ಕಾಸರಗೋಡು: ಕೇರಳ ವಿಧಾನಸಭೆಗೆ 2021ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಮುಖ್ಯ ಮಂತ್ರಿ ಅಥವಾ ಪ್ರತಿಪಕ್ಷ ನಾಯಕ ಸ್ಥಾನ ಲಭಿಸದು ಎಂದು ಬಿಜೆಪಿ ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷ ಎ.ಪಿ ಅಬ್ದುಲ್ಲ ಕುಟ್ಟಿ ತಿಳಿಸಿದ್ದಾರೆ. ಅವರು ಭಾನುವಾರ ಕಾಞಂಗಾಡಿನಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಚುನಾವಣೆಯಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಲಿದ್ದು, ಇದಕ್ಕಾಗಿ ಊಮನ್‍ಚಾಂಡಿಗೆ ಚುನಾವಣಾ ಪ್ರಚಾರದ ಹೊಣೆ ವಹಿಸಿಕೊಡಲಾಗಿದೆ. ಜಮಾತೆ ಇಸ್ಲಾಮಿ ವಿರುದ್ಧ ಕಾಂಗ್ರೆಸ್‍ನ ವಿರೋಧ ಕಪಟತನದ್ದಾಗಿದ್ದು, ಕಣ್ಣೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಇವರ ಸಹಾಯದಿಂದಲೇ ಚುನಾವಣೆ ಎದುರಿಸಿದ್ದಾರೆ ಎಂದು ತಿಳಿಸಿದರು.
ಕಾಞಂಗಾಡು ಮಂಡಲ ಸಮಿತಿ ಅಧ್ಯಕ್ಷ ಎನ್. ಮಧು ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಎ.ವೇಲಾಯುಧನ್, ಎಂ. ಬಲರಾಜ್, ರಾಯಿ ಜೋಸೆಫ್, ಓಬಿಸಿ ಮೋರ್ಚಾ ಜಿಲ್ಲಾ ಸಮಿತಿ ಅಧ್ಯಕ್ಷ ಪ್ರೇಮ್‍ರಾಜ್ ಉಪಸ್ಥಿತರಿದ್ದರು. ಎಂ. ಪ್ರಶಾಂತ್ ಸ್ವಾಗತಿಸಿದರು. ಕೆ.ಕೆ ವೇಣುಗೋಪಾಲ್ ವಂದಿಸಿದರು.


