ಪಟ್ಟಾಂಬಿ: ಜನವಸತಿ ಪ್ರದೇಶಗಳಿಗಿಂತ 50 ಮೀಟರ್ ಅಂತರದಲ್ಲಿ ಕ್ವಾರೆಗಳು ಕಾರ್ಯನಿರ್ವಹಿಸಬಹುದೆಂಬ ಈಗೀನ ರಾಜ್ಯ ಸರ್ಕಾರದ ನಿಯಮವನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿರಣ(ಟ್ರಿಬ್ಯುನಲ್) ರದ್ದುಗೊಳಿಸಿದೆ.
ಸ್ಪೋಟಕಗಳನ್ನು ಬಳಸಿ ಕಾರ್ಯವೆಸಗುವ ಕ್ವಾರೆಗಳು 200 ಮೀಟರ್ ಅಂತರದಲ್ಲೂ, ಸ್ಪೋಟಕ ರಹಿತ ಕ್ವಾರೆಗಳು 100 ಮೀಟರ್ ಅಂತರದಲ್ಲಿ ಕಾರ್ಯವಸೆಗಬಹುದೆಂದು ಹಸಿರು ನ್ಯಾಯಾಧಿಕರಣ ನೀಡಿದ ಆದೇಶದಲ್ಲಿ ತಿಳಿಸಲಾಗಿದೆ.
ಈ ಮೂಲಕ ಜನವಾಸ ಕೇಂದ್ರವಿರುವಲ್ಲಿ 200 ಹಾಗೂ ನೂರು ಮೀಟರ್ ಅಂತರದಲ್ಲಿ ಮಾತ್ರ ಇನ್ನು ಕ್ವಾರೆಗಳು ಕಾರ್ಯವೆಸಗಬಹುದಾಗಿದೆ. ಈ ಕಾನೂನು ಮೀರಿರುವ ಕ್ವಾರೆಗಳು ಮುಂದಿನ ದಿನಗಳಲ್ಲಿ ಕಾರ್ಯಚಟುವಟಿಗಳನ್ನು ನಿಲ್ಲಿಸಬೇಕಾಗುತ್ತದೆ. ಜಸ್ಟೀಸ್ ಎ.ಕೆ.ಗೋಯಲ್ ಅಧ್ಯಕ್ಷರಾಗಿರುವ ನ್ಯಾಯ ಸಮಿತಿ ಈ ತೀರ್ಪು ನೀಡಿದೆ.


