ಕೊಚ್ಚಿ: ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್ ಅವರನ್ನು ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದ ಹಿನ್ನೆಲೆಯಲ್ಲಿ ಮತ್ತೆ ಪ್ರಶ್ನಿಸಬಹುದು ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಜಲೇಲ್ ಅವರಿಗೆ "ಕ್ಲೀನ್ ಚಿಟ್" ಇಲ್ಲ ಮತ್ತು ಮತ್ತೆ ವಿಚಾರಣೆ ನಡೆಸಲಾಗುವುದು ಎಂದು ಜಾರಿ ನಿರ್ದೇಶನಾಲಯದ ಮುಖ್ಯಸ್ಥ ಎಸ್.ಕೆ.ಮಿಶ್ರಾ ಹೇಳಿದ್ದಾರೆ. ಪ್ರತಿಪಕ್ಷ ಗುಂಪುಗಳು ಸಚಿವರ ವಿರುದ್ಧ ಪ್ರತಿಭಟನೆ ತೀವ್ರಗೊಳಿಸುತ್ತಿರುವುದರಿಂದ ಹೊಸ ಮಾಹಿತಿ ಬಂದಿದೆ.
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸಚಿವ ಕೆ.ಟಿ.ಜಲೀಲ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಮತ್ತು ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ ಮತ್ತೆ ವಿಚಾರಣೆಗೆ ಕರೆಸಿಕೊಳ್ಳಬಹುದು ಎಂದು ತಿಳಿದುಬಂದಿದೆ.
ಸಚಿವರ ಹೇಳಿಕೆಯನ್ನು ಜಾರಿ ನಿರ್ದೇಶಕರಿಗೆ ಹಸ್ತಾಂತರಿಸಲಾಗಿದೆ ಎಂದು ಈ ಹಿಂದೆ ಮಾಧ್ಯಮಗಳು ವರದಿ ಮಾಡಿದ್ದವು. ದೆಹಲಿಯಲ್ಲಿ ಹೇಳಿಕೆಯ ವಿವರವಾದ ಪರಿಶೀಲನೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪೆÇ್ರೀಟೋಕಾಲ್ ಉಲ್ಲಂಘನೆ ಸೇರಿದಂತೆ ವಿಷಯಗಳ ಬಗ್ಗೆ ಸಚಿವರ ತನಿಖೆ ನಡೆಸಲಾಗುವುದೆಂದು ವರದಿಗಳಿವೆ.
ಈ ಮಧ್ಯೆ ಜಾರಿ ನಿರ್ದೇಶನಾಲಯದ ಮೂಲಗಳನ್ನು ಉಲ್ಲೇಖಿಸಿ ಸಚಿವ ಜಲೀಲ್ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಹೇಳಲಾಗುತ್ತಿದ್ದು ಯುಎಇಯಿಂದ ಕುರಾನ್ ವಿತರಣೆ ಮತ್ತು ಆಸ್ತಿ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರನ್ನು ಪ್ರಶ್ನಿಸಲಾಗಿದೆ ಎಂದು ವರದಿಯಾಗಿದೆ. ಸಚಿವರು ಆಸ್ತಿ ಸಂಪಾದನೆ ಮತ್ತು ಬ್ಯಾಂಕ್ ಖಾತೆ ವಿವರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿದ್ದಾರೆ ಮತ್ತು ಯಾವುದೇ ಅಕ್ರಮ ಆಸ್ತಿ ಸಂಪಾದನೆ ಪತ್ತೆಯಾಗಿಲ್ಲ ಎಂದು ಇಡಿ ಮೂಲಗಳು ತಿಳಿಸಿವೆ.
ಸಚಿವ ಕೆ.ಟಿ.ಜಲೀಲ್‍ರನ್ನು ಜಾರಿ ನಿರ್ದೇಶನಾಲಯದ ಕೊಚ್ಚಿ ಕಚೇರಿಗೆ ಶುಕ್ರವಾರ ಬೆಳಿಗ್ಗೆ ಮೂರು ಗಂಟೆಗಳ ಕಾಲ ವಿಚಾರಣೆಗಾಗಿ ಕರೆದಿದ್ದಕ್ಕಾಗಿ ಪ್ರತಿಪಕ್ಷ ಗುಂಪುಗಳು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಸಚಿವರು ಅಧಿಕೃತ ಕಾರಿನ ಬದಲು ಖಾಸಗಿ ಕಾರಿನಲ್ಲಿ ಇಡಿ ಕಚೇರಿಯನ್ನು ತಲುಪಿದರು ಮತ್ತು ನಂತರ ಮಾಧ್ಯಮಗಳು ಈ ವಿಷಯದಲ್ಲಿ ದೃಢಪಡಿಸಲು ಸಂಪರ್ಕಿಸಿದಾಗ ವಿಚಾರಣೆಯ ಮಾಹಿತಿಯನ್ನು ನಿರಾಕರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ದೆಹಲಿಯ ಜಾರಿ ವಲಯಗಳ ಮೂಲಕ ಸಚಿವರನ್ನು ಪ್ರಶ್ನಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಸಚಿವ ಕೆ.ಟಿ.ಜಲೀಲ್ ರಾಜೀನಾಮೆ ನೀಡಬಾರದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಿಪಿಎಂ ಅಭಿಪ್ರಾಯ ವ್ಯಕ್ತಪಡಿಸಿದೆ.





