ಬದಿಯಡ್ಕ: ಸ್ಥಳೀಯ ಆಡಳಿತ ಸಂಸ್ಥೆಗಳ ಯೋಜನಾ ಮೊತ್ತ ಕಡಿತ-ಯಾವುದೇ ಅಭಿವೃದ್ಧಿ ಕೆಲಸಕ್ಕೆ ಸಾಕಾಗದೆ ವಂಚಿಸುತ್ತಿರುವ ಕೇರಳ ಸರ್ಕಾರದ ವಿರುದ್ಧ ಬದಿಯಡ್ಕ ಮಂಡಲ ಕಾಂಗ್ರೆಸ್ ನೇತೃತ್ವದಲ್ಲಿ ಗ್ರಾಮ ಪಂಚಾಯತಿನ ಮುಂಭಾಗದಲ್ಲಿ
ಮಂಗಳವಾರ ಸತ್ಯಾಗ್ರಹ ನಡೆಯಿತು.
ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ಸ್ ಪ್ರಧಾನ ಕಾರ್ಯದರ್ಶಿ ಜೇಮ್ಸ್ ಕೇರಳ ಆಳುತ್ತಿರುವ ಎಡರಂಗ ಸರ್ಕಾರ ಜನರನ್ನು ಭಯಭೀತಿ ಗೊಳಿಸಿದೆ. ಭ್ರಷ್ಟಾಚಾರ, ಡ್ರಗ್ಸ್ ಮಾಫಿಯಾ, ಕಳ್ಳತನ ಮೊದಲಾದ ಕುಕೃತ್ಯಗಳಲ್ಲಿ ಭಾಗಿಯಾಗಿದ್ದು ಆಡಳಿತದಲ್ಲಿ ಸಂಪೂರ್ಣ ಪರಾಜಯಗೊಂಡಿದೆ ಎಂದು ತಿಳಿಸಿದರು.
ಬದಿಯಡ್ಕ ಮಂಡಲ ಕಾಂಗ್ರೆಸ್ ಅಧ್ಯಕ್ಷ ಎಂ.ನಾರಾಯಣ ಮಣಿಯಾಣಿ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಬ್ಲಾಕ್ ಕಾಂಗ್ರೆಸ್ಸಿನ ಉಪಾಧ್ಯಕ್ಷ ಪಿ.ಜಿ. ಚಂದ್ರಹಾಸ ರೈ, ಐ.ಎನ್.ಟಿ.ಯು.ಸಿ.ಬದಿಯಡ್ಕ ಮಂಡಲ ಅಧ್ಯಕ್ಷ ರವಿ ಮೆಣಸಿನಪಾರೆ, ದಲಿತ ಕಾಂಗ್ರೆಸ್ಸಿನ ನೇತಾರ ಐತ್ತಪ್ಪ ಚೆನ್ನೆಗುಳಿ,ಪಂಚಾಯತಿ ಸದಸ್ಯರಾದ ಜಯಶ್ರೀ, ಪ್ರಸನ್ನ ಉಪಸ್ಥಿತರಿದ್ದು ಮಾತನಾಡಿದರು. ಮ್ಯಾಥ್ಯೂಸ್, ಶಾಫಿ ಗೋಳಿಯಡ್ಕ , ಶಾಫಿ ಗೂಳಿಯಡಿ, ಶಾಫಿ ಪಯ್ಯಲಡ್ಕ, ಕುಮಾರ ನಾಯಾರ್, ಶೀಜು, ಯೂತ್ ಕಾಂಗ್ರೆಸ್ ಕಾರ್ಯಕರ್ತರು ಸತ್ಯಾಗ್ರಹದ ನೇತೃತ್ವ ನೀಡಿದರು. ಬದಿಯಡ್ಕ ಮಂಡಲ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಪಿ.ಜಿ. ಜಗನ್ನಾಥ ರೈ ಸ್ವಾಗತಿಸಿ, ಮಂಡಲ ಕೋಶಧಿಕಾರಿ ಅಬ್ಬಾಸ್ ವಂದಿಸಿದರು.





