ಕಾಸರಗೋಡು: ಯಕ್ಷಗಾನದ ಉಗಮ, ಬೆಳವಣಿಗೆ, ವೇಷಭೂಷಣಗಳ ಸಮಗ್ರ ಮಾಹಿತಿಯನ್ನೊಳಗೊಂಡ ಜಯರಾಜನ್ ಕಾನಾಡಿ ಅವರ'ಯಕ್ಷಗಾನ ಬಯಲಾಟ'ಕೃತಿಯನ್ನು ಕಾಞಂಗಾಡಿನಲ್ಲಿ ಬುಧವಾರ ಬಿಡುಗಡೆಗೊಳಿಸಲಾಯಿತು.
ಜಿಲ್ಲಾ ಗ್ರಂಥಾಲಯ ಮಂಡಳಿ ಅಭಿವೃದ್ಧಿ ಸಮಿತಿ ವತಿಯಿಂದ ಕಾಞಂಗಾಡ್ ಅಲಾಮಿಪಳ್ಳಿ ನೂತನ ಬಸ್ ನಿಲ್ದಾಣದಲ್ಲಿ ನಡೆಯುತ್ತಿರುವ ಪುಸ್ತಕೋತ್ಸವ ಕಾರ್ಯಕ್ರಮದಲ್ಲಿ ಕೃತಿಬಿಡುಗಡೆ ಆಯೋಜಿಸಲಾಗಿತ್ತು. ಸಾಹಿತಿ, ಸಾಮಾಜಿಕ ಹೋರಾಟಗಾರ ಡಾ. ಅಂಬಿಕಾಸುತನ್ ಮಾಙËಡ್ ಪುಸ್ತಕ ಬಿಡುಗಡೆಗೊಳಿಸಿದರು.
ತುಳು, ಕನ್ನಡ, ಮಲಯಾಳ ಭಾಷೆಯಲ್ಲಿನ ಯಕ್ಷಗಾನದ ಸವಿಶೇಷತೆಗಳು, ಮಲಯಾಳದಲ್ಲಿ ಯಕ್ಷಗಾನದ ಪ್ರಸಂಗದ ಬಗ್ಗೆ ಕೃತಿಯಲ್ಲಿ ಸಮಗ್ರ ಮಾಹಿತಿ ಒದಗಿಸಲಾಗಿದೆ. ಕೃತಿರಚನಾಕಾರ ಜಯರಾಜನ್ ಅವರು ಕುಂಡಂಗುಳಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಲಯಾಳ ಉಪನ್ಯಾಸಕರಾಗಿದ್ದು, ಯಕ್ಷಗಾನದ ಬಗ್ಗೆ ಹೆಚ್ಚಿನ ಅಧ್ಯಯನವನ್ನೂ ನಡೆಸಿದ್ದಾರೆ. ಕಾಞಂಗಾಡು ನಗರಸಭಾ ಅಧ್ಯಕ್ಷೆ ಸುಜಾತಾ, ಪಿ.ವಿ.ಕೆ ಪನಯಾಲ್, ಜಿಲ್ಲಾ ಗ್ರಂಥಾಲಯ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಕೆ.ವಿ ಕುಞÂರಾಮನ್, ವಕೀಲ ಕೆ.ಅಪ್ಪುಕುಟ್ಟನ್, ಪಿ. ಪ್ರಭಾಕರನ್ ಉಪಸ್ಥೀತರಿದ್ದರು. ಕೈರಳಿ ಪ್ರಕಾಶನ ಸಂಸ್ಥೆ ಪುಸ್ತಕ ಹೊರತಂದಿದೆ.






