ಬದಿಯಡ್ಕ: ಕೇಂದ್ರ ಸರ್ಕಾರದಿಂದ ನಿಯಂತ್ರಿಸಲ್ಪಡುವ ವಿಶ್ವದರ್ಜೆಯ ಆರೋಗ್ಯ ವ್ಯವಸ್ಥೆಯಾದ `ಏಮ್ಸ್' ಕಾಸರಗೋಡು ಜಿಲ್ಲೆಯಲ್ಲೇ ಸ್ಥಾಪಿಸಲ್ಪಡಬೇಕು. ಎಂಡೋಸಲ್ಫಾನ್ ಬಾಧಿತ ಪ್ರದೇಶವಾದ ಕಾಸರಗೋಡು ಜಲ್ಲೆಯ ಜನತೆಗೆ ಇದು ಅನುಕೂಲವಾಗಬೇಕು ಎಂದು ಕೇರಳ ವ್ಯಾಪಾರಿ ವ್ಯಸಾಯಿ ಏಕೋಪನ ಸಮಿತಿಯ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ಎಸ್.ಎನ್. ಮಯ್ಯ ಬದಿಯಡ್ಕ ಹೇಳಿದರು.
ಏಮ್ಸ್ ಸಂಸ್ಥೆ ಕಾಸರಗೋಡು ಜಿಲ್ಲೆಗೆ ಎಂಬ ಧೋರಣೆಯೊಂದಿಗೆ ಮಂಗಳವಾರ ಬೆಳಗ್ಗೆ ಬದಿಯಡ್ಕ ಬಸ್ ನಿಲ್ದಾಣದ ಸಮೀಪದಲ್ಲಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ವತಿಯಿಂದ ನಡೆದ ಸಹಿ ಸಂಗ್ರಹ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆವಿವಿಇಎಸ್ ಬದಿಯಡ್ಕ ಘಟಕದ ಅಧ್ಯಕ್ಷ ಕುಂಜಾರು ಮುಹಮ್ಮದ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಹಮೀದ್ ಬಾರಡ್ಕ ನಿರೂಪಿಸಿದರು. ಬದಿಯಡ್ಕ ಪೇಟೆಯಲ್ಲಿ ಸಹಿ ಸಂಗ್ರಹಿಸಲಾಯಿತು.

