HEALTH TIPS

ಎಡನೀರಿನ ನೂತನ ಮಠಾಧೀಶರಾದ ಶ್ರೀಸಚ್ಚಿದಾನಂದ ಭಾರತಿಗಳಿಗೆ ಭವ್ಯ ಸ್ವಾಗತದೊಂದಿಗೆ ನೆರವೇರಿದ ಪುರಪ್ರವೇಶ-ಇಂದು ಪೀಠಾರೋಹಣ

   

      ಕಾಸರಗೋಡು: ಕಾಸರಗೋಡು ಜಿಲ್ಲೆಯ ಎಡನೀರು ಮಠದ ನೂತನ ಮಠಾಧೀಶರಾಗಿ ನಿಯುಕ್ತಿಗೊಂಡಿರುವ ಶ್ರೀಸಚ್ಚಿದಾನಂದ ಭಾರತಿಗಳು ಸೋಮವಾರ ಕಾಂಚಿ ಪೀಠದಲ್ಲಿ ದೀಕ್ಷೆ ಸ್ವೀಕರಿಸಿ ಮಂಗಳವಾರ ಎಡನೀರು ಪುರರಪ್ರವೇಶ ನಡೆಸಿದರು.

    ಸೋಮವಾರ ಕಾಂಚಿ ಜಗದ್ಗುರು ಪೀಠದಲ್ಲಿ ನಡೆದ ಸಮಾರಂಭದಲ್ಲಿ ಭಾರತಿ ವಿಜಯೇಂದ್ರ ಸರಸ್ವತಿಗಳು ವಿದ್ಯುಕ್ತವಾಗಿ ದೀಕ್ಷೆ ನೀಡಿದರು. ಬಳಿಕ ಸಂಜೆ ಬೆಂಗಳೂರಲ್ಲಿರುವ ಶಾಖಾ ಮಠಕ್ಕೆ ಚಿತ್ರೈಸಿ ತಂಗಿದರು. ಮುಂಜಾನೆ ಬೆಂಗಳೂರಿನಿಂದ ಹೊರಟು ಮಂಗಳವಾರ ಮಧ್ಯಾಹ್ನ 12ರ ವೇಳೆಗೆ ಶ್ರೀಗಳು ಎಡನೀರಿಗೆ ಆಗಮಿಸಿದರು. ಈ ವೇಳೆ ಭವ್ಯ ಸ್ವಾಗತ ನೀಡಲಾಯಿತು. ಪುರಪ್ರವೇಶದ ಬಳಿಕ ಪಟ್ಟದ ದೇವರ ಪೂಜೆ, ಬಳಿಕ ಎಡನೀರು ವಿಷ್ಣುಮಂಗಲ ದೇವಸ್ಥಾನ ಭೇಟಿ, ನವಗ್ರಹ ಶಾಂತಿ ಹವನದ ಪೂರ್ಣಾಹುತಿಯಲ್ಲಿ ಭಾಗವಹಿಸಿ ಮರಳಿ ಮಠಕ್ಕೆ ಹಿಂತಿರುಗಿದರು. 


      ಈ ವೇಳೆ ತಂತ್ರಿವರ್ಯರು, ವೈದಿಕರು, ಸಂಸದ ರಾಜಮೋಹನ ಉಣ್ಣಿತ್ತಾನ್, ಉದುಮ ಶಾಸಕ ಕೆ.ಕುಂಞÂ ರಾಮನ್, ಮುರಳೀ ತಂತ್ರಿ, ರವೀಶ ತಂತ್ರಿ ಕುಂಟಾರು, ಶ್ರೀಶದೇವ ಪೂಜಿತ್ತಾಯ, ಪೀಠಾರೋಹಣ ಸಮಿತಿ ಕಾರ್ಯಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಮೊದಲಾದವರು ಉಪಸ್ಥಿತರಿದ್ದರು.  

   ಇಂದು ಪೀಠಾರೋಹಣ:

   ಶ್ರೀಸಚ್ಚಿದಾಂದ ಭಾರತಿಗಳ ಪೀಠಾರೋಹಣ ವಿಧಿ ವಿಧಾನಗಳು ಇಂದು ನಡೆಯಲಿದೆ. ಬೆಳಿಗ್ಗೆ ಗಣಪತಿ ಹವನ, ಚಂಡಿಕಾ ಹೋಮ, ಪಟ್ಟದ ದೇವರಿಗೆ ಪೂಜೆ, ಅಭಿಷೇಕ ಪೂಜೆ, ಬೆಳಿಗ್ಗೆ 10 ರ ಬಳಿಕ ಪೀಠಾರೋಹಣ, ಮಧ್ಯಾಹ್ನ ಮಧ್ಯಾಹ್ನ ಮಹಾಪೂಜೆ ನಡೆಯಲಿದೆ. ಸಮಾರಂಭದಲ್ಲಿ ನಾಡಿನ ಉದ್ದಗಲದ ವಿವಿಧ ಮಠಾಧೀಶರು, ಧಾರ್ಮಿಕ, ಸಾಂಸ್ಕøತಿಕ, ಸಾಮಾಜಿಕ ಮುಂದಾಳುಗಳು ಪಾಲ್ಗೊಳ್ಳಲಿದ್ದು, ಸರ್ಕಾರದ ಕೋವಿಡ್ ಮಾನದಂಡಗಳಿಗೆ ಅನುಗುಣವಾಗಿ ಕಾರ್ಯಕ್ರಮಗಳು ಇರಲಿವೆ ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries