ಕಾಸರಗೋಡು: ಕಾಸ್ರೋಡ್ ಕೆಫೆ ನಡೆಸಲು ಖಾಸಗಿ ವ್ಯಕ್ತಿಗಳು ಯಾ ಖಾಸಗಿ ಸಂಸ್ಥೆಗಳಿಂದ ಟೆಂಡರ್ ಶೀಘ್ರದಲ್ಲೇ ಕೋರಲಾಗುವುದು. ಈ ಸಂಬಂಧ ಪ್ರಕಟಣೆ ವಿಳಂಬವಿಲ್ಲದೆ ಪ್ರಕಟಗೊಳ್ಳಲಿದೆ. ಡಿ.ಟಿ.ಪಿ.ಸಿ.ಗೆ ಅತ್ಯಧಿಕ ತಿಂಗಳ ಬಾಡಿಗೆ ಭರವಸೆ ನೀಡುವ ವ್ಯಕ್ತಿ ಯಾ ಸಂಸ್ಥೆಗಳಿಗೆ ಮೂರು ವರ್ಷದ ಅವಧಿಗೆ ಈ ಸಂಸ್ಥೇ ನಡೆಸಲು ಕರಾರು ನಡೆಸಲಾಗುವುದು. ವಿವಿಧ ಶುಲ್ಕಗಳು, ವಿದ್ಯುತ್, ಜಲ, ಮೂರು ವರ್ಷದ ಅವಧಿಯಲ್ಲಿ ತಲೆದೋರಬಹುದಾದ ದುರಸ್ತಿ ಇತ್ಯಾದಿಗಳನ್ನು ವಹಿಸಿಕೊಂಡವರೇ ನಡೆಸಬೇಕು.
ಪ್ರತಿ ಕೆಫೆಯ ಚಟುವಟಿಕೆಗಳು ಡಿ.ಟಿ.ಪಿ.ಸಿಯ ಕಡ್ಡಾಯ ನಿಬಂಧನೆಗಳ ಅನ್ವಯ, ಗುಣಮಟ್ಟ ತಪಾಸಣೆ ಇತ್ಯಾದಿಗಳ ಮೂಲಕ ಗ್ರಾಹಕರ ಸಂತೃಪ್ತಿಯ ಖಚಿತತೆಯೊಂದಿಗೆ ನಡೆಯಲಿವೆ.




