ಕಾಸರಗೋಡು: ಆಗ್ರಾದ ಬ್ರಿಜ್ ಲೋಕ್ ಸಾಹಿತ್ಯ ಕಲಾ ಸಂಸ್ಕøತಿ ಅಕಾಡಮಿಯ ಕಲಾ ಜ್ಯೋತಿ ಪುರಸ್ಕಾರಕ್ಕೆ ಪೆರಿಯದ ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಸುಪ್ರಿಯಾ ಪಿ. ಅರ್ಹರಾಗಿದ್ದಾರೆ. ಇವರು ಹಿಂದಿ ಸಾಹಿತ್ಯಕ್ಕೆ ಸಲ್ಲಿಸಿದ ಕೊಡುಗೆ ಮನ್ನಿಸಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಕೋಯಿಕ್ಕೋಡ್ ನಿವಾಸಿಯಾಗಿರುವ ಇವರು ಹಲವಾರು ಹಿಂದಿ ಪುಸ್ತಕಗಳನ್ನು ಬರೆದಿದ್ದಾರೆ. ಅಖಿಲ ಭಾರತೀಯ ಕವಯಿತ್ರಿಯರ ಸಮ್ಮೇಳನ, ರಾಜಸ್ಥಾನ್ ನಾಥ್‍ದ್ವಾರ ಸಾಹಿತ್ಯ ಮಂಡಲ್‍ನ ಪುರಸ್ಕಾರವನ್ನೂ ಪಡೆದುಕೊಂಡಿದ್ದರು.





