HEALTH TIPS

ಅಧಿಕ್ಯದ ಕೋವಿಡ್ ಭೀತಿ-ಹೆಚ್ಚುತ್ತಿರುವರೋಗಿಗಳು-ಆಯುರ್ವೇದ ಸಹಿತ ವಿವಿಧ ವೈದ್ಯರ ನೇಮಕಾತಿಗೆ ನಿರ್ಧಾರ

   
        ತಿರುವನಂತಪುರ: ರಾಜ್ಯದಲ್ಲಿ ವ್ಯಾಪಕಗೊಳ್ಳುತ್ತಿರುವ ಕೋವಿಡ್ ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವ ಕ್ರಮಗಳನ್ನು ರಾಜ್ಯ ಸರ್ಕಾರ ತೀವ್ರಗೊಳಿಸಿದೆ. ಕೋವಿಡ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 10,000 ದಾಟಿರುವುದರಿಂದ ರಾಜ್ಯದ ವಿವಿಧ ಭಾಗಗಳಲ್ಲಿ ನೂರಾರು ಪ್ರಾಥಮಿಕ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.
       ಆರೋಗ್ಯ ಇಲಾಖೆಯಡಿ ಪ್ರಾಥಮಿಕ ಆರೈಕೆ ಕೇಂದ್ರಗಳಿಗೆ  ನಿಯೋಜಿಸಲು ಸಾಕಷ್ಟು ಆರೋಗ್ಯ ಕಾರ್ಯಕರ್ತರು ಇಲ್ಲದ ಸ್ಥಿತಿ ಈಗಿನದು. ಈ ಕಾರಣದಿಂದ  ವಿವಿಧ ವೈದ್ಯಕೀಯ ವಿಭಾಗಗಳಿಂದ ಮತ್ತು ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳನ್ನು ಪ್ರಾಥಮಿಕ ಆರೈಕೆ ಕೇಂದ್ರಗಳಿಗೆ ನಿಯೋಜಿಸಲು ಸರ್ಕಾರ ನಿರ್ಧರಿಸಿದೆ.
       ಕೋವಿಡ್ ಚಿಕಿತ್ಸೆಗೆ ಆಯುರ್ವೇದ, ಹೋಮಿಯೋಪತಿ, ಆಯುಷ್ ವೈದ್ಯರು ಮತ್ತು ದಂತವೈದ್ಯರನ್ನು ನೇಮಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಅವರನ್ನು ರಾಜ್ಯದ ವಿವಿಧ ಪ್ರಾಥಮಿಕ ಆರೈಕೆ ಕೇಂದ್ರಗಳಲ್ಲಿ ತಕ್ಷಣ ನೇಮಕ ಮಾಡಲಾಗುತ್ತದೆ.
       ವೈದ್ಯಕೀಯ ಅಧಿಕಾರಿಗಳು, ಆಯುಷ್ / ದಂತ ಶಸ್ತ್ರಚಿಕಿತ್ಸಕರು, ಸಿಬ್ಬಂದಿ ದಾದಿಯರು, ಲ್ಯಾಬ್ ತಂತ್ರಜ್ಞರು, ಔಷಧ ತಜ್ಞರು ಮತ್ತು ವಿವಿಧ ವೈದ್ಯಕೀಯ ಕೋರ್ಸ್‍ಗಳನ್ನು ಕಲಿಯುತ್ತಿರುವ ಅಂತಿಮ ವರ್ಷದ ವಿದ್ಯಾರ್ಥಿಗಳು ಇನ್ನು ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಕರ್ತವ್ಯದಲ್ಲಿರುತ್ತಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries