ಪೆರ್ಲ: ಗಡಿನಾಡು ಕಾಸರಗೋಡು ಜಿಲ್ಲೆಯನ್ನು ಕೇಂದ್ರೀಕರಿಸಿ ಎರಡು ಡಿಜಿಟಲ್ ಮಾಧ್ಯಮಗಳು ಶನಿವಾರ ಉದ್ಘಾಟನೆಗೊಂಡಿವೆ. "ಯಕ್ಷಾಂತರಂಗ"ಎಂಬ ಹೆಸರಿನ ಯು ಟ್ಯೂಬ್ ಚಾನಲ್ ಮತ್ತು"ನ್ಯೂಸ್ ಕಾಸರಗೋಡು 247"ಎಂಬ ಹೆಸರಿನ ನ್ಯೂಸ್ ಪೆÇೀರ್ಟಲ್ ಈ ವೇಳೆ ಅನಾವರಣಗೊಂಡಿವೆ.ಯಕ್ಷ ಸ್ನೇಹಿ ಬಳಗ ಪೆರ್ಲ ಮತ್ತು ಶೇಣಿ ರಂಗ ಜಂಗಮ ಟ್ರಸ್ಟ್ (ರಿ)ಕಾಸರಗೋಡು ಸಂಘಟನೆಗಳ ಮುಖವಾಣಿಯಾಗಿ ಈ ಮಾಧ್ಯಮಗಳು ಕಾರ್ಯ ಪ್ರವರ್ತಿಸಲಿವೆ.ಯಕ್ಷಗಾನದ ದಿಗ್ಗಜ ಹರಿದಾಸ ಡಾ.ಶೇಣಿ ಗೋಪಾಲಕೃಷ್ಣ ಭಟ್ಟರ ಸ್ಮರಣಾರ್ಥ ನಡೆಯುವ ಕಾರ್ಯಕ್ರಮಗಳಿಗೆ ಈ ಮಾಧ್ಯಮಗಳು ಭೂಮಿಕೆಯಾಗಲಿವೆ.
ಶನಿವಾರ ಪೆರ್ಲದ ದಿ. ಬಲಿಪ ನಾರಾಯಣ ಭಾಗವತ ಸ್ಮೃತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಈ ಮಾಧ್ಯಮಗಳ ಅನಾವರಣ ನಡೆದಿದೆ. ಸರ್ಕಾರ ಮತ್ತು ಆರೋಗ್ಯ ಇಲಾಖೆ ತಿಳಿಸಿರುವ ಕೋವಿಡ್ ಪ್ರತಿರೋಧ ಕಟ್ಟು ನಿಟ್ಟು ಪಾಲಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಚಿತ್ರೀಕರಿಸಿ ಈ ಸಮಾರಂಭ ವಿಶಿಷ್ಟವಾಗಿ ಜರಗಿತು.ಕಿರಿಯ ಕಲಾವಿದ ಸಮೃದ್ದ ಪುಣಿಂಚಿತ್ತಾಯ ಪೆರ್ಲ ದೀಪ ಬೆಳಗಿ ಮಾಧ್ಯಮಗಳನ್ನು ಉದ್ಘಾಟಿಸಿದರು.
ಉಭವ ಸಂಘಟನೆಗಳ ರೂವಾರಿ ಡಾ. ಸತೀಶ ಪುಣಿಂಚತ್ತಾಯ ಪೆರ್ಲ ಅಧ್ಯಕ್ಷತೆ ವಹಿಸಿದ್ದರು. ಕಲಾವಿದ ಶೇಣಿ ವೇಣುಗೋಪಾಲ ಭಟ್ ಪ್ರಧಾನ ಭಾಷಣ ಮಾಡಿದರು. ಕಲಾವಿದ ಅನೂಪ್ ಸ್ವರ್ಗ ಕೀರ್ತನಾಲಾಪನೆ ನಡೆಸಿದರು. ಮಣಿರಾಜ್ ವಾಂತಿಚ್ಚಾಲು ಛಾಯಾಗ್ರಹಣದಲ್ಲಿ ಸಹಕರಿಸಿದರು. ನಾರಾಯಣ ಶರ್ಮ ನೀರ್ಚಾಲು, ಅನ್ವಯ ಕೃಷ್ಣ, ರಾಜೇಶ್ ಶೆಟ್ಟಿ ಪಾಲೆಪ್ಪಾಡಿ, ವಿಷ್ಣು ಭಟ್ ಖಂಡೇರಿ, ಶ್ರೀಶ ನಾರಾಯಣ ಕೋಳಾರಿ, ಹರೀಶ್ ಗೋಳಿತ್ತಡ್ಕ, ಹೇಮಂತ ಕೃಷ್ಣ ರೆಂಜತಮೂಲೆ, ಶಿವಾನಂದ ಶೆಟ್ಟಿ ಪೆರ್ಲ ಮೊದಲಾದವರು ಸಹಕರಿಸಿದರು.


