ಕಾಸರಗೋಡು: ಕಾಞಂಗಾಡ್ ಕ್ಷೇತ್ರದಲ್ಲಿ ಕಿಪ್ಬಿ ಮೂಲಕ 866 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಯೋಜನೆ ಅನುಷ್ಠಾನಗೊಂಡಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ಹೇಳಿದರು.
ಚಾಮುಂಡಿಕುನ್ನು-ಬಂದಡ್ಕ ರಸ್ತೆ ಮೆಕ್ಡಾಂ ಡಾಮರೀಕರಣ, ಬಾಲಂತೋಡು- ಮಚ್ಚಪ್ಪಲ್ಲಿ ಮತ್ತು ಪನತ್ತಡಿ ರಸ್ತೆ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ನೆರವೇರಿಸಿ ಸಚಿವರು ಮಾತನಾಡಿದರು.
ಜಿಲ್ಲೆಯ ಹಿಂದುಳಿದಿರುವಿಕೆಯನ್ನು ಪರಿಹರಿಸಲು ರಾಜ್ಯ ಸರ್ಕಾರವು ಸಮಗ್ರ ಕ್ರಮಗಳನ್ನು ರೂಪಿಸುತ್ತಿದೆ ಮತ್ತು ಅನುಷ್ಠಾನಗೊಳಿಸುತ್ತಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ ಮತ್ತು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಗಾಗಿ ಪ್ರತಿವರ್ಷ ಬಜೆಟ್‍ನಲ್ಲಿ 90 ಕೋಟಿ ರೂ. ಪ್ರಯತ್ನಗಳ ಫಲವೇ ಪ್ರಸ್ತುತ ಕ್ಷಿಪ್ರ ಅಭಿವೃದ್ಧಿಯಾಗಿದೆ ಎಂದು ಸಚಿವರು ಹೇಳಿದರು. ಕಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಲ್ಲಿ 4.98 ಕೋಟಿ ರೂ.ಗಳ ಹಂಚಿಕೆಯೊಂದಿಗೆ ಬಾಲಂತೋಡುನಲ್ಲಿರುವ ಚಾಮುಂಡಿಕುನ್ನು-ಬಂದಡ್ಕ ರಸ್ತೆಯನ್ನು ಮೆಕ್ಡಾಂ ಮಾಡಲಾಗಿದೆ ಎಂದವರು ಮಾಹಿತಿ ನೀಡಿದರು.
ಪರಪ್ಪ ಬ್ಲಾಕ್ ಪಂಚಾಯತ್ ಅಧ್ಯಕ್ಷ ಪಿ ರಾಜನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಇ ಪದ್ಮಾವತಿ ಮತ್ತು ಎಂ.ನಾರಾಯಣನ್, ಪನತ್ತಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕೆ.ಹೇಮಾಂಬಿಕಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ.ಸಿ.ಮಾಧವನ್, ಸಿ.ಆರ್.ರಜನಿ, ಪಿ.ತಂಬಾನ್, ಕೆಡಿಪಿ ವಿಶೇಷ ಅಧಿಕಾರಿ ಇ.ಪಿ.ರಾಜಮೋಹನ್, ಪರಪ್ಪ ಬ್ಲಾಕ್ ಪಂಚಾಯತ್ ಸದಸ್ಯ ಲತಾ ಅರವಿಂದನ್, ರಾಜು, ಪ್ರೀತಿ ಸಾಜಿ, ಸಿಡಿಎಸ್ ಅಧ್ಯಕ್ಷೆ ಮಾಧವಿ ರಾಜನ್ ಉಪಸ್ಥಿತರಿದ್ದರು. ಬಾಲಂತೋಡು ಡೈರಿ ಗ್ರೂಪ್ ಅಧ್ಯಕ್ಷ ಕೆ.ಎನ್. ಪಿಜಿ ಮೋಹನನ್ ಸ್ವಾಗತಿಸಿ, ಗ್ರಾಮ ಪಂಚಾಯತ್ ಸದಸ್ಯ ಜಿ.ಶಜಿಲಾಲ್ ವಂದಿಸಿದರು.





