ಕೊಚ್ಚಿ: ಅಲ್ ಖೈದಾ ಸಂಘಟನೆಯ ಇನ್ನಷ್ಟು ಮಂದಿಗಳನ್ನು ಬಂಧಿಸಲು ಉದ್ದೇಶಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಎನ್.ಐ.ಎ. ತಿಳಿಸಿದೆ.
ಕೊಚ್ಚಿಯೂ ಒಳಗೊಂಡಂತೆ ದೇಶದ ವಿವಿಧೆಡೆಗಳಿಂದ ಶನಿವಾರವೊಂದೇ ದಿನ ಒಂಭತ್ತು ಮಂದಿ ಉಗ್ರರನ್ನು ಬಂಧಿಸಲಾಗಿತ್ತು. ಕೊಚ್ಚಿಯಿಂದ ಬಂಧಿಸಲಾದ ಮೂವರನ್ನು ವಶಕ್ಕೆ ಪಡೆಯಲು ಸಲ್ಲಿಸಲಾದ ಅರ್ಜಿಯಲ್ಲಿ ಇನ್ನಷ್ಟು ಮಂದಿಗಳನ್ನು ಬಂಧಿಸಲು ಇದೆ ಎಂದು ಎನ್.ಐ.ಎ ತಿಳಿಸಿದೆ.
ಉಗ್ರ ಸಂಘಟನೆ ಸೇರಿದ 10 ಮಂದಿಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂದು ಎನ್ ಐ ಎ ನ್ಯಾಯಾಲಯಕ್ಕೆ ಸಮರ್ಪಿಸಿದ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಗುರುತಿಸಲಾದ ಶಂಕಿತ ತಂಡ ಬಾಂಗ್ಲಾ ಭಾಷೆಯನ್ನು ಮಾತನಾಡುವವರಾಗಿದ್ದಾರೆ. ಆಖ್ರಮಣಗಳನ್ನು ಸಂಯೋಜಿಸುವುದು ಧನ ಸಂಗ್ರಹಗಳಿಗಾಗಿ ವಿವಿಧೆಡೆ ಸಂಚರಿಸುವ ಇವರು ದೊಡ್ಡ ಆಕ್ರಮಣ ನಡೆಸಲು ಯೋಜನೆ ರೂಪಿಸಿದ್ದರು. ಆದರೆ ಆ ತಂಡದ ಇನ್ನಷ್ಟು ಮಂದಿಗಳನ್ನು ಗುರುತಿಸಲು ಇನ್ನೂ ಬಾಕಿಯಿದೆ ಎಂದು ಎನ್.ಐ.ಎ ತಿಳಿಸಿದೆ.
ದೇಶದ ಪ್ರಮುಖ ನಗರಗಳಲ್ಲಿ ಸರಣಿ ಸ್ಪೋಟಗಳನ್ನು ನಡೆಸಲು ಪಾಕಿಸ್ಥಾನ ಪ್ರಾಯೋಜಿತ ಅಲ್ ಖೈದಾ ರೂಪು ನೀಡಿತ್ತೆಂದು ಲಭ್ಯವಾದ ರಹಸ್ಯ ಮಾಹಿತಿಯ ಮೇರೆಗೆ ಸೆ.11 ರಂದು ಎನ್.ಐ.ಎ.ದೂರು ದಾಖಲಿಸಿ ತನಿಖೆಗೆ ಚಾಲನೆ ನೀಡಿತ್ತು. ಈ ದೂರಿನ ಹಿನ್ನೆಲೆಯಲ್ಲಿ ಕೊಚ್ಚಿ ಹಾಗೂ ಪ.ಬಂಗಾಳಗಳ 11 ಸ್ಥಳಗಳಲ್ಲಿ ಏಕಕಾಲದಲ್ಲಿ ಧಾಳಿ ನಡೆಸಲಾಗಿತ್ತು. ದೂರಿನ ಪ್ರಥಮ ಆರೋಪಿ ಮುರ್ಶಿದ್ ಹಸನ್, ಎರಡನೇ ಆರೋಪಿ ಮುಶ್ರಫ್ ಹೈಸನ್, ಆರನೇ ಆರೋಪಿ ಯಾಕೂಬ್ ಬಿಶ್ವಾಸ್ ಎಂಬವರನ್ನು ಶನಿವಾರ ಕೊಚ್ಚಿಯಲ್ಲಿ ಬಂಧಿಸಲಾಗಿತ್ತು. ಪ.ಬಂಗಾಳದ ಮುರ್ಶಿದಾಬಾದ್ ನಿಂದ ಆರುಮಂದಿಗಳನ್ನು ಬಂಧಿಸಲಾಗಿತ್ತು.
ಕೊಚ್ಚಿಯಲ್ಲಿ ಬಂಧನಕ್ಕೊಳಗಾದ ಮೂವರಲ್ಲಿ ಇಬ್ಬರನ್ನು ಭಾನುವಾರ ಮಧ್ಯಾಹ್ನ ವಿಮಾನದ ಮೂಲಕ ದೆಹಲಿಗೆ ಕರೆದೊಯ್ಯಲಾಯಿತು. ಮುಕ್ಕುಳಿದವರನ್ನೂ ದೆಹಲಿದೆ ಕರೆದೊಯ್ಯಲಾಗುವುದೆಂದು ಎನ್ ಐ ಎ ತಿಳಿಸಿದೆ. ಮಂಗಳವಾರ ಬೆಳಿಗ್ಗೆ 11ರ ರೆಗೆ ಬಂಧಿತ ಉಗ್ರರನ್ನು ಎನ್.ಐ.ಎ.ವಶಕ್ಕೊಪ್ಪಿಸಲು ನ್ಯಾಯಾಲಯ ಆದೇಶಿಸಿದೆ.




