HEALTH TIPS

ಚುನಾವಣೆ: ಮತಗಟ್ಟೆಗಳ ಸಾಮಾಗ್ರಿಗಳ ವಿತರಣೆ ಪೂರ್ಣ

        ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಡಿ.14ರಂದು ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ನಡೆಯಲಿದ್ದು, ಈ ಸಂಬಂಧ ಮತಗಟ್ಟೆಗಳಿಗೆ ಅಗತ್ಯವಿರುವ ಸಾಮಾಗ್ರಿಗಳ ವಿತರಣೆ ಭಾನುವಾರ ಪೂರ್ಣ ಪ್ರಮಾಣದಲ್ಲಿ ಜರುಗಿತು.  

         ಬ್ಲೋಕ್, ನಗರಸಭೆ ತಳಹದಿಯಲ್ಲಿ ಜಿಲ್ಲೆಯ 8 ಕೇಂದ್ರಗಳಲ್ಲಿ ಈ ವಿತರಣೆ ಪ್ರಕ್ರಿಯೆ ಜರುಗಿತು. ಕಾಸರಗೊಡು ಬ್ಲೋಕ್ ವ್ಯಾಪ್ತಿಯ ಪಂಚಾಯತ್ ಗಳ, ಕಾಸರಗೋಡು ನಗರಸಭೆಯ ಪೆÇೀಲಿಂಗ್ ಸಾಮಾಗ್ರಿಗಳ ವಿತರಣೆ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ, ಕಾಞಂಗಾಡ್ ನಗರಸಭೆಯ ಪೆÇೀಲಿಂಗ್ ಸಾಮಾಗ್ರಿಗಳ ವಿತರಣೆ ಹೊಸದುರ್ಗ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ, ಕಾಞಂಗಾಡ್ ಬ್ಲೋಕ್ ವ್ಯಾಪ್ತಿಯ ಪೆÇೀಲಿಂಗ್ ಸಾಮಾಗ್ರಿಗಳ ವಿತರಣೆ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯಲ್ಲೂ, ಮಂಜೇಶ್ವರ ಬ್ಲೋಕ್ ವ್ಯಾಪ್ತಿಯ ಮತಗಟ್ಟೆಗಳ ಸಾಮಾಗ್ರಿಗಳು ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲೂ, ಕಾರಡ್ಕ ಬ್ಲೋಕ್ ವ್ಯಾಪ್ತಿಯ ಮತಗಟ್ಟೆಗಳ ಸಾಮಾಗ್ರಿಗಳ ವಿತರಣೆ ಬೋವಿಕ್ಕಾನ ಬಿ.ಆರ್.ಎಚ್.ಎಸ್.ಎಸ್.ನಲ್ಲೂ, ನೀಲೇಶ್ವರ ನಗರಸಭೆ ವ್ಯಾಪ್ತಿಯ ಮತಗಟ್ಟೆಗಳ ಸಾಮಾಗ್ರಿಗಳ ವಿತರಣೆ ರಾಜಾಸ್ ಹೈಯರ್ ಸೆಕೆಂಡರಿ ಶಾಲೆಯಲ್ಲೂ, ನೀಲೇಶ್ವರ ಬ್ಲೋಕ್ ವ್ಯಾಪ್ತಿಯ ಮತಗಟ್ಟೆಗಳ ಸಾಮಾಗ್ರಿ ವಿತರಣೆ ಪಡನ್ನಕ್ಕಾಡ್ ಕಾಲೇಜಿನಲ್ಲೂ ಜರುಗಿತು. 


       ಕೋವಿಡ್ ಕಾಲಾವಧಿಯ ಹಿನ್ನೆಲೆಯಲ್ಲಿ ಜನಸಂದಣಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಬೆಳಗ್ಗೆ 8 ರಿಂದ 9.30 ವರೆಗೆ, 9.30ರಿಂದ 11 ಗಂಟೆ ವರೆಗೆ, 11 ರಿಂದ 12.30 ವರೆಗೆ ಎಂಬ ಮೂರು ಹಂತಗಳಲಲಿ ಸಾಮಾಗ್ರಿಗಳ ವಿತರಣೆ ಜರುಗಿತು. ಎಲ್ಲ ವಿತರಣೆ ಕೇಂದ್ರಗಳಲ್ಲೂ ಅಗತ್ಯವಿರುವ ಮಂದಿಗಾಗಿ ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಆಂಟಿಜೆನ್ ಟೆಸ್ಟ್ ಕೌಂಟರ್ ಸಿದ್ಧಪಡಿಸಲಾಗಿತ್ತು. ಚುನಾವಣೆ ಸಿಬ್ಬಂದಿಗೆ ಆಹಾರ ಪೂರೈಕೆಯ ಹೊಣೆಯನ್ನು ಕುಟುಂಬಶ್ರೀ ವಹಿಸಿಕೊಂಡಿತ್ತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries