HEALTH TIPS

ನೋವಲ್ ಕೊರೊನಾ-ರಾಜ್ಯದಲ್ಲಿಂದು 885 ಕ್ಕೆ ಇಳಿಕೆ- 968 ಮಂದಿ ರೋಗ ಮುಕ್ತಿ

   
         ತಿರುವನಂತಪುರ: ರಾಜ್ಯ ವ್ಯಾಪಕವಾಗಿ ನೋವಲ್ ಕೊರೊನಾ ವೈರಸ್ ಒಂದಷ್ಟು ಸಮಾಧಾನಕ್ಕೆ ಕಾರಣವಾಗಿದ್ದು ಸೋಂಕಿತರಿಂದ ಹೆಚ್ಚು ಸೋಂಕು ಮುಕ್ತರಾದವರ ಸಂಖ್ಯೆ ಹೆಚ್ಚಿರುವುಉದ ಸಮಾಧಾನಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಇಂದು 885 ಮಂದಿ ಸೋಂಕಿಗೊಳಗಾಗಿದ್ದರೆ 968 ಮಂದಿ ರೋಗ ಮುಕ್ತರಾದರು. ಇಂದು ಸೋಂಕಿಗೊಳಗಾದವರ ಪೈಕಿ 724 ಮಂದಿಗೆ ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. ಅವುಗಳಲ್ಲಿ 54 ಮೂಲಗಳು ಸ್ಪಷ್ಟವಾಗಿಲ್ಲ ಎಂದು ಸಿಎಂ ಹೇಳಿದರು. ಕೋವಿಡ್ ಪರಿಶೀಲನಾ ಸಭೆಯ ನಂತರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯದ ದೈನಂದಿನ ವರದಿ ನೀಡಿ ಅವರು ಮಾತನಾಡಿದರು.
               ಕೋವಿಡ್ ಋಣಾತ್ಮಕ ಪ್ರಕರಣಗಳು:
     ಕೋವಿಡ್ ದೃಢಪಟ್ಟಿರುವವರಿಂತ ಹೆಚ್ಚು ಜನರನ್ನು ಇಂದು ಗುಣಮುಖರಾಗಿದ್ದಾರೆ ಎಂಬುದು ಗಮನಾರ್ಹ. ತಿರುವನಂತಪುರಂ 101, ಕೊಲ್ಲಂ 54, ಪತ್ತನಂತಿಟ್ಟು 81, ಇಡುಕ್ಕಿ 96, ಕೊಟ್ಟಾಯಂ 74, ಆಲಪ್ಪುಳ 49 ಎರ್ನಾಕುಳಂ 151, ತ್ರಿಶೂರ್ 12, ಪಾಲಕ್ಕಾಡ್ 63, ಮಲಪ್ಪುರಂ 24, ಕೋಝಿಕ್ಕೋಡ್ 66, ವಯನಾಡ್ 21, ಕಣ್ಣೂರು 108 ಮತ್ತು ಕಾಸರಗೋಡು 68 ಮಂದಿ ಗುಣಮುಖರಾದರು.
             ಕೋವಿಡ್ ಧನಾತ್ಮಕ ಪ್ರಕರಣಗಳು:
      ಕೋವಿಡ್ ಇಂದು ರಾಜ್ಯದಲ್ಲಿ 885 ಪ್ರಕರಣಗಳನ್ನು ದೃಢಪಡಿಸಲಾಗಿದೆ.  ತಿರುವನಂತಪುರಂನಲ್ಲಿ 167 ಜಿಲ್ಲೆಯಲ್ಲಿ ಅತಿ ಹೆಚ್ಚು ಸೋಂಕಿತರು ಇಂದೂ ಇರುವರು.  ಕೊಲ್ಲಂ 133, ಪತ್ತನಂತಿಟ್ಟು 23, ಇಡುಕ್ಕಿ 29, ಕೊಟ್ಟಾಯಂ 50, ಆಲಪ್ಪುಳ 44, ಎರ್ನಾಕುಳಂ 69, ತ್ರಿಶೂರ್ 33, ಪಾಲಕ್ಕಾಡ್ 58, ಮಲಪ್ಪುರಂ 58, ಕೋಝಿಕ್ಕೋಡ್ 82, ವಯನಾಡ್ 15, ಕಣ್ಣೂರು 18 ಮತ್ತು ಕಾಸರಗೋಡು 106 ಜಿಲ್ಲಾವಾರು ಅಂಕಿ ಅಂಶಗಳಾಗಿವೆ.
                ಬದುಕುಳಿದವರ ಸಂಖ್ಯೆಯಲ್ಲಿ ಹೆಚ್ಚಳ:
      ಕೋವಿಡ್ ದೃಢಪಡಿಸಿದ್ದಕ್ಕಿಂತ ಇಂದು ರಾಜ್ಯದಲ್ಲಿ ಹೆಚ್ಚಿನ ಜನರು ರೋಗ ಮುಕ್ತರಾಗಿರುವುದು ಒಂದು ಸಾಧನೆಯಾಗಿದೆ. ರೋಗಿಗಳ ಸಂಖ್ಯೆ ಹೆಚ್ಚಾದಂತೆ ಸಂಪೂರ್ಣ ಲಾಕ್-ಡೌನ್ ಸೇರಿದಂತೆ ನಿಯಂತ್ರಣಗಳ ಅಗತ್ಯವು ಪ್ರಬಲವಾಗಿರುವ ಸಮಯದಲ್ಲಿ ಬದುಕುಳಿದವರ ಸಂಖ್ಯೆಯಲ್ಲಿನ ಹೆಚ್ಚಳವು ಕಂಡುಬಂದಿದೆ. ಈವರೆಗೆ ರಾಜ್ಯದಲ್ಲಿ ದೃಢಪಡಿಸಿದ ಪ್ರಕರಣಗಳ ಸಂಖ್ಯೆ 16,995 ಕ್ಕೆ ತಲುಪಿದೆ. ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದರೂ ಸಂಬಂಧಿತ ಪರೀಕ್ಷೆಗಳಲ್ಲಿ ಕಡಿಮೆಯಾಗದೆಂದು ಸಿಎಂ ಹೇಳಿದರು.
             ರಾಜ್ಯದಲ್ಲಿ ಇಂದು ನಾಲ್ಕು ಕೋವಿಡ್ ಸಾವುಗಳು:
       ರಾಜ್ಯದಲ್ಲಿ ಇಂದು ನಾಲ್ಕು ಕೋವಿಡ್ ಸಾವುಗಳು ವರದಿಯಾಗಿವೆ. ನಿನ್ನೆ ಚೆಂಗನ್ನೂರಿನಲ್ಲಿ ನಿಧನರಾದ ತೆಂಕಾಶಿ ಮೂಲದ ಬಿನೂರಿ, ನಿನ್ನೆ ನಿಧನರಾದ ಮೊಹಮ್ಮದ್ ಕೋಯಾ, ತಿರುವೂರಿನಲ್ಲಿ ನಿರೀಕ್ಷಣೆಯಲ್ಲಿದ್ದಾಗ ಮೃತಪಟ್ಟ ಅನ್ನಿ ಆಂಟನಿ ಮತ್ತು ಮೊಹಮ್ಮದ್, ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಪ್ರಕರಣಗಳ ಸಂಖ್ಯೆ ಹೆಚ್ಚಾದಂತೆ ಹೆಚ್ಚುತ್ತಿರುವ ಮರಣ ಪ್ರಮಾಣವು ಹಿನ್ನಡೆಯಾಗಿದೆ. ಚಿಕಿತ್ಸೆ ಪಡೆಯುತ್ತಿರುವ ಅನೇಕರ ಇತರ ಅನಾರೋಗ್ಯದ ಕಾರಣ ಸಾವಿನ ಪ್ರಮಾಣ ಹೆಚ್ಚಾಗಬಹುದು ಎಂಬ ಸೂಚನೆಗಳಿವೆ.
             ತಿರುವನಂತಪುರಂ ಮತ್ತು ಎರ್ನಾಕುಳಂ ನಲ್ಲಿ ತೀವ್ರತರ:
      ತಿರುವನಂತಪುರಂ ಮತ್ತು ಎರ್ನಾಕುಳಂ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಎರಡೂ ಜಿಲ್ಲೆಗಳಲ್ಲಿ ಸಂಪರ್ಕ ಮತ್ತು ರೋಗನಿರ್ಣಯ ಮಾಡಲು ಇನ್ನೂ ಬಹಳಷ್ಟು ಸೋಂಕಿತರಿರುವರೆಂದು ತಿಳಿದುಬಂದಿದೆ. ತಿರುವನಂತಪುರದ ಕರಾವಳಿ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿರ್ಭಂಧಗಳು ಮುಂದುವರೆದಿದೆ. ಜಿಲ್ಲಾ ಆಡಳಿತವು ಕಂಟೋನ್ಮೆಂಟ್  ವಲಯಗಳಲ್ಲಿ ಕ್ವಾರಂಟೈನ್ ತೀವ್ರಗೊಳಿಸಿದೆ.ಪುಳ್ಳುವಿಲಾದ 6 ವಾರ್ಡ್‍ಗಳಲ್ಲಿ ಕೋವಿಡ್ ರೋಗ ವ್ಯಾಪಕತೆ ಮುಂದುವರಿದಿದೆ. ಈ ಪ್ರದೇಶದ 14, 16 ಮತ್ತು 18 ವಾರ್ಡ್‍ಗಳನ್ನು ಜು. 15 ರಂದು ಕಂಟೈನ್‍ಮೆಂಟ್ ವಲಯಕ್ಕೆ ಸ್ಥಳಾಂತರಿಸಲಾಗಿತ್ತು. ಎರ್ನಾಕುಲಂ ಜಿಲ್ಲೆಯ ಚೆಲ್ಲಾನಮ್ ಕ್ಲಸ್ಟರ್‍ನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೆ, ಮಟ್ಟಂಚೇರಿ ಮತ್ತು ಫೆÇೀರ್ಟ್ ಕೊಚ್ಚಿ ಪ್ರದೇಶಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ.
            ಸಂಪೂರ್ಣ ಲಾಕ್‍ಡೌನ್ ಅಗತ್ಯವೇ?
      ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಅಗತ್ಯವಿದೆ ಎಂಬ ವಾದವು ಬಲವಾಗಿದೆ. ಆರೋಗ್ಯ ಇಲಾಖೆ ಮತ್ತು ತಜ್ಞರು ಇದೇ ರೀತಿಯ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ. ಆದರೆ ರಾಜ್ಯ ವ್ಯಾಪಕ ಲಾಕ್ ಡೌನ್ ಬೇಡ ಎಂಬ ಅಭಿಪ್ರಾಯಗಳೂ ಕೇಳಿಬಂದಿದೆ. ಕ್ಯಾಬಿನೆಟ್ ವಲಯದ ಪ್ರಕಾರ, ಪ್ರಸ್ತುತ ಪರಿಸ್ಥಿತಿಯನ್ನು ಎದುರಿಸಲು ರಾಜ್ಯವು ಸಕಲ ಸೌಲಭ್ಯಗಳನ್ನು ಹೊಂದಿದೆ. ರಾಜ್ಯದ ಮೇಲೆ ಸಂಪೂರ್ಣ ನಿಯಂತ್ರಣ ಹೇರುವ ಬದಲು ಸ್ಥಳೀಯ ನಿಯಂತ್ರಣಗಳು ಅಗತ್ಯ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಅಭಿಪ್ರಾಯಪಟ್ಟರು. ಸೋಮವಾರ ನಡೆಯುವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries