ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಡಿ.14ರಂದು ಕಾಸರಗೋಡು ಜಿಲ್ಲೆಯಲ್ಲಿ ನಡೆಯಲಿದ್ದು, ತಾಸುಗಳಷ್ಟೇ ಉಳಿದುಕೊಂಡಿದೆ. ಮತಗಟ್ಟೆಗಳ ಸಜ್ಜೀಕರಣ ಅವಲೋಕನ ನಡೆಸುವ ನಿಟ್ಟಿನಲ್ಲಿ ಚುನಾವಣೆ ನಿರೀಕ್ಷಕ ನರಸಿಂಹುಗಾರಿ ಟಿ.ಎಲ್.ರೆಡ್ಡಿ ಅವರು ಭಾನುವಾರ ಭೇಟಿ ನೀಡಿದರು.
ನಾಳೆ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಳ್ಳಲಿದ್ದು, ಅದರ ಪೂರ್ವಭಾವಿಯಾಗಿ ಮೋಕ್ಪೋಲ್ ನಡೆಯಲಿದೆ. ಬ್ಲೋಕ್, ನಗರಸಭೆ ತಳಹದಿಯಲ್ಲಿ ಜಿಲ್ಲೆಯ 8 ಕೇಂದ್ರಗಳಿಂದ ಸಾಮಾಗ್ರಿಗಳನ್ನು ಮತಗಟ್ಟೆಗಳಿಗಾಗಿ ವಿತರಣೆ ನಡೆಸಲಾಗಿತ್ತು.


