ತಿರುವನಂತಪುರ: ಕೇರಳದಲ್ಲಿ ಇಂದು 5,457 ಜನರಿಗೆ ಕೋವಿಡ್ ಖಚಿತವಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಕೋವಿಡ್ ಮಾಹಿತಿ ಬಿಡುಗಡೆಮಾಡಲಾಗಿದೆ.
ಜಿಲ್ಲಾವಾರು ಅಂಕಿಅಂಶಗಳು:
ತ್ರಿಶೂರ್ ಜಿಲ್ಲೆಯಲ್ಲಿ ಇಂದು ರಾಜ್ಯದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ 730 ಪ್ರಕರಣಗಳು ವರದಿಯಾಗಿವೆ. ಇತರ ಜಿಲ್ಲೆಗಳಲ್ಲಿ ಎರ್ನಾಕುಳಂ 716, ಮಲಪ್ಪುರಂ 706, ಆಲಪ್ಪುಳ 647, ಕೋಝಿಕೋಡ್ 597, ತಿರುವನಂತಪುರ 413, ಕೊಟ್ಟಾಯಂ 395, ಪಾಲಕ್ಕಾಡ್ 337, ಕೊಲ್ಲಂ 329, ಕಣ್ಣೂರು 258, ಪತ್ತನಂತಿಟ್ಟು 112, ವಯನಾಡ್ 103, ಕಾಸರಗೋಡು 65,ಇಡುಕ್ಕಿ 49 ಎಂಬಂತೆ ಸೋಂಕು ಬಾಧಿಸಿದೆ.
ಗುಣಮುಖರಾದವರ ವಿವರಗಳು:
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 7015 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 654, ಕೊಲ್ಲಂ 534, ಪತ್ತನಂತಿಟ್ಟು 153, ಆಲಪ್ಪುಳ 532, ಕೊಟ್ಟಾಯಂ 236, ಇಡುಕಿ 72, ಎರ್ನಾಕುಳಂ 914, ತ್ರಿಶೂರ್ 1103, ಪಾಲಕ್ಕಾಡ್ 188, ಮಲಪ್ಪುರಂ 993, ಕೊಝಿಕೋಡ್ 947, ವಯನಾಡ್ 111, ಕಣ್ಣೂರು 368 , ಕಾಸರಗೋಡು 210 ಎಂಬಂತೆ ಸೋಂಕು ಮುಕ್ತರಾದರು. ಇದರೊಂದಿಗೆ 92,161 ಜನರಿಗೆ ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 3,09,032 ಈವರೆಗೆ ಕೋವಿಡ್‌ನಿಂದ ಮುಕ್ತರಾಗಿದ್ದಾರೆ.
ಇಂದು 24 ಕೋವಿಡ್ ಸಾವುಗಳು:
ಇಂದು, ಕೋವಿಡ್ ಸೋಂಕಿನಿಂದ 24 ಮಂದಿ ಸಾವನ್ನಪ್ಪಿರುವುದು ದೃಪಟ್ಟಿದೆ. ತಿರುವನಂತಪುರ ನೆಟ್ಟಾಯಂನ ಅಬ್ದುಲ್ ರಹೀಮ್ (80), ಆನಂದ್‌ನ ಶ್ರೀಕುಮಾರ್ (60), ನೆಯ್ಯಾಟಿಂಗರದ ಮಣಿಕಂಠನ್ (42), ಕೊಲ್ಲಂ ನೀಂಡಕರದ ರಾಮಚಂದ್ರನ್ (84), ನೀಂಡಕರದ ವಲ್ಸಲಾ (70), ಪುತ್ಹಲತಳದ ಹರಿದಾಸ್ (75) , ಇಡುಕ್ಕಿ ತೊಟ್ಪುಳದ ತಂಗಮಣಿ(55)ಎರ್ನನಕುಳಂ ನ ಪೆರುಂಬ ವೂರಿನ ಕಮಲಂ ಕುಟ್ಟಪ್ಪನ್ (78),ಬಲಂಗಿಯಿಂದ ಟಿ.ಎಂ. ಶಾಮನ್ (44), ಮುಲಾವೂರಿನ ಮೊಯಿದೀನ್ (75), ವೆಂಗೂರ್ ಮೂಲದ ಕೆ.ಕೆ. ರಾಜನ್ (63),ತ್ರಿಶೂರ್ ಚೆಟ್್ಟಲಪಳಿಯ ಕೊಚ್ಚು
(62), ಚಾವಕ್ಕಾಡ್‌ನ ಮಾಗಿ (46), ಎರಮಪ್ಪೆಟ್ಟಿಯ ರಾಮೇಶ್ ಚಂದ್ರನ್ (67), ಪರಿಯಾರಂನ ಬಾಬು (47), ಕೊಡುಂಗಲ್ಲೂರಿನ ಜಮಾಲ್ (56), ಎರಮಪೆಟ್ಟಾದ ಫಾತಿಮಾ (70),ಪಾಲಕ್ಕಾಡ್ ಕೈರಾಡಿಯ ಖದೀಜಾ (65), ಮಲಪ್ಪುರಂ ಕುನ್ನಪ್ಪಳ್ಳಿಯ ಯೂಸುಫ್ (65), ಕೋ ಝಿಕೋಡ್‌ನ ಕೂರಚುಂಡ್‌ನ ವೆಲ್ಲನ್ (80),ಕುದಿರೆವೆಟ್ಟದ ಕಮಲಾಕ್ಷಿ ಅಮ್ಮ(91),ಕಣ್ಣೂರು ಪರಿಯಾರಂನ ಪದ್ಮನಾಭನ್(65),ನಾರಾತ್ ನ ಎ ವಿ ಆಯಿಷಾ(65),ಕಾಸರಗೋಡು ಮುಳ್ಳೇರಿಯಾದ ಸಮೀರ(36)ಎಂಬವರು ಕೋವಿಡ್ ನಿಂದ ಮ್ರತಪಟ್ಟವರಾಗಿದ್ದಾರೆ.1376 ಮಂದಿ ಕೋವಿಡ್ ನಿಂದ ಈವರೆಗೆ ರಾಜ್ಯದಲ್ಲಿ ಮ್ರತಪಟ್ಟಿದ್ದಾರೆ.




