗೆ?
       ಕೋವಿಡ್ ನಿಯಂತ್ರಣಗಳ ಹಿನ್ನೆಲೆಯಲ್ಲಿ 65 ವರ್ಷಕ್ಕಿಂತ ಮೇಲ್ಪಟ್ಟ ಜನರು ತಮ್ಮ ಮನೆಗಳನ್ನು ತೊರೆಯುವುದನ್ನು ನಿಷೇಧಿಸಿದೆ.  ಈ ಹಿನ್ನೆಲೆಯಲ್ಲಿಯೇ ಭಾರತದ ಚುನಾವಣಾ ಆಯೋಗವು ಈ ವಯಸ್ಸಿನವರಿಗೆ ಅಂಚೆ ಮತಗಳನ್ನು ನೀಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಆದರೆ, ಅಂಚೆ ಮತದ ಬದಲಿಗೆ  ಪ್ರಾಕ್ಸಿ ಮತದಾನಕ್ಕೆ ಅವಕಾಶ ನೀಡಲು ಕೇರಳ ಸರ್ಕಾರ ಒತ್ತಾಯಿಸಿದೆ.
             ಪ್ರಾಕ್ಸಿ ಮತ!-ಏನಿದು:?
     ಪ್ರಾಕ್ಸಿ ಮತದಾನವೆಂದರೆ ಮತದಾರನ ಪರವಾಗಿ ಮತದಾರರ ಪತ್ನಿ, ಪತಿ, ಮಕ್ಕಳು ಮತ್ತು ಒಡಹುಟ್ಟಿದವರು, ಸಂಬಂಧಿಕರು ಒಳಗೊಂಡವರಲ್ಲಿಯಾರಾದರೂ ಒಬ್ಬರು ಮತ ಚಲಾಯಿಸುವುದಾಗಿದೆ. ಅಂದರೆ ಪರವಾಗಿ ಇನ್ನೊಬ್ಬ ಮತದಾನ ಎಂದರ್ಥ. ಮತದಾರರ ಪರವಾಗಿ ಪ್ರಾಕ್ಸಿ ಮತದಾನಗೈಯ್ಯುವವ ಫೆÇೀಟೋ ಮತ್ತು ಪ್ರಮಾಣೀಕೃತ ದೃಢೀಕರಣವನ್ನು ಸಲ್ಲಿಸಬೇಕು. ಇದಕ್ಕೆ ಮಾದರಿಯನ್ನು  ಆಯೋಗ ಸಿದ್ಧಪಡಿಸುತ್ತದೆ. ಪೆÇೀಲಿಂಗ್ ಅಧಿಕಾರಿಗಳು ಅಂಚೆ ಮತಗಳು ಮತ್ತು ಪ್ರಾಕ್ಸಿ ಮತಗಳಂತೆ ಪರಿಗಣಿಸಬೇಕಾಗುತ್ತದೆ.
           ಮತದಾನದ ನಿಬಂಧನೆಗಳು ಮತದಾರರಿಗೆ ಹೇಗೆ?:
     ಮತದಾನಕ್ಕಾಗಿ ಕೋವಿಡ್ ನಿಬಂಧನೆಗಳನ್ನು ನಿರ್ಧರಿಸಲು ಚುನಾವಣಾ ಆಯೋಗವು ಆರೋಗ್ಯ ತಜ್ಞರೊಂದಿಗೆ ಸಮಾಲೋಚನೆ ನಡೆಸಲಿದೆ. ಮತದಾನ ಕೇಂದ್ರಗಳಲ್ಲಿ ಸಾಮಾಜಿಕ ದೂರವನ್ನು ಕಾಯ್ದುಕೊಳ್ಳುವುದು ಅವಶ್ಯಕ. ಇದಕ್ಕೆ ಮತದಾನಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ. ಮತದಾನದ ಸಮಯವನ್ನು ಒಂದು ಗಂಟೆಗಳಷ್ಟು ಹೆಚ್ಚಿಸಲು ಆಯೋಗ ಚಿಂತಿಸುತ್ತಿದೆ.
           ಚುನಾವಣೆಗಳನ್ನು ವಿಸ್ತರಿಸಲು ಸಾಧ್ಯವಿಲ್ಲವೇ?
      ಆಗಸ್ಟ್ ಮತ್ತು ನವೆಂಬರ್‍ನಲ್ಲಿ ಕೇರಳದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾಗಲಿದೆ  ಎಂದು ಅಧ್ಯಯನಗಳು ಮತ್ತು ಲೆಕ್ಕಾಚಾರಗಳು ತೋರಿಸುತ್ತವೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೊಸ ಆಡಳಿತ ಮಂಡಳಿಗಳು ನವೆಂಬರ್ 12 ರೊಳಗೆ ಸ್ಥಳೀಯ ಸಂಸ್ಥೆಗಳ ಉಸ್ತುವಾರಿ ವಹಿಸಿಕೊಳ್ಳಬೇಕಿರುವುದರಿಂದ ಚುನಾವಣೆಯನ್ನು ವಿಸ್ತರಿಸಲಾಗದು. ಚುನಾವಣೆಯನ್ನು ವಿಸ್ತರಿಸಲು ಸರ್ಕಾರ ಅಥವಾ ಸಿಪಿಎಂಗೆ ಯಾವುದೇ ಆಸಕ್ತಿ ಇಲ್ಲದಿರುವುದೂ ಗಮನಾರ್ಹವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries