HEALTH TIPS

ಮತಗಟ್ಟೆಗಳಿಗೆ ಆಹಾರ ಪೂರೈಕೆ ನಡೆಸಲಿರುವ ಕುಟುಂಬಶ್ರೀ

    ಕಾಸರಗೋಡು: ಮತಗಟ್ಟೆಗಳ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಕುಟುಂಬಶ್ರೀ ಮಿತ ದರದಲ್ಲಿ ಆಹಾರ ಪೂರೈಕೆ ನಡೆಸಲಿದೆ. 

          ಕಾಸರಗೋಡು ಜಿಲ್ಲೆಯ 1409 ಮತಗಟ್ಟೆಗಳಿಗೂ ಆಹಾರ ಪೂರೈಕೆ ನಡೆಸುವ ದೌತ್ಯವನ್ನು ಕುಟುಂಬಶ್ರೀ ವಹಿಸಿಕೊಂಡಿದೆ. ಇದಕ್ಕೆ ಸರ್ವ ರೀತಿಯ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಚಾಲಕ ಟಿ.ಟಿ.ಸುರೇಂದ್ರನ್ ತಿಳಿಸಿದರು. 

     ಡಿ.13ರ ಸಂಜೆ ವೇಳೆಗೆ ಸಿಬ್ಬಂದಿ ಮತಗಟ್ಟೆಗಳಿಗೆ ತಲಪಲಿದ್ದಾರೆ. ಇವರಿಗೆ 20 ರೂ.ಗೆ ಚಹಾ, ಲಘು ಉಪಹಾರ, 50 ರೂ.ಗೆ ರಾತ್ರಿಯ ಭೋಜನ ತಲಪಲಿದೆ. ಮತದಾನದ ದಿನ ಬೆಳಗ್ಗೆ ಚಹಾ/ಕಾಫಿ, ಇಡ್ಲಿ, ಸಾಂಬಾರ್ 40 ರೂ. ದರದಲ್ಲಿ ಲಭ್ಯವಿದೆ. ಬೆಳಗ್ಗೆ 11 ಗಂಟೆಗೆ ಮತ್ತು ಮಧ್ಯಾಹ್ನ 3 ಗಂಟೆಗೆ 20 ರೂ. ದರದಲ್ಲಿ ಚಹಾ ಮತ್ತು ಲಘು ಉಪಹಾರ ಲಭ್ಯವಿರುವುದು. ಮಧ್ಯಾಹ್ನ 40 ರೂ.ಗೆ ಭೋಜನ / ಸಸ್ಯಾಹಾರಿ ಬಿರಿಯಾನಿ ಲಭಿಸಲಿದೆ. ಸಿಬ್ಬಂದಿ ಮತಗಟ್ಟೆಗಳಿಗೆ ಆಗಮಿಸುವುದರಿಂದ ತೊಡಗಿ ಮರಳುವ ವರೆಗೆ 200 ರೂ. ದರದಲ್ಲಿ ಕುಟುಂಬಶ್ರೀ ಆಹಾರ ಪೂರೈಕೆ ಮಾಡಲಿದೆ. 

          ಕುಟುಂಬಶ್ರೀ ಕೆಫೆ:

  ಪೋಲಿಂಗ್ ಸಾಮಾಗ್ರಿಗಳ ವಿತರಣೆ ನಡೆಸುವ ಕಾಸರಗೋಡು ಜಿಲ್ಲೆಯ 8 ಕೇಂದ್ರಗಳ ಹೊರಬದಿಯಲ್ಲಿ ಕುಟುಂಬಶ್ರೀ ಕೆಫೆ ಚಟುವಟಿಕೆ ನಡೆಸಲಿವೆ. ಇಲ್ಲಿ ಸಿಬ್ಬಂದಿಗಾಗಿ ಮಿತ ದರದಲ್ಲಿ ಆಹಾರ ಲಭ್ಯವಿರುವುದು. ಬೆಳಗ್ಗಿನ ಆಹಾರ, ಚಹಾ,  ಲಘು ಉಪಹಾರ, ಜ್ಯೂಸ್, ಮಧ್ಯಾಹ್ನದ ಭೋಜನ ಇತ್ಯಾದಿ ಇಲ್ಲಿ ಲಭ್ಯವಾಗಲಿವೆ. ಮತಗಣನೆಯ ದಿನವೂ ಮತ ಎಣಿಕೆ ಕೇಂದ್ರ ಗಳ ಬಳಿ ಕುಟುಂಬಶ್ರೀ ಕೆಫೆ ಮೂಲಕ ಆಹಾರ ಲಭಿಸಲಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries