ಮಂಜೇಶ್ವರ: ಯೋಜನಾ ಅನುದಾನವನ್ನು ಕಡಿತಗೊಳಿಸಿ, ಸ್ಥಳೀಯಾಡಳಿತ ಸಂಸ್ಥೆಗಳ ಅಭಿವೃದ್ಧಿ ಯೋಜನೆಗಳನ್ನು ಬುಡಮೇಲುಗೊಳಿಸಿದ ಕೇರಳ ಎಡರಂಗ ಸರ್ಕಾರದ ನಿಲುವನ್ನು ಪ್ರತಿಭಟಿಸಿ ಮಂಜೇಶ್ವರ - ಉದ್ಯಾವರ ಮಂಡಲ ಕಾಂಗ್ರೆಸ್ ನೇತೃತ್ವದಲ್ಲಿ ಮಂಜೇಶ್ವರ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಮಂಗಳವಾರ ಬೆಳಗ್ಗೆ ಧರಣಿ ನಡೆಯಿತು.
ಸುರಿಯುವ ಮಳೆಯನ್ನು ಲೆಕ್ಕಿಸದೇ ನಡೆದ ಧರಣಿಯನ್ನು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಡಿ.ಎಂ.ಕೆ ಉದ್ಗಾಟಿಸಿದರು. ಅವರು ಮಾತನಾಡಿ ಈ ಹಿಂದೆ ಕಾಂಗ್ರೆಸ್ ರಾಜ್ಯಡಳಿತ ಕಾಲದಲ್ಲಿ ಜಾರಿಗೊಳಿಸಿದ್ದ ಯೋಜನೆಗಳನ್ನು ಮೂಲೆಗುಂಪಾಗಿಸಿದ ಎಡರಂಗ ಸರ್ಕಾರ ಇದೀಗ ಸ್ಥಳೀಯಾಡಳಿತೆಗಳ ಪ್ಲಾನ್ ಫಂಡ್ ಕಡಿತಗೊಳಿಸಿ ಭ್ರಷ್ಟಾಚಾರದಲ್ಲಿ ತೊಡಗಿದೆ. ಕೇರಳದಲ್ಲಿ ಲೈಫ್ ಪದ್ದತಿ ಬುಡಮೇಲುಗೊಂಡಿದೆ. ಪ್ರತಿ ಮಾಸದ ಕರೆಂಟ್ ಬಿಲ್ ಹೆಚ್ಚಳದಿಂದ ಜನ ಸಾಮಾನ್ಯ ಈ ಕರೋನ ಕಾಲದಲ್ಲಿ ಕಂಗಲಾಗಿದ್ದಾರೆ. ಜನರಿಗೆ ವಿತರಿಸಲ್ಪಡುವ ಕಿಟ್ ಗಳಲ್ಲಿ ಕೂಡ ತಮ್ಮ ಪಕ್ಷ ನಿಷ್ಠಾವರ್ತಿಗಳನ್ನು ಉಪಯೋಗಿಸಿ ವಂಚಿಸಿರುವುದು ಕೂಡ ಶಾಮೀಲಾಗುತ್ತಿರುವುದು ನಾಚಿಗೇಡು ಎಂದರು. ಈ ನಡುವೆ ಸರ್ಕಾರದ ಸಚಿವಾಲಯ ಅಂತರಾಷ್ಟ್ರೀಯ ಚಿನ್ನ ಕಳ್ಳ ಸಾಗಾಣಿಕೆಯಲ್ಲೂ ಭಾಗಿಯಾಗಿರುವುದು ಆಡಳಿತ ಪಕ್ಷದ ಅಂತರಂಗದ ವಂಚನೆಯನ್ನು ಸ್ಪಷ್ಟಪಡಿಸುತ್ತಿದೆ. 80 ವರುಷ ಪೂರ್ತಿಯಾದ ವಿಧವೆಯರು ಪಿಂಚಣಿ ಪಡೆಯಲು ವಿಧವೆ ಸರ್ಟಿಫಿಕೇಟ್ ಸಲ್ಲಿಸಬೇಕು ಎಂಬ ಕೇರಳ ಸರ್ಕಾರದ ಆದೇಶ ಹಿರಿಯರನ್ನು ಅವಹೇಳನ ಮಾಡುವಂತಿದೆ.ಈ ಮೊದಲು ಉಮ್ಮನ್ ಚಾಂಡಿ ಸರ್ಕಾರ ಪಿಂಚಣಿ ಹಣ ಶೇ ನೂರು ಕೊಡುತ್ತಿದ್ದರು. ಆದರೆ ಈಗಿನ ಸರ್ಕಾರ ಕೇವಲ ಶೇ..50 ನೀಡುತ್ತಿದೆ ಹೀಗೆ ಜನಪರ ಯೋಜನೆಗಳನ್ನು ಬುಡಮೇಲುಗೊಳಿಸುವ ಎಡರಂಗವನ್ನು ಜನತೆ ತಿರಸ್ಕರಿಸುವ ದಿನ ದೂರವಿಲ್ಲ ಎಂದರು.
ಸಭೆಯ ಅಧ್ಯಕ್ಷತೆಯನ್ನು ಕಾಂಗ್ರೆಸ್ ಮಂಜೇಶ್ವರ ಮಂಡಲ ಅಧ್ಯಕ್ಷ ಶಾಫಿ ಕಡಂಬಾರು ವಹಿಸಿದ್ದರು. ಈ ವೇಳೆ ಯು.ಡಿ.ಎಫ್ ಕನ್ವಿನರ್ ಕಾಯಿಞÂ್ಞ ಹಾಜಿ, ಮಂಜೇಶ್ವರ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶಶಿಕಲ ಅಂಗಡಿಪದವು, ಬ್ಲಾಕ್ ಕಾರ್ಯದರ್ಶಿ ಹಮೀದ್ ಹೊಸಂಗಡಿ, ನಾಗೇಶ್ ಮಂಜೇಶ್ವರ, ತಮೀಮ್ ಮಂಜೇಶ್ವರ, ಬ್ಲಾಕ್ ಉಪಾಧ್ಯಕ್ಷ ಐ.ಆರ್.ಡಿ.ಪಿ ಇಬ್ರಾಹಿಂ, ಮಂಡಲ ಕಾರ್ಯದರ್ಶಿ ರಂಜಿತ್, ಫ್ರಾನ್ಸಿಸ್ ಸೈಮನ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಗುರುವಪ್ಪ ಮಂಜೇಶ್ವರ, ಅಬ್ದುಲ್ ರಹಮಾನ್ ಹಾಜಿ, ಸುಹೈಬ್ ಕೆ.ಎಸ್.ಯು, ಸುಹಾಬ್ ಕೆ.ಎಸ್.ಯು, ಮಂಜು ಕುಂಜತ್ತೂರು, ಮೊಹಮ್ಮದ್, ಮೊದಲಾದವರು ಉಪಸ್ಥಿತರಿದ್ದರು.
ಕಾಂಗ್ರೆಸ್ ಉದ್ಯಾವರ ಮಂಡಲ ಕಾರ್ಯದರ್ಶಿ ಇದ್ರಿಸ್ ಮಂಜೇಶ್ವರ ಸ್ವಾಗತಿಸಿ, ಯೂತ್ ಕಾಂಗ್ರೆಸ್ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಇರ್ಷಾದ್ ಮಂಜೇಶ್ವರ ವಂದಿಸಿದರು.





