ಮಂಜೇಶ್ವರ: ಎಡನೀರು ಮಠದ ಬ್ರಹ್ಮ್ಯೆಕ್ಯ ಶ್ರೀ ಕೇಶವಾನಂದಭಾರತೀ ಸ್ವಾಮೀಜಿಗಳಿಗೆ ನುಡಿನಮನಗಳನ್ನು ಯಕ್ಷ ಬಳಗ ಹೊಸಂಗಡಿ ಇದರ ವತಿಯಿಂದ ಮೂಡಂಬೈಲಿನ ನಾರಾಯಣೀಯಂ ಮನೆಯಲ್ಲಿ ಭಾನುವಾರ ಸಂಜೆ ಸಲ್ಲಿಸಲಾಯಿತು.
ಬಾಲಕೃಷ್ಣ ಭಟ್ ದಡ್ಡಂಗಡಿ ಇವರು ದೀಪಪ್ರಜ್ವಲನಗೈದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ ನುಡಿ ನಮನಗಳನ್ನು ಸಲ್ಲಿಸಿದರು. ಸಭೆಯಲ್ಲಿ ಶಿವರಾಮ ಪದಕಣ್ಣಾಯ, ರಾಜಾರಾಮ ರಾವ್ ಚಿಗುರುಪಾದೆ, ಚೇತನ ರಾಮ ಪಜಿಂಗಾರು, ಪದ್ಮನಾಭ ಬಳ್ಳಕ್ಕುರಾಯ ಮತ್ತಿತರರು ಉಪಸ್ಥಿತರಿದ್ದು ಎಡನೀರು ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ತಮ್ಮ ಒಡನಾಟದ ಉತ್ತಮ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಶಾರದಾ ಸುರೇಶ ಪದಕಣ್ಣಾಯ ಹಾಗೂ ನಾಗಾಭರಣ ಭಾಗವಹಿಸಿದ್ದರು. ಯಕ್ಷ ಬಳಗ ಹೊಸಂಗಡಿ ಇದರ ಸಂಚಾಲಕ ಸತೀಶ ಅಡಪ ಸಂಕಬೈಲು ಸ್ವಾಗತಿಸಿ, ಶ್ರೀಗಳು ಯಕ್ಷಬಳಗದ ಪ್ರಾರಂಭ ಕಾಲದಲ್ಲಿ ಪೂರ್ಣ ಮಂತ್ರಾಕ್ಷತೆ ನೀಡಿ ಹರಸಿದ್ದನ್ನು ಹಾಗೂ ಎಡನೀರು ಮೇಳದ ರಂಗಸ್ಥಳವನ್ನು ನಿರ್ಮಿಸಲು ಯಕ್ಷ ಬಳಗಕ್ಕೆ ಹೊಣೆಗಾರಿಕೆ ನೀಡಿದ್ದನ್ನು ಸ್ಮರಿಸಿದರು. ಯಕ್ಷ ಬಳಗದ ಅವಿನಾಭಾವ ಸಂಬಂಧ ಹಾಗೂ ಯಕ್ಷ ಬಳಗವನ್ನು ಕರ್ನಾಟಕ ಯಕ್ಷಗಾನ ಆಕಾಡೆಮಿಯ ಕಾರ್ಯಕ್ರಮದಲ್ಲಿ ಅಭಿನಂದಿಸಿರುವುದು ಅಭಿಮಾನೀಯ ಕ್ಷಣ ಎಂದು ಸ್ಮರಿಸಿಕೊಂಡರು.
ಕಾಯದರ್ಶಿ ನಾಗರಾಜ ಪದಕಣ್ಣಾಯ ಕಾರ್ಯಕ್ರಮ ನಿರೂಪಿಸುವುದರೊಂದಿಗೆ ಇತ್ತೀಚೆಗೆ ಶ್ರೀ ಮಠದಲ್ಲಿ ಜರಗಿದ ಯಕ್ಷಗಾನ ಅಕಾಡೆಮಿಯ ಕಾರ್ಯಕ್ರಮಗಳಿಗೆ ಅವಕಾಶವಿತ್ತು ಪೆÇ್ರತ್ಸಾಹಿಸಿ ತಾಳಮದ್ದಳೆಯಲ್ಲಿ ಭಾಗವತಿಕೆ ಮಾಡಿದುದನ್ನು ನೆನಪಿಸಿಕೊಂಡರು. ನಾರಾಯಣೀಯಂ ಮನೆಯವರಾದ ಸುರೇಶ ಪದಕಣ್ಣಾಯ ವಂದಿಸಿದರು.






