ಕುಂಬಳೆ: ಶನಿವಾರ ಕೇರಳಾದ್ಯಂತ ಬಿಜೆಪಿ ಕರಿ ದಿನದ ಭಾಗವಾಗಿ ಚಿನ್ನ ಕಳ್ಳಸಾಗಾಣಿಕೆಯ ಹಗರಣದಲ್ಲಿ ಜಾರಿ ನಿರ್ದೇಶನಾಲಯದ ವಿಚಾರಣೆಯನ್ನು ಎದುರಿಸುತ್ತಿರುವ ಕೇರಳದ ಉನ್ನತ ವಿದ್ಯಾಭ್ಯಾಸ ಸಚಿವ ಕೆ. ಟಿ ಜಲೀಲ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಕುಂಬಳೆ ಪಂಚಾಯತಿ ಸಮಿತಿ ವತಿಯಿಂದ ಕುಂಬಳೆ ಪೇಟೆಯಲ್ಲಿ ಪ್ರತಿಭಟನೆ ಹಾಗು ಕೆ.ಟಿ ಜಲೀಲ ಅವರ ಪ್ರತಿಕೃತಿ ದಹನ ನಡೆಯಿತು.
ಪ್ರತಿಭಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂಬಳೆ ಬಿಜೆಪಿ ಅಧ್ಯಕ್ಷ ಕೆ.ಸುಧಾಕರ ಕಾಮತ್ ವಹಿಸಿದ್ದರು. ಬಿಜೆಪಿ ಮಂಡಲ ಅಧ್ಯಕ್ಷ ಮಣಿಕಂಠ ರೈ ಉದ್ಘಾಟಿಸಿದರು. ಪ್ರತಿಭಟನಾ ಸಭೆಯಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಮುರಳೀಧರ ಯಾದವ್, ಮಂಡಲ ಕಾರ್ಯದರ್ಶಿ ರಮೇಶ್ ಭಟ್ ,ಒಬಿಸಿ ಮೊರ್ಚಾ ಜಿಲ್ಲಾ ಸಮಿತಿ ಸದಸ್ಯ ಶಶಿ ಕುಂಬ್ಳೆ, ಒಬಿಸಿ ಮೊರ್ಚಾ ಮಂಡಲ ಉಪಾಧ್ಯಕ್ಷ ಮಧುಸೂದನ, ಬಿಜೆಪಿ ಕುಂಬಳೆ ಉಪಾಧ್ಯಕ್ಷ ಮಹೇಶ್ ಪುಣಿಯೂರ್, ಕಾರ್ಯದರ್ಶಿಗಳಾದ ಸುಜಿತ್ ರೈ, ವಿವೇಕಾನಂದ, ಯುವಮೋರ್ಚಾ ಅಧ್ಯಕ್ಷ ಪ್ರದೂಷ್, ಪಂಚಾಯತಿ ಸದಸ್ಯೆ ಪ್ರೇಮಲತಾ ಯಸ್, ಹಿರಿಯ ಸದಸ್ಯರಾದ ಬಾಬು ಗಟ್ಟಿ ಉಪಸ್ಥಿತರಿದ್ದರು. ಪಂಚಾಯತಿ ಪ್ರಧಾನ ಕಾರ್ಯದರ್ಶಿ ಜಿತೇಶ್ ನಾಯ್ಕಾಪು ಸ್ವಾಗತಿಸಿ, ಜಗದೀಶ್ ಪೇರಾಲ್ ವಂದಿಸಿದರು.

