ಮುಳ್ಳೇರಿಯ: ಪನತ್ತಡಿಡಿ ಗ್ರಾಮ ಪಂಚಾಯತಿ ಕೃಷಿ ಭವನದ ನೂತನ ಕಟ್ಟಡವನ್ನು ಕಂದಾಯ ಸಚಿವ ಇ.ಚಂದ್ರಶೇಖರನ್ ಭಾನುವಾರ ಉದ್ಘಾಟಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಪಿ.ಜಿ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂಚಾಯತಿ ಅಧ್ಯಕ್ಷ ಪಿ.ರಾಜನ್, ಜಿಲ್ಲಾ ಪಂಚಾಯತಿ ಸದಸ್ಯರಾದ ಎಂ.ನಾರಾಯಣನ್, ಪದ್ಮಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಸಿ. ಮಾಧವನ್, ಸಿ.ಆರ್.ರಜನೀದೇವಿ, ಪಿ.ತಂಬಾನ್, ಪರಪ್ಪ ಬ್ಲಾಕ್ ಪಂಚಾಯತಿ ಸದಸ್ಯೆ ಲತಾ ಅರವಿಂದನ್, ಪನತ್ತಡಿ ಗ್ರಾಮ ಪಂಚಾಯತಿ ಸದಸ್ಯರು ಎಂ.ವಿ.ಶಾರದಾ, ವಿ.ಕೆ.ಒ.ಒ. ಸಾವಿತ್ರಿ, ಪನತ್ತಡಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಕೆ.ಬಾಲಕೃಷ್ಣನ್, ಸಿಡಿಎಸ್ ಅಧ್ಯಕ್ಷೆ ಮಾಧವಿ ರಾಜನ್, ಪಾಣತ್ತೂರ್ ಡೈರಿ ಗ್ರೂಪ್ ಪ್ರತಿನಿಧಿ ಕೆ ಕುಂಞÂ್ಞ ಕಣ್ಣನ್, ರಾಜಕೀಯ ಪಕ್ಷದ ಪ್ರತಿನಿಧಿಗಳಾದ ನ್ಯಾಯವಾದಿ. ವಿ ವಿ ಮೋಹನ್ ಕುಮಾರ್, ಕೆಪಿ ಮೋಹನಚಂದ್ರನ್, ಕೆ ಜಾಯ್ ಮತ್ತು ಎಂ.ಪಿ. ಇಬ್ರಾಹಿಂ ಮೈಕೆಲ್ ಪೂವಾತನಿ ಮಾತನಾಡಿದರು. ಪಾಣತ್ತೂರ್ ಕೃಷಿ ಸಹಾಯಕ ಸಿ. ರವಿ ಅವರನ್ನು ಈ ಸಂದರ್ಭ ಗೌರವಿಸಲಾಯಿತು. ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಕೆ.ಹೆಮಾಂಬಿಕಾ ಸ್ವಾಗತಿಸಿ, ಕೃಷಿ ಸಹಾಯಕ ಶ್ರೀಹರಿ ವಂದಿಸಿದರುರು.




