ಮುಳ್ಳೇರಿಯ: ಕೋಟೂರಿನ ಶ್ರೀ ಕಾರ್ತಿಕೇಯ ಭಜನಾ ಮಂದಿರದ ನವೀಕರಣದ ಅಂಗವಾಗಿ ಶಿಲಾನ್ಯಾಸ ಭೂಮಿಪೂಜಾ ಕಾರ್ಯಕ್ರಮವು ಶುಭ ಮುಹೂರ್ತದಲ್ಲಿ ಸೋಮವಾರ ವಿಧಿವಿಧಾನದಂತೆ ಜರಗಿತು.
ಕೋವಿಡ್ ಮಾನದಂಡದ ಇತಿಮತಿಯನ್ನುಅನುಸರಿಸಿಕೊಂಡು ಕಾರ್ಯಕ್ರಮವು ಜರಗಿತು. ಬೆದ್ರಡ್ಕದ ವಾಸ್ತು ಶಿಲ್ಪಿಗಳಾದ ರಮೇಶ ಕಾರಂತ ಅವರು ಮಾರ್ಗದರ್ಶನವನ್ನಿತ್ತರು. ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ಅವರ ಮಾರ್ಗದರ್ಶನದಲ್ಲಿ ವೈದಿಕ ಕಾರ್ಯಕ್ರಮಗಳು ನೆರವೇರಿದವು.
ಸಮಿತಿ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.




