ಪೆರ್ಲ:ಚಿನ್ನಾಭರಣ ಹೂಡಿಕೆ ಸಂಬಂಧಿಸಿ ವಂಚನೆ ಆರೋಪ ಎದುರಿಸುತ್ತಿರುವ ಮಂಜೇಶ್ವರ ಶಾಸಕ ಎಂ.ಸಿ.ಕಮರುದ್ದೀನ್ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ, ಯುವಮೋರ್ಚಾ ಕಾರ್ಯಕರ್ತರು ಶನಿವಾರ ಪೆರ್ಲದಲ್ಲಿ ಶಾಸಕರಿಗೆ ಕರಿ ಪತಾಕೆ ತೋರಿಸಿ ಪ್ರತಿಭಟನೆ ನಡೆಸಿದ್ದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ರೂಪವಾಣಿ ಆರ್.ಭಟ್, ಸಹಿತ ಬಿಜೆಪಿ ಜನಪ್ರತಿನಿಧಿಗಳನ್ನು ಪೆÇಲೀಸರು ಬಂಧಿಸಿದ್ದಾರೆ.
ಮಂಜೇಶ್ವರ ಶಾಸಕ ಎಂ.ಸಿ.ಕಮರುದ್ದೀನ್ ಶನಿವಾರ ಮಧ್ಯಾಹ್ನ ಟಿ.ವಿ.ವಿತರಣೆ ಕಾರ್ಯಕ್ರಮಕ್ಕೆ ಎಣ್ಮಕಜೆ ಪಂಚಾಯಿತಿ ಕಚೇರಿ ತಲಪಿದಾಗ ಬಿಜೆಪಿ ಪ್ರತಿಭಟನೆ ನಡೆಸಿ ಶಾಸಕರ ವಿರುದ್ಧ ಘೋಷಣೆ ಕೂಗಿದರು.
ಬಿಜೆಪಿ ಪಂಚಾಯಿತಿ ಸಮಿತಿ ಅಧ್ಯಕ್ಷ ಉದಯ ಚೆಟ್ಟಿಯಾರ್, ಜನ ಪ್ರತಿನಿಧಿಗಳಾದ ಪುಟ್ಟಪ್ಪ ಖಂಡಿಗೆ, ಸತೀಶ್ ಕುಲಾಲ್, ಮಲ್ಲಿಕಾ ರೈ, ಮಮತಾ ರೈ, ಅವರನ್ನು ಬದಿಯಡ್ಕ ಪೆÇಲೀಸರು ಬಂಧಿಸಿದ್ದು ಮಧ್ಯಾಹ್ನ 3.30 ಕ್ಕೆ ಜಾಮೀನಿನಲ್ಲಿ ಬಿಡುಗಡೆ ಗೊಳಿಸಿದ್ದಾರೆ.


