ತಿರುವನಂತಪುರ: ಕೇರಳದಲ್ಲಿ ಪ್ರತಿದಿನವೂ ಕೋವಿಡ್ ಬಾಧಿತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬರುತ್ತಿದ್ದು, ಕಳೆದ ಮೂರು ದಿನಗಳಲ್ಲಿ 4,000 ಕ್ಕೂ ಹೆಚ್ಚು ಸೋಂಕಿತರಿರುವುದು ಪತ್ತೆಯಾಗಿದೆ. ರಾಜ್ಯವು ನಿರ್ಣಾಯಕ ಪರಿಸ್ಥಿತಿಯತ್ತ ಸಾಗುತ್ತಿದೆ ಎಂದು ತಜ್ಞರು ವರದಿ ನೀಡಿದ್ದಾರೆ. ಕೇರಳದಲ್ಲಿ ಸ್ಥಳೀಯವಾಗಿ ಮಾರ್ಪಾಡುಗೊಂಡಿರುವ ಪ್ರತ್ಯೇಕ ವೈರಸ್ ಗಳಿಂದ ಹರಡುವಿ ವ್ಯಾಪಕಗೊಳ್ಳಲು ಕಾರಣವಾಗುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಶನಿವಾರ ಸ್ವತಃ ಮುಖ್ಯಮಂತ್ರಿಗಳೇ ಈ ಶಂಕೆ ಮುಂದಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಲಿವೆ ಎಂದು ಎಚ್ಚರಿಸಿರುವರು.
ಕೇರಳದಲ್ಲಿ ಸಾರ್ಸ್ ಕೋವಿಡ್ ಕರೋನಾ 2 ರ ಭಾರತೀಯ ಉಪವಿಭಾಗ!:
ಸಂಶೋಧನೆಯ ಭಾಗವಾಗಿ, ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಲ್ಲಿ ಕೇರಳದಿಂದ 179 ವೈರಸ್‍ಗಳನ್ನು ಸ್ಥಳೀಯವಾಗಿ ವರ್ಗೀಕರಿಸಲು ಸಾಧ್ಯವಾಗಿದೆ ಎಂದು ತಿಳಿದುಬಂದಿದೆ. ಅವುಗಳ ವಂಶಾವಳಿಯನ್ನು ಂ2ಂ ಎಂದು ನಿರ್ಧರಿಸಲಾಗಿದೆ. ಸಾರ್ಸ್ ಕರೋನಾ 2 ರ ಭಾರತೀಯ ಉಪವಿಭಾಗವಾಗಿದೆ. ವಿದೇಶಿ ಮೂಲದ ಯಾವುದೇ ರೋಗಕಾರಕಗಳನ್ನು ರಾಜ್ಯದಲ್ಲಿ ಕಂಡುಹಿಡಿಯಲಾಗಲಿಲ್ಲ. ರಾಜ್ಯದ ಉತ್ತರ ಜಿಲ್ಲೆಗಳಿಂದ ತೆಗೆದ ಮಾದರಿಗಳು ಹೆಚ್ಚಾಗಿ ಒಡಿಶಾ, ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಬಂದವುಗಳಾಗಿವೆ ಎಂದು ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಪುಟ್ಟ ಅಜಾಗರೂಕತೆಯೂ ದೊಡ್ಡ ದುರಂತಕ್ಕೆ ಕಾರಣವಾಗಬಹುದು:
ನೆರೆಯ ರಾಜ್ಯಗಳಲ್ಲಿ ರೋಗ ಹರಡುವುದರಿಂದ ಕೇರಳದ ಮೇಲೆ ದೊಡ್ಡ ಪರಿಣಾಮ ಬೀರಬಹುದು ಎಂದು ಸರ್ಕಾರ ಎಚ್ಚರಿಸಿದೆ. ಸಣ್ಣದೊಂದು ಅಜಾಗರೂಕತೆಯು ಸಹ ದೊಡ್ಡ ಅನಾಹುತಕ್ಕೆ ಕಾರಣವಾಗುವ ಹಂತದಲ್ಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಕೋವಿಡ್ ಮಾನದಂಡಗಳ ಉಲ್ಲಂಘನೆ ವ್ಯಾಪಕ:
ಆರೋಗ್ಯ ಇಲಾಖೆಯ ಪ್ರಕಾರ, ಪತ್ತನಂತಿಟ್ಟು ಜಿಲ್ಲೆಯ ತಿರುವಲ್ಲಾದ ಖಾಸಗಿ ಆಸ್ಪತ್ರೆಯಲ್ಲಿ ಸಾಂಸ್ಥಿಕ 5 ಕ್ಲಸ್ಟರ್‍ನಲ್ಲಿ ಮಾನದಂಡ ಉಲ್ಲಂಘಿಸಿ 55 ಜನರಿಗೆ ಈ ಸೋಂಕು ಪತ್ತೆಯಾಗಿದೆ. ಪ್ರಾಥಮಿಕ ಸಂಪರ್ಕದಿಂದಾಗಿ ಮದುವೆಯೊಂದಕ್ಕೆ ಕೋವಿಡ್ ಮಾನದಂಡಗಳನ್ನು ಉಲ್ಲಂಘಿಸಿದ ಕಾರಣ ಸೋಂಕು ವ್ಯಾಪಕಗೊಂಡಿದೆ ಎಂದು ವರದಿಯಾಗಿದೆ.
ನೆದುಂಕಂಡದಲ್ಲಿ ವರದಿಯಾದ ಅತಿದೊಡ್ಡ ಸಂಪರ್ಕ ಪ್ರಕರಣ:
ಇಡುಕ್ಕಿಯ ನೆಡುಂಕಂಡಂ ಪಟ್ಟಣವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಮೀನು ಸಗಟು ವ್ಯಾಪಾರಿಗಳು, ಗ್ರಾಮ ಪಂಚಾಯತ್, ಅಬಕಾರಿ ಮತ್ತು ಬ್ಯಾಂಕ್ ಅಧಿಕಾರಿಗಳು ಸೇರಿದಂತೆ 48 ಜನರಿಗೆ ಪಟ್ಟಣದಲ್ಲಿ ಸೋಂಕು ಪತ್ತೆಯಾಗಿರುವುದು ಇದಕ್ಕೆ ಕಾರಣ. ಪ್ರಾಥಮಿಕ ಅಂದಾಜಿನ ಪ್ರಕಾರ ಈ ಸಂಖ್ಯೆ ಸುಮಾರು 3,000 ರಷ್ಟಿದೆ.





