ತಿರುವನಂತಪುರ: ರಾಜ್ಯದ ಮುಖ್ಯ ಕಾರ್ಯದರ್ಶಿ ವಿಶ್ವಾಸ್ ಮೆಹ್ತಾ ಅವರ ವಾಹನ ಚಾಲಕನಿಗೆ ಗುರುವಾರ ಕೋವಿಡ್ ಸೋಂಕು ದೃಢಗೊಂಡ ಹಿನ್ನೆಲೆಯಲ್ಲಿ ಮುಹ್ತಾರ ಜೊಲ್ಲಿನ ಮಾದರಿಯನ್ನು ತುರ್ತಾಗಿ ಪರಿಶೀಲನೆಗೆ ರವಾನಿಸಲಾಗಿದೆ.
ವೆಂಗಾಡ್ ನಿವಾಸಿಯಾದ 40 ವರ್ಷ ಹರೆಯದ ಚಾಲಕನಿಗೆ ನಿನ್ನೆ ಕೋವಿಡ್ ದೃಢಪಡಿಸಲಾಗಿತ್ತು. ಅವರು ಈ ತಿಂಗಳ 4 ರಂದು ಸಚಿವಾಲಯಕ್ಕೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಯ ಜೊಲ್ಲಿನ ಮಾದರಿಯನ್ನು ಪರಿಶೀಲನೆಗೆ ಕಳುಹಿಸಲಾಗಿದೆ. ಈ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಆರೋಗ್ಯ ಸಚಿವ ಕೆ.ಕೆ.ಶೈಲಜಾ ಅವರನ್ನು ದ್ವಿತೀಯ ಸಂಪರ್ಕ ಪಟ್ಟಿಯಲ್ಲಿ ಸೇರಿಸಲಾಗಿದೆ.
ರಾಜ್ಯದಲ್ಲಿ ಕೋವಿಡ್ ಹರಡುವಿಕೆ ಘಟನೆಗಳು ಹೆಚ್ಚುತ್ತಿರುವ ಮಧ್ಯೆ ವಿಶ್ವಾಸ್ ಮೆಹ್ತಾ ಅವರನ್ನು ಪ್ರಾಥಮಿಕ ಸಂಪರ್ಕ ಪಟ್ಟಿಗೆ ಸೇರಿಸಲಾಯಿತು. ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳು ಬಿಡುಗಡೆ ಮಾಡಿಲ್ಲ.


