ಉಪ್ಪಳ: ಭಾರತೀಯ ಮಜ್ದೂರ್ ಸಂಘ ಮಂಗಲ್ಪಾಡಿ ಪಂಚಾಯತಿ ಆಶ್ರಯದಲ್ಲಿ ವಿಶ್ವಕರ್ಮ ಜಯಂತಿ ಕಾರ್ಮಿಕ ದಿನಾಚರಣೆ ಶುಕ್ರವಾರ ಉಪ್ಪಳದಲ್ಲಿರುವ ಕಛೇರಿಯಲ್ಲಿ ನಡೆಯಿತು. ಕುಂಬಳೆ ವಲಯ ಜೊತೆ ಕಾರ್ಯದರ್ಶಿ ರಾಘವೇಂದ್ರ.ಪಿ ದೀಪ ಬೆಳಗಿಸಿ ಉದ್ಘಾಟಿಸಿದರು. ಬಿಎಂಎಸ್ ಮಂಗಲ್ಪಾಡಿ ಪಂಚಾಯತಿ ಅಧ್ಯಕ್ಷ ಚಂದ್ರಶೇಖರ.ಎಂ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತಿ ಘಟಕದ ಕಾರ್ಯದರ್ಶಿ ಸೂರ್ಯನಾರಾಯಣ ಸ್ವಾಗತಿಸಿ, ಉಪಾಧ್ಯಾಕ್ಷ ಬಾಲನ್ ವಂದಿಸಿದರು. ಉಪಾಧ್ಯಾಕ್ಷ ಜೆರಿ.ಡಿ ಸೋಜಾ ನಿರೂಪಿಸಿದರು.





