ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 331 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಅದೇ ಸಂದರ್ಭದಲ್ಲಿ 270 ಮಂದಿ ಗುಣಮುಖರಾಗಿದ್ದಾರೆ. 290 ಮಂದಿಗೆ ಸಂಪರ್ಕದ ಮೂಲಕ ರೋಗ ಬಾ„ಸಿದೆ. ಕಾಸರಗೋಡು ಜಿಲ್ಲೆಯಲ್ಲಿ 13 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ.
ನಾಲ್ವರ ಸಾವು : ಕೋವಿಡ್ ಸೋಂಕಿತ ನಾಲ್ವರು ಸಾವಿಗೀಡಾಗಿದ್ದಾರೆ. 85 ವರ್ಷದ ಆದೂರು ಮಲ್ಲಾವರ ನಿವಾಸಿ, 65 ವರ್ಷ ಪ್ರಾಯದ ಮವ್ವಾರು ಪೆರಿಂಜೆ ನಿವಾಸಿ, 51 ವರ್ಷದ ಚೆಂಗಳ ಇಂದಿರಾ ನಗರದ ನಿವಾಸಿ ಹಾಗು 64 ವರ್ಷದ ಕಾಸರಗೋಡು ಪಿಲಿಕುಂಜೆ ನಿವಾಸಿ ಮಹಿಳೆ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್‍ಗೆ ಬಲಿಯಾದವರ ಸಂಖ್ಯೆ 140 ಕ್ಕೇರಿದೆ.
ಇಂದು ಕೋವಿಡ್ ದೃಢಪಟ್ಟವರ ಪಂಚಾಯತಿವಾರು ವಿವರ:
ಕಾಸರಗೋಡು -39, ಪಿಲಿಕೋಡ್ -28, ಅಜಾನೂರ್ -26, ನಿಲೇಶ್ವರ -22, ಕಾಞಂಗಾಡ್ -18, ಚೆಮ್ನಾಡ್ -17, ಪಳ್ಳಿಕ್ಕೆರೆ -16, ಕೋಡೋಂ ಬೆಳ್ಳೂರು -15, ಬೇಡಡ್ಕ -13, ಕಿನಾನೂರ್ ಕರಿಂದಳ -11, ಪಡನ್ನ -9, ಉದುಮ -9, ವಲಿಯಪರಂಬ -9, ಕುತ್ತಿಕೋಲ್ -8, ವೆಸ್ಟ್ ಏಳೇರಿ -7, ಚೆಂಗಳ -7, ಮಧೂರು - 6, ಬಳಾಲ್ -6, ಬದಿಯಡ್ಕ - 5, ಚೆರ್ವತ್ತೂರ್ -4, ಮಂಗಲ್ಪಾಡಿ -4, ಪನತ್ತಡಿ -4, ದೇಲಂಪಾಡಿ - 3, ಕಾರಡ್ಕ -3, ಕುಂಬಳೆ -3, ಮುಳಿಯಾರ್ -3, ಕಯ್ಯೂರ್ ಚೀಮೆನಿ -3, ಈಸ್ಟ್ ಏಳೇರಿ -2, ಎಣ್ಮಕಜೆ -2, ಕಳ್ಳಾರ್ -2, ಮಡಿಕೈ -2, ಪುಲ್ಲೂರ್ ಪೆರಿಯಾ -2, ಮಂಗಳೂರು -1 (ಕರ್ನಾಟಕ), ಮೊಗ್ರಾಲ್ ಪುತ್ತೂರು -1, ತ್ರಿಕ್ಕರಿಪುರ -1 ಎಂಬಂತೆ ಸೋಂಕು ಬಾಧಿಸಿದೆ.
283 ಮಂದಿಗೆ ರೋಗಮುಕ್ತಿ:
ಕಾಞಂಗಾಡ್ -39, ಅಜಾನೂರ್ -28, ಪುಲ್ಲೂರ್ ಪೆರಿಯಾ -19, ಉದುಮ -17, ಚೆಮ್ನಾಡ್ -16, ನಿಲೇಶ್ವರ -15, ಪಳ್ಳಿಕ್ಕರ -13, ಕಯ್ಯೂರ್ ಚೀಮೇನಿ -13, ಮಂಗಲ್ಪಾಡಿ -12, ಕಾಸರಗೋಡು -11, ಚೆಂಗಳ -10, ಚೆರ್ವತ್ತೂರ್ -10, ಪಡನ್ನ -8, ಪಿಲಿಕೋಡ್ -7, ಮಂಜೇಶ್ವರ -7, ಮಧೂರು -6, ಮಡಿಕೈ -5, ಕಿನಾನೂರ್ ಕರಿಂದಳ -5, ಮುಳಿಯಾರ್ -5, ಮೊಗ್ರಾಲ್ ಪುತ್ತೂರು -4, ಬದಿಯಡ್ಕ -4, ಕಳ್ಳಾರ್ -4, ಕುಂಬಳೆ -3, ಕುತ್ತಿಕೋಲ್ -3, ಕೋಡೋಂ ಬೆಳ್ಳೂರ್ -3, ವಲಿಯಪರಂಬ -2, ತ್ರಿಕ್ಕರಿಪುರ -2, ಬಳಾಲ್ -2, ಬೇಡಡ್ಕ -2, ಬೆಳ್ಳೂರು -1, ದೇಲಂಪಾಡಿ -1, ಮೀಂಜ -1, ಪೈವಳಿಕೆ -1, ಪುತ್ತಿಗೆ -1, ಇತರ ಜಿಲ್ಲೆ
ಮಾಡಾಯಿ -1, ಈಶ್ವರಮಂಗಲ -1, ಕರಿವೆಳ್ಳೂರ್ -1 ಎಂಬಂತೆ ಗುಣಮುಖರಾಗಿದ್ದಾರೆ.
5052 ಮಂದಿ ನಿಗಾದಲ್ಲಿ:
ಜಿಲ್ಲೆಯಲ್ಲಿ ಒಟ್ಟು 5052 ಮಂದಿ ನಿಗಾದಲ್ಲಿದ್ದಾರೆ.4065 ಮಂದಿ ಮನೆಗಳಲ್ಲಿ ಹಾಗೂ 987 ಮಂದಿ ಸಾಂಸ್ಥಿಕ ನಿಗಾದಲ್ಲಿದ್ದಾರೆ.640 ಮಂದಿ ಹೊಸದಾಗಿ ನಿಗಾ ಪ್ರವೇಶಿಸಿದ್ದಾರೆ.212 ಮಂದಿ ಗುರುವಾರ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.ಸೆಂಟಿನಲ್ ಸರ್ವೈಲೆನ್ಸ್ ಸಹಿತ 1461 ಮಾದರಿಗಳನ್ನು ಹೊಸದಾಗಿ ತಪಾಸಣೆಗೆ ಕಳುಹಿಸಲಾಗಿದೆ.398 ಮಂದಿಯ ಪರೀಕ್ಷಾ ಫಲಿತಾಂಶ ಲಭಿಸಿಲ್ಲ.ಇಂದು 225 ಮಂದಿಯನ್ನು ಜಿಲ್ಲೆಯ ವಿವಿಧ ಆಸ್ಪತ್ರೆ ಹಾಗೂ ಕೋವಿಡ್ ಚಿಕಿತ್ಸಾ ಕೇಂದ್ರಗಳಲ್ಲಿ ದಾಖಲಿಸಲಾಗಿದೆ.ಆಸ್ಪತ್ರೆ ಹಾಗೂ ಕೋವಿಡ್ ಚಿಕಿತ್ಸಾ ಕೇಂದ್ರಗಳಲ್ಲಿ ದಾಖಲಾಗಿದ್ದ 355 ಮಂದಿಯನ್ನು ಬಿಡುಗಡೆಗೊಳಿಸಲಾದೆ.ಪ್ರಸ್ತುತ ಜಿಲ್ಲೆಯಲ್ಲಿ 3,626 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇವರಲ್ಲಿ 2,222 ಮಂದಿ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 15,860 ಮಂದಿಗೆ ಕೋವಿಡ್:
ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 15,860 ಮಂದಿಗೆ ಕೋವಿಡ್ ದೃಢಪಟ್ಟಿರುವುದಾಗಿ ಆರೋಗ್ಯ ಇಲಾಖೆಯ ವರದಿ ತಿಳಿಸಿದೆ. 14,262 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗಲಿದೆ.ಜಿಲ್ಲೆಯಲ್ಲಿ ಒಟ್ಟು 12,064 ಮಂದಿ ಕೋವಿಡ್ ರೋಗದಿಂದ ಮುಕ್ತರಾಗಿದ್ದಾರೆ.





