HEALTH TIPS

ಕಳಂಕಿತ ಶಾಸಕನ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿಯಿಂದ ಧರಣಿ ಸತ್ಯಾಗ್ರಹ

  

         ಉಪ್ಪಳ: ಮಂಜೇಶ್ವರ ಶಾಸಕ ಎಂ.ಸಿ. ಖಮರುದ್ದೀನ್ ಪ್ರಮುಖ ಆರೋಪಿಯೆಂದು ದೂರಲಾದ ಬಹುಕೋಟಿ ರೂ.ಗಳ ಜುವೆಲ್ಲರಿ ಹಗರಣ ಸಂಬಂಧ ಶಾಸಕ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಮಂಗಳವಾರ ಬೆಳಿಗ್ಗೆ ಉಪ್ಪಳದಲ್ಲಿರುವ ಮಂಜೇಶ್ವರ ತಾಲೂಕು ಕಚೇರಿಗೆ ಮಾರ್ಚ್-ಧರಣಿ ಸತ್ಯಾಗ್ರಹ ನಡೆಯಿತು. ಬಿಜೆಪಿ ಕಾಠರ್ಯಕರ್ತರನ್ನು ತಡೆದ ಪೆÇೀಲೀಸರು ಜಲ ಪಿರಂಗಿ ಪ್ರಯೋಗಿಸಿದ ಘಟನೆ ನಡೆದಿದೆ.

       ನೂರಾರು ಕಾರ್ಯಕರ್ತರು ಘೋಷಣನೆಗಳನ್ನು ಕೂಗುತ್ತ ತಾಲೂಕು ಕಚೇರಿಯತ್ತ ಧಾವಿಸುವ ಹಂತದಲ್ಲಿ ಪೆÇೀಲೀಸರು ತಡೆದಿದ್ದು, ರೊಚ್ಚಿಗೆದ್ದ ಕಾರ್ಯಕರ್ತರನ್ನು ನಿಯಂತ್ರಿಸಲು ಬಳಿಕ ಜಲಪಿರಂಗಿ ಬಳಸಿ ಚದುರಿಸಿದರು. ಹಲವು ಕಾರ್ಯಕರ್ತರು ಗಾಯಗೊಂಡರು. 

       ಬಿಜೆಪಿ ಮಂಜೇಶ್ವರ ಮಂಡಲಾಧ್ಯಕ್ಷ ಮಣಿಕಂಠ ರೈ ಪಟ್ಲ ಅವರ ಅಧ್ಯಕ್ಷತೆಯಲ್ಲಿ ನಡೆದ ಧರಣಿಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲ ಕುಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಜನಸೇವೆಯ ಸೋಗಿನಲ್ಲಿ ಶಾಸಕನಾಗಿ ಆಯ್ಕೆಯಾದ ವ್ಯಕ್ತಿ ಇಷ್ಟೊಂದು ಪ್ರಮಾಣದಲ್ಲಿ ಜನವಂಚನೆ ನಡೆಸಿರುವುದು ಪ್ರಜಾಪ್ರಭುತ್ವದ ವ್ಯಂಗ್ಯವಾಗಿದೆ. ಜೊತೆಗೆ ಮಾಡಿರುವ ವಂಚನೆಯನ್ನು ಸಮರ್ಥಿಸುವ ಮುಸ್ಲಿಂಲೀಗ್ ನ ನೈಜ ಬಣ್ಣ ಇದೀಗ ಬಯಲಾಗಿದೆ. ವ್ಯಕ್ತಿತ್ವದ ಸಂಕೇತವಾದ ನೇತಾರತ್ವವನ್ನು ಉಳಿಸಬೇಕಾದಲ್ಲಿ ಶಾಸಕನು ರಾಜೀನಾಮೆ ನೀಡಿ ನ್ಯಾಯದ ಮಹತ್ವವನ್ನು ಎತ್ತಿಹಿಡಿಯಬೇಕಿತ್ತು. ಆದರೆ ಅಧಿಕಾರ ಲಾಲಸೆಯಿಂದ ರಾಜೀನಾಮೆಗೆ ಮುಂದಾಗದಿರುವುದು ಖಂಡನೀಯ ಎಂದು ತಿಳಿಸಿದರು.

         ಜಿಲ್ಲಾ ಬಿಜೆಪಿ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಬಿಜೆಪಿ ಉತ್ತರ ವಲಯ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ, ನ್ಯಾಯವಾದಿ ಸದಾನಂದ ರೈ, ಮುರಳೀಧರ ಯಾದವ್, ಎ.ಕೆ.ಕಯ್ಯಾರ್, ರೂಪವಾಣಿ ಆರ್.ಭಟ್., ಆದರ್ಶ ಬಿ.ಎಂ. ಮೊದಲಾದವರು ಉಪಸ್ಥಿತರಿದ್ದರು. ಮುರಳೀಧರ ಯಾದವ್ ಸ್ವಾಗತಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries