ಕೇವಲ ಎರಡ್ಮೂರು ತಿಂಗಳ ಹಿಂದಿನ ಫ್ಲ್ಯಾಶ್ ಬ್ಯಾಕ್ ಗೆ ಹೋದರೆ, ಕೋವಿಡ್-19 ಕೇಂದ್ರಬಿಂದು 'ಯೂರೋಪ್' ಆಗಿತ್ತು. ಯು.ಕೆ, ಇಟಲಿ, ಫ್ರಾನ್ಸ್, ಸ್ಪೇನ್ ಮತ್ತು ಜರ್ಮನಿಯಲ್ಲಿ ಕೊರೊನಾ ವೈರಸ್ ಮರಣ ಮೃದಂಗ ಬಾರಿಸುತ್ತಿತ್ತು. ದಿನಕ್ಕೆ ನೂರಾರು ಜನ ಕೋವಿಡ್-19 ಗೆ ಬಲಿಯಾಗುತ್ತಿದ್ದರು.
ಆದ್ರೀಗ, ಕೋವಿಡ್-19 ಗೆ ದಕ್ಷಿಣ ಅಮೇರಿಕಾ ಕೇಂದ್ರಬಿಂದು ಆಗಿದ್ದು.. ಯೂರೋಪ್ ನಲ್ಲಿ ಕೊರೊನಾ ಫುಲ್ ಸೈಲೆಂಟ್ ಆಗಿದೆ. ಅದರಲ್ಲೂ, ಯು.ಕೆ, ಇಟಲಿ ಮತ್ತು ಫ್ರಾನ್ಸ್ ನಲ್ಲೀಗ ಕೊರೊನಾ ವೈರಸ್ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ.
ಯು.ಕೆ, ಇಟಲಿ, ಫ್ರಾನ್ಸ್, ಜರ್ಮನಿ ಮತ್ತು ಸ್ಪೇನ್ ನಲ್ಲಿ ಈಗ ಪ್ರತಿನಿತ್ಯ ದಾಖಲಾಗುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಕಂಡಿದೆ. ಸಾವಿನ ಪ್ರಮಾಣ ಕೂಡ ಕುಸಿದಿದೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸರ್ ಬಳಕೆಯಿಂದಾಗಿ ಈ ದೇಶಗಳು ಕೊರೊನಾ ಚೇನ್ ಲಿಂಕ್ ನ ಬ್ರೇಕ್ ಮಾಡಿವೆ.
ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಕೊರೊನಾ ಸುಳಿಯಲ್ಲಿ ಸಿಲುಕಿದ್ದ ಈ ದೇಶಗಳಲ್ಲಿ ಇದೀಗ ಜನ ಜೀವನ ಸುಧಾರಿಸಿದೆ. ಹೀಗೆ, ಭಾರತದಲ್ಲಿ ಕೊರೊನಾ ಆರ್ಭಟ ಯಾವಾಗ ಕಡಿಮೆ ಆಗುತ್ತೋ, ಎಂಬುದೇ ಜನರ ಕನವರಿಕೆ.


