ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ನಡೆಸಲಾಗುತ್ತಿರುವ ಅಂಟುರೋಗ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಜರುಗುತ್ತಿರುವ ಜನಜಾಗೃತಿ ಕಾರ್ಯಕ್ರಮಗಳ ಅಂಗವಾಗಿ ಸಾರ್ವಜನಿಕರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ಶಾರ್ಟ್ ಫಿಲಂ(ಕಿರುಚಿತ್ರ), ಡಿಜಿಟಲ್ ಪೆÇೀಸ್ಟರ್ ರಚನೆ ಸ್ಪರ್ಧೆಗಳು ನಡೆಯಲಿವೆ.
ಶಾರ್ಟ್ ಫಿಲಂ ನಿರ್ಮಾಣ ಸ್ಪರ್ಧೆ ಯ ನಿಬಂಧನೆಗಳು ಹೀಗಿವೆ. ಜಿಲ್ಲೆಯ ನಿವಾಸಿಗಳಾದ ಯಾರು ಬೇಕಿದ್ದರೂ ಭಾಗವಹಿಸಬಹುದು. ಡೆಂಗೆ, ಇಲಿ ಜ್ವರಗಳಲ್ಲಿ ಯಾವುದಾದರೊಂದು ವಿಷಯದಲ್ಲಿ ಜಾಗೃತಿ ಮೂಡಿಸುವ ವಿಷಯದಲ್ಲಿ ಚಿತ್ರ ತಯಾರಿಸಬೇಕು. ಮಲೆಯಾಳಂ ಭಾಷೆಯಲ್ಲಿ ಮಾತ್ರ ಚಿತ್ರವಿರಬೇಕು. ಕನಿಷ್ಠ 2 ನಿಮಿಷ, ಗರಿಷ್ಠ 5 ನಿಮಿಷ ಅವಧಯ ಚಿತ್ರವಾಗಿರಬೇಕು. ಶೂಟಿಂಗ್, ಎಡಿಟಿಂಗ್ ಮೊಬೈಲ್ ನಲ್ಲೇ ನಡೆಸಬೇಕು. ವೀಡಿಯೋ, ಶಬ್ದ ಇತ್ಯಾದಿ ಉತ್ತಮ ಗುಣಮಟ್ಟದಿಂದ ಕೂಡಿರಬೇಕು. ಸಿದ್ಧಪಡಿಸಿದ ಚಿತ್ರವನ್ನು demoksgd@gmail.com, kamaljcnhm@gmail.com ಎಂಬ ವಿಳಾಸಕ್ಕೆ ಸಿದ್ಧಪಡಿಸಿದವರ ಹೆಸರು, ವಿಳಾಸ, ದೂರವಾಣಿ ನಂಬ್ರ ಸಹಿತ ಜು.15ರ ಮುಂಚಿತವಾಗಿ ಕಳುಹಿಸಬೇಕು.
ಡಿಜಿಟಲ್ ಪೆÇೀಸ್ಟರ್ ಡಿಸೈನ್ ಸ್ಪರ್ಧೆಯ ನಿಬಂಧನೆಗಳು ಇಂತಿವೆ. ಜಿಲ್ಲೆಯ ಹೈಯರ್ ಸೆಕೆಂಡರಿ, ಕಾಲೇಜು ವಿದ್ಯಾರ್ಥಿಗಳಿಗಾಗಿ ಈ ಸ್ಪರ್ಧೆ ಇರುವುದು. ಡೆಂಗೆ, ಇಲಿ ಜ್ವರ, ಹಳದಿರೋಗ, ಜಲೋದರ ಈ ಅಂಟುರೋಗಗಳು ವಿಷಯವಾಗಿದೆ. ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ಪೆÇೀಸ್ಟರ್ ನಿರ್ಮಿಸಬೇಕು. ಡಿಜಿಟಲ್ ಪೆÇೀಸ್ಟರ್ ಗಳಲ್ಲಿ ಕೇರಳ ಸರಕಾರ, ಆರೋಗ್ಯ ಇಲಾಖೆ, ಆರೋಗ್ಯ ಕೇರಳ ಇವುಗಳ ಲಾಂಛನ(ಎಂಬ್ಲಂ) ಇರಬೇಕು. ಪೆÇೀಸ್ಟರ್ ನಿರಿಸಿದವರ ಹೆಸರು, ವಿಳಾಸ, ದೂರವಾಣಿ ನಂಬ್ರ ಇತ್ಯಾದಿಗಳು ಇರಕೂಡದು. ಪೆÇೀಸ್ಟರ್ ಗಳಲ್ಲಿ "ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ), ರಾಷ್ಟ್ರೀಯ ಆರೋಗ್ಯ ದೌತ್ಯ, ಕಾಸರಗೋಡು' ಎಂದು ನಮೂದಿಸಿರಬೇಕು. ಸಿದ್ಧಗೊಂಡ ಡಿಜಿಟಲ್ ಪೆÇೀಸ್ಟರ್ ಗಳನ್ನುdemoksgd@gmail.com, kamaljcnhm@gmail.com ಎಂಬ ವಿಳಾಸಕ್ಕೆ ಸಿದ್ಧಪಡಿಸಿದ ವಿದ್ಯಾರ್ಥಿಗಳ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಸಹಿತ ಜು.10ರ ಮುಂಚಿತವಾಗಿ ಕಳುಹಿಸಬೇಕು. ಮಾಹಿತಿಗೆ ದೂರವಾಣಿ ಸಂಖ್ಯೆ: 9947334637.





