HEALTH TIPS

ಲಾಕ್‍ಡೌನ್ ಉಲ್ಲಂಘನೆಯ ದಂಡದಲ್ಲಿ ಹೊಸ ಮಾರ್ಗಸೂಚಿ-ಪರಿಷ್ಕøತ ಮಾನದಂಡ ಬಿಡುಗಡೆ


           ತಿರುವನಂತಪುರ: ಕೋವಿಡ್ ಬಾಧಿತರ ಸಂಖ್ಯೆ ದಿನೇದಿನೇ ರಾಜ್ಯದಲ್ಲಿ ಹೆಚ್ಚಳಗೊಳ್ಳುತ್ತಿದ್ದು ಗುರುವಾರ ರಾಜ್ಯದಲ್ಲಿ ಈವರೆಗಿನ ಅತಿ ಹೆಚ್ಚು ಸೋಂಕಿತರನ್ನು ಪತ್ತೆಹಚಚ್ಚಲಾಗಿದೆ. ಮೊನ್ನೆ ಕೋವಿಡ್ ಸೋಂಕಿತರ ಸಂಖ್ಯೆ 301 ಆಗಿದ್ದರೆ ನಿನ್ನೆಗೆ 38ರಷ್ಟು ಹೆಚ್ಚಳವಾಗಿದೆ.  ತಿರುವನಂತಪುರ ಮತ್ತು ಎರ್ನಾಕುಳಂ ಜಿಲ್ಲೆಗಳಲ್ಲಿ ಸೋಂಕು ಸಂಪರ್ಕ ಕಾರಣ ಹೆಚ್ಚುತ್ತಿರುವುದನ್ನೂ ಗುರುತಿಸಲಾಗಿದೆ. ಇದನ್ನು ಅನುಸರಿಸಿ, ತಿರುವನಂತಪುರ ನಗರವು ಟ್ರಿಪಲ್ ಲಾಕ್‍ಡೌನ್‍ನಲ್ಲಿದೆ. ರಾಜ್ಯವು ಕೋವಿಡ್ ನ್ನು ಕಟ್ಟುನಿಟ್ಟಿನ  ನಿರ್ಬಂಧಗಳೊಂದಿಗೆ ನಿಯಂತ್ರಿಸಲು ಹೆಣಗಾಡುತ್ತಿದೆ. ಕೋವಿಡ್ ಪ್ರಕರಣಗಳು ಇನ್ನಷ್ಟು ಹೆಚ್ಚಿದರೆ ರಾಜ್ಯದಲ್ಲಿ ಇನ್ನೊಂದು ಲಾಕ್‍ಡೌನ್ ಹೇರುವ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ.  ಏತನ್ಮಧ್ಯೆ, ರಾಜ್ಯದಲ್ಲಿ ಲಾಕ್ಡೌನ್ ಉಲ್ಲಂಘನೆಗೆ ವಿಧಿಸಲಾದ ದಂಡವನ್ನು ರಾಜ್ಯ ಸರ್ಕಾರ ಪುನಃ ರಚಿಸಿದೆ. ಈ ನಿಟ್ಟಿನಲ್ಲಿ ಸರ್ಕಾರ ಆದೇಶ ಹೊರಡಿಸಿದೆ.
             ಲಾಕ್‍ಡೌನ್ ಉಲ್ಲಂಘನೆಗಳಿಗೆ ದಂಡ:
       ಲಾಕ್ ಡೌನ್ ಉಲ್ಲಂಘನೆಗೆ ರಾಜ್ಯ ವಿಧಿಸುವ ದಂಡದ ಮೊತ್ತವನ್ನು ಸರ್ಕಾರ ಹೊಸತಾಗಿ ಮರು ರೂಪಿಸಿದೆ. ಲಾಕ್‍ಡೌನ್ ಮೀರಿದರೆ  200 ರೂ.ಗಳಿಂದ 5,000 ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಲಾಕ್ ಡೌನ್ ನಡೆಸುತ್ತಿರುವ ಸ್ಥಳಗಳಲ್ಲಿ ಸಾರ್ವಜನಿಕವಾಗಿ ಉಗುಳುವುದಕ್ಕೆ 200 ರೂ ದಂಡ ನಿಗದಿಪಡಿಸಲಾಗಿದೆ.
             ವಿವಾಹ ಸಮಾರಂಭಗಳ ದಂಡ ಶುಲ್ಕದಲ್ಲಿ ಹೆಚ್ಚಳ:
    ಲಾಕ್‍ಡೌನ್ ಜಾರಿಯಲ್ಲಿರುವ ವಲಯಗಳಲ್ಲಿ ವಿವಾಹಗಳನ್ನು ನಡೆಸಬಹುದು. ಆದರೆ ನಿಗದಿತ ಸಂಖ್ಯೆಯಿಂದ ಹೆಚ್ಚು ಜನರು ಪಾಲ್ಗೊಂಡರೆ ವ್ಯಕ್ತಿಯೊಬ್ಬನಿಂದ ಸಾವಿರ ರೂ. ಗಂತೆ ದಂಡ ವಿಧಿಸಲಾಗುತ್ತದೆ. ದಂಡ ವಿಧಿಸುವ ಅಧಿಕಾರ ಆಯಾ ಪೆÇಲೀಸ್ ಠಾಣೆಗಳ ಅಧಿಕಾರಿಗಳಿಎ ಸೇರಿರುವುದಾಗಿರುತ್ತದೆ.
              ಪೂನ್ತಾರದಲ್ಲಿ ಹೆಚ್ಚುವರಿ ಕಂಟೈನ್‍ಮೆಂಟ್ ವಲಯಗಳು- ನಿರ್ಬಂಧ ಮುದುವರಿಕೆ:
     ತಿರುವಂತಪುರ ಕಾರ್ಪೋರೇಶನ್ ಅಧೀನದ ಪೂನ್ತಾರ, ಮಾಣಿಕಿಲಕ್ಕಂ ಮತ್ತು ಇತರ ಗುರುತಿಸಲಾದ ವಾರ್ಡ್‍ಗಳನ್ನು ಕಂಟೋನ್ಮೆಂಟ್  ವಲಯಗಳಾಗಿ ಗುರುರತಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿರುವರು. ಈ ಪ್ರದೇಶಗಳಲ್ಲಿನ ಹಾಲು, ದಿನಸಿ ಮತ್ತು ಪಡಿತರ ಅಂಗಡಿಗಳು ಬೆಳಿಗ್ಗೆ 7 ರಿಂದ 11 ರವರೆಗೆ ಕಾರ್ಯನಿರ್ವಹಿಸಲಿವೆ. ಬೆಳಿಗ್ಗೆ 11 ರಿಂದ ಮಧ್ಯಾಹ್ನ 12 ರವರೆಗೆ ಸರಬರಾಜುದಾರರಿಂದ ಸ್ಟಾಕ್‍ಗೆ ಪರವಾನಗಿಗಳೂ ಲಭ್ಯವಿದೆ. ನಿರ್ಣಯಿತ ಕಂಟೋನ್ಮೆಂಟ್ ವಲಯಗಳಲ್ಲಿ ಸರ್ಕಾರ ಪೂರೈಸುವ ಐದು ಕೆಜಿ ಉಚಿತ ಅಕ್ಕಿಯನ್ನು ಹತ್ತಿರದ ಪಡಿತರ ಅಂಗಡಿಗಳಿಂದ ಪಡೆಯಬಹುದು ಎನ್ನಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries