HEALTH TIPS

ಪ್ರಕೃತಿಗೆ ಮತ್ತು ನಾಡಿನ ಸಂಸ್ಕಾರಕ್ಕೆ ಧಕ್ಕೆಯಾಗದ ಪ್ರವಾಸೋದ್ಯಮ ಅಭಿವೃದ್ಧಿ ಸಾಧ್ಯ ಎಂದು ರಾಜ್ಯ ಸರಕಾರ ಸಾಬೀತುಪಡಿಸಿದೆ: ಕಂದಾಯ ಸಚಿವ


          ಕಾಸರಗೋಡು: ಪ್ರಕೃತಿಗೆ ಮತ್ತು ನಾಡಿನ ಸಂಸ್ಕಾರಕ್ಕೆ ಧಕ್ಕೆ ತರದಂತೆ ಪ್ರವಾಸೋದ್ಯಮ ಅಭಿವೃದ್ಧಿ ಸಾಧ್ಯ ಎಂಬುದನ್ನು ರಾಜ್ಯ ಸರಕಾರ ಸಾಬೀತುಪಡಿಸಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ಅಭಿಪ್ರಾಯಪಟ್ಟರು. 

          ಚೆಂಗಳ ಗ್ರಾಮ ಪಂಚಾಯತ್ ನ ಪಾಣಾರ್ ಕುಳಂ ನಲ್ಲಿ 1.24 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕಾಸ್ರೋಡ್ ಕೆಫೆ ಎಂಬ ಹೆಸರಿನಲ್ಲಿ ನಿರ್ಮಿಸಲಾದ ಹೆದ್ದಾರಿ ಬದಿಯ ವಿಶ್ರಾಂತಿ ಕೇಂದ್ರವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. 

        ಜೈವಿಕ-ಸಾಂಸ್ಕøತಿಕ ವೈವಿಧ್ಯಗಳನನು ಉಳಿಸಿಕೊಂಡೇ ಬದಲಿ ಪ್ರವಾಸೋದ್ಯಮ ಸಾಧ್ಯ ಎಂಬುದು ರಾಜ್ಯ ಸರಕಾರದ ನೀತಿಯಾಗಿದೆ. ಪ್ರವಾಸೋದ್ಯಮ ಎಂಬುದು ಒಂದು ಉದ್ದಿಮೆ ಮಾತ್ರವಲ್ಲ, ಅದೊಂದು ಹೊಣೆಗಾರಿಕೆಯುಳ್ಳ ಸಂಸ್ಕಾರವೂ ಹೌದು. ಜಾಗತಿಕ ಮಟ್ಟದ ಪ್ರವಾಸೋದ್ಯಮ ಮಾನದಂಡಗಳಿಗೆ ಅನ್ವಯವಾಗಿ ಕಾಸ್ರೋಡ್ ಕೆಫೆ ಸಿದ್ಧವಾಗಿದೆ. ಇದಕ್ಕೆ ಜನ್ಮನಾಡಿನ ಸೌಂದರ್ಯ ಮತ್ತು ಮಣ್ಣಿನ ಕಂಪಿನ ಹಿನ್ನೆಲೆಯಿದೆ. ಜನಪ್ರತಿನಿಧಿಗಳ, ಸಾರ್ವಜನಿಕರ ಬೆಂಬಲದೊಂದಿಗೆ ಕಾಸರಗೋಡು ಜಿಲ್ಲೆ ಸಹಿತ ಉತ್ತರ ಮಲಬಾರ್ ಪ್ರದೇಶದ ಪ್ರವಾಸೋದ್ಯಮ ವಲಯದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ನುಡಿದರು. 

       ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರು ಮುಖ್ಯ ಅತಿಥಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು ತ್ರಿಸ್ತರ ವ್ಯವಸ್ಥೆಯ ಮೂಲಕ ಕೊಡಮಾಡಿರುವ ಅಧಿಕಾರ ವಿಕೇಂದ್ರೀಕರಣ ಮೂಲಕ ಜನಪ್ರತಿನಿಧಿಗಳಿಗೆ ವಲಯದ ಅಭಿವೃದ್ಧಿಗೆ ಹೆಚ್ಚುವರಿ ಬೆಂಬಲ ನೀಡಲು ಸಾಧ್ಯವಾಗಲಿದೆ. ಇದಕ್ಕಿರುವ ಎಲ್ಲ ಸಾಧ್ಯತೆಗಳನ್ನೂ ಬಳಸಲಾಗುವುದು. ಕಾಸರಗೋಡಿನ ಸಮಗ್ರ ಅಭಿವೃದ್ಧಿಗೆ ಒಗ್ಗಟ್ಟಿನ ಯತ್ನ ಬೇಕು ಎಂದು ತಿಳಿಸಿದರು.  

         ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಪಿ.ಬಾಲಕಿರಣ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಬ್ಲೋಕ್ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಕುಂuಟಿಜeಜಿiಟಿeಜ ಚಾಯಿಂಡಡಿ, ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಷಾಹಿನಾ ಸಲೀಂ, ಡಿ.ಟಿ.ಪಿ.ಸಿ. ಕಾರ್ಯದರ್ಶಿ ಬಿಜು ರಾಘವನ್ ಉಪಸ್ಥಿತರಿದ್ದರು. ಕೋವಿಡ್ ಪ್ರತಿರೋಧ ಸಂಹಿತೆಗಳ ಕಡ್ಡಾಯ ಪಾಲನೆಯೊಂದಿಗೆ ಸಮಾರಂಭ ನಡೆದಿತ್ತು. 

       ಕಾಸರಗೋಡು ಜಿಲ್ಲೆಯ ಹೆದ್ದಾರಿ ಮೂಲಕ ಸಂಚರಿಸುವ ದೀರ್ಘಗಾಮಿ ಮಂದಿಗೆ ಲಘು ಉಪಹಾರ ಸಹಿತ ಎಲ್ಲ ಸೌಲಭ್ಯ ಹೊಂದಿರುವ ವಿಶ್ರಾಂತಿ ಕೇಂದ್ರ ಚೆಂಗಳ ಗ್ರಾಮ ಪಂಚಾಯತ್ ನ ಪಾಣಾರ್ ಕುಳಂ ಎಂಬ ಪ್ರದೇಶದಲ್ಲಿ "ಕಾಸ್ರೋಡ್ ಕೆಫೆ" ಎಂಬ ಹೆಸರಿನಲ್ಲಿ ಆರಂಭಗೊಂಡಿತು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries